Monday, December 23, 2024

BMTC ಡ್ರೈವರ್​​ಗಳಿಗೆ ಮತ್ತೆ ಮತ್ತೆ ಶಾಕ್ ಮೇಲೆ ಶಾಕ್..!

ಬೆಂಗಳೂರು : ಸ್ಮಾರ್ಟ್​ ಸಿಟಿ ಯೋಜನೆ ಅಡಿಯಲ್ಲಿ ಹಂತ ಹಂತವಾಗಿ ಎಲೆಕ್ಟ್ರಿಕ್ ಬಸ್ ಗಳನ್ನ ಖರೀದಿ ಮಾಡಿರುವ ಬಿಎಂಟಿಸಿ ಬಸ್​​ಗಳ ಸಂಖ್ಯೆ ಹೆಚ್ಚಳವಾದ ಕಾರಣದಿಂದ ಚಾಲಕರಿಗೆ ನಿಗಮ ದಿಂದ ಗೇಟ್ ಪಾಸ್ ನೀಡಲಾಗಿದೆ.

ಡ್ರೈವರ್ಗಳಿಗೆ ಶಾಕ್ ನೀಡೋಕೆ ಎಲೆಕ್ಟ್ರಿಕ್ ಬಸ್​ಗಳು ಬೀದಿಗಿಳಿಯುತ್ತಿದ್ದು, 921 ಎಲೆಕ್ಟ್ರಿಕ್ ಬಸ್ ಗಳ ಖರೀದಿಯಿಂದ ಡ್ರೈವರ್ ಗಳ ಕೆಲಸಕ್ಕೆ ಕುತ್ತು ಬಂದಿದೆ. ಡ್ರೈವರ್ಗಳ ಪಾಲಿಗೆ ಕಂಟಕ ಆಗೇ ಬಿಡ್ತಾ ಎಲೆಕ್ಟ್ರಿಕ್ ಬಸ್..,? ಎಲೆಕ್ಟ್ರಿಕ್ ಬಸ್​​ಗಳಿಗೆ ಖಾಸಗಿ ಸಂಸ್ಥೆ ಡ್ರೈವರ್ಗಳೇ ನೇಮಕಗೊಂಡಿದ್ದಾರೆ. ಹೀಗಾಗಿ ಮತ್ತೆ ಎಲೆಕ್ಟ್ರಿಕ್ ಬಸ್ಗಳ ಖರೀದಿಯಿಂದ ಡ್ರೈವರ್ಗಳ ಕೆಲಸ ಕೆಳೆದುಕೊಳ್ಳುವ ಭೀತಿ ಎದುರಾಗಿದೆ.

ಇನ್ನು, ಮೊದಲು ಹಾಗೂ ಎರಡನೇ ಬ್ಯಾಚ್​​​ನಲ್ಲಿ ಖರೀದಿ ಮಾಡಿರೋ ಬಸ್​​​ಗಳಿಗೆ ಕಂಡಕ್ಟರ್ ಮಾತ್ರ ಬಿಎಂಟಿಸಿಯವರು ಡ್ರೈವರ್ ಖಾಸಗಿಯವರಾಗಿದ್ದು, ಇದೀಗ ಮೂರನೇ ಹಂತದಲ್ಲಿ ಬರಲಿರೋ 921 ಬಸ್​​ಗಳಿಗೂ ಖಾಸಗಿಯವರೇ ಡ್ರೈವರ್ಗಳು ನೇಮಕಗೊಂಡಿದ್ದಾರೆ.

ಬಿಎಂಟಿಸಿ ಒಳಗೆ ಎಲೆಕ್ಟ್ರಿಕ್ ಬಸ್​​ಗಳ ಮೂಲಕ ಖಾಸಗೀಕರಣದ ಭೂತವನ್ನು ಬಿಟ್ಟ ಸರ್ಕಾರ ಎಲೆಕ್ಟ್ರಿಕಲ್ ಬಸ್​​ಗಳನ್ನು ರಸ್ತೆಗಿಳಿಸೋದ್ರ ಮೂಲಕ ಖಾಸಗೀಕರಣ ಎಂಟ್ರಿಕೊಟ್ಟಿದೆ. ಬಿಎಂಟಿಸಿಯೊಳಗೆ ಖಾಸಗೀಕರಣದಿಂದ ಡ್ರೈವರ್​​ಗಳಿಗೆ ಆಪತ್ತು ಬಂದಿದ್ದು, ಹಂತ ಹಂತವಾಗಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್​​​ಗಳು ಡ್ರೈವರ್​​ಗಳ ಕೆಲಸ ಕಿತ್ತುಕೊಳ್ತಿವೆ.

RELATED ARTICLES

Related Articles

TRENDING ARTICLES