Thursday, January 23, 2025

ಟಿಪ್ಪು ಸುಲ್ತಾನ್ ಕಾಲದಲ್ಲಿ ಲಕ್ಷಾಂತರ ಕೊಡಗಿನ ಜನರ ಕೊಲೆ.!

ವಿಜಯಪುರ: ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಅವಕಾಶ ನೀಡಿದರೆ ಹೆಣ ಬೀಳುತ್ತದೆ ಎಂಬ ರಾಜ್ಯಸಭಾ ಸದಸ್ಯ ಜಗ್ಗೇಶ ಹೇಳಿಕೆಯನ್ನ ವಿಜಯಪುರ ನಗರ ಶಾಸಕ ಬನಗೌಡ ಯತ್ನಾಳ್ ಸಮರ್ಥನೆ ಮಾಡಿಕೊಂಡಿದ್ದಾರೆ.

ನಿಮ್ಮ ಪ್ರಕಾರ ಅದು ವಿವಾದಾತ್ಮಕ ಇರಬೇಕು. ಟಿಪ್ಪು ಸುಲ್ತಾನ್ ಕಾಲದಲ್ಲಿ ಲಕ್ಷಾಂತರ ಕೊಡಗಿನ ನಾಗರೀಕರ ಕೊಲೆಯಾಗಿದೆ. ಕೊಡಗಿನಲ್ಲಿ ಸಂಧಾನಕ್ಕೆ ಕರೆದ ಟಿಪ್ಪು ಸುಲ್ತಾನ್ ಮೋಸ ಮಾಡಿದ್ದ. ಜೊತೆಗಿರುವೆ ಎಂದು ಹೇಳಿ ಕರೆದು ಜನರನ್ನು ಹತ್ಯೆ ಮಾಡಿದ್ದಾನೆ, ಆದ ಕಾರಣ ಕೊಡಗಿನ ಜನರಲ್ಲಿ ಟಿಪ್ಪು ಬಗ್ಗೆ ದ್ವೇಷವಿದೆ ಎಂದರು.

ಇನ್ನು ಜನರಲ್ ಕಾರ್ಯಪ್ಪನಂಥ ಶ್ರೇಷ್ಠ ದಂಡನಾಯಕ ರನ್ನು ಕೊಟ್ಟಿದ್ದು ಕೊಡಗು ಜಿಲ್ಲೆ ಕೊಟ್ಟಿದೆ. ಕೊಡಗಿನ ಜಿಲ್ಲೆಯ ಜನರಿಗೆ ನೋವಾಗಿದ್ದನ್ನು ನಾವು ಗೌರವಿಸಬೇಕು. ಅದರಂತೆ ನಾವೆಲ್ಲಾ ನಡೆಯಬೇಕೆಂದು ಯತ್ನಾಳ ಹೇಳಿದರು.

RELATED ARTICLES

Related Articles

TRENDING ARTICLES