Sunday, December 22, 2024

ನದಿಯಲ್ಲಿ ತೇಲಿಹೋದ ಲಾರಿ: ಐವರ ರಕ್ಷಣೆ, ಇನ್ನೊರ್ವನಿಗೆ ಶೋಧ ಕಾರ್ಯ

ಉತ್ತರ ಕನ್ನಡ: ಜಿಲ್ಲೆಯ ಗಂಗಾವಳಿ ನದಿಯಲ್ಲಿ ಲಾರಿ ತೇಲಿಹೋದ ಘಟನೆ ಇಂದು ನಡೆದಿದೆ. ಲಾರಿಯಲ್ಲಿದ್ದ ಒಟ್ಟು ಆರು ಜನರಲ್ಲಿ ಐವರನ್ನ ರಕ್ಷಣೆ ಮಾಡಲಾಗಿದೆ.

ಜಿಲ್ಲೆಯ ಯಲ್ಲಾಪುರ ತಾಲೂಕಿನ ಪನಸಗುಳಿಯಲ್ಲಿ ಬರುವ ಗಂಗವಳಿ ನದಿ, ಯಲ್ಲಾಪುರದಿಂದ ಪಣಸಗುಳಿಗೆ ಚೀರೇಕಲ್ಲು ಸಾಗಿಸಿ ಮರಳಿ ಬರುವಾಗ ನೀರಿನ ಸೆಳತಕ್ಕೆ ಲಾರಿ ತೇಲಿಹೋಗಿದೆ. ಈ ವೇಳೆ ನೀರಿನಲ್ಲಿ ಸಿಲುಕಿರುವ ಐವರನ್ನ ರಕ್ಷಣೆ ಮಾಡಲಾಗಿದ್ದು, ಇನ್ನೊರ್ವನ ರಕ್ಷಣೆಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗಿದೆ.

ಪಣಸಗುಳಿಯ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಲಾಗಿತ್ತು. ತಾತ್ಕಾಲಿಕ ಸೇತುವೆಯಲ್ಲಿ ನದಿ ನೀರು ಹರಿಯುತಿದ್ದರಿಂದ ಘಟನೆ ಸಂಭವಿಸಿದೆ. ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯುತಿದ್ದರೂ ಚಾಲಕ ನಿರ್ಲಕ್ಷ್ಯ ವಹಿಸಿ ಲಾರಿ ಕೊಂಡೊಯ್ದಿದ್ದಾನೆ.

RELATED ARTICLES

Related Articles

TRENDING ARTICLES