Wednesday, January 22, 2025

ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ನಿಧನ

ಗೋವಾದಲ್ಲಿ ನಿನ್ನೆ ರಾತ್ರಿ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ತಮ್ಮ ಕೆಲವು ಸಿಬ್ಬಂದಿ ಜೊತಗೆ ಗೋವಾಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಸೋನಾಲಿ ಫೋಗಟ್ ಬಿಗ್ ಬಾಸ್ 14 ರಲ್ಲಿ ಕಾಣಿಸಿಕೊಂಡರು. ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ್ದರು. ನಂತರ ಅವರು ಅಪಾರ ಜನಪ್ರಿಯತೆಯನ್ನು ಗಳಿಸಿದರು.

ಸೋನಾಲಿ ಫೋಗಟ್ ಕೂಡ ಬಿಜೆಪಿ ನಾಯಕಿಯಾಗಿದ್ದರು. ಅವರು 2019 ರ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಆದಂಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬದಲಾದ ಕುಲದೀಪ್ ಬಿಷ್ಣೋಯ್ ವಿರುದ್ಧ ಅವರು ಸ್ಪರ್ಧಿಸಿದ್ದರು. ಸೋನಾಲಿ ಟಿಕ್‌ ಟಾಕ್‌ ನಲ್ಲೂ ಸಹ ಜನಪ್ರಿಯತೆಯನ್ನ ಹೊಂದಿದ್ದರು.

RELATED ARTICLES

Related Articles

TRENDING ARTICLES