Monday, December 23, 2024

ಶಿವ 143 ಟ್ರೈಲರ್ ಧಮಾಕ.. ಓಂ ಫ್ಲೇವರ್​​​​​​ನಲ್ಲಿ ಧೀರೇನ್

ಚೊಚ್ಚಲ ಸಿನಿಮಾದಲ್ಲೆ ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡಿರೋ ನಟ ಧೀರೇನ್​​​. ಡಾ. ರಾಜ್​​ ಕುಟುಂಬದ ಕುಡಿ ಧೀರೇನ್​ ರಾಮ್​​​​​ಕುಮಾರ್​​ ಶಿವನಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. ಈ ಸಿನಿಮಾದ ಟ್ರೈಲರ್​ ರಿಲೀಸ್​ ಆಗಿದ್ದು, ಸಿಲ್ವರ್​ ಸ್ಕ್ರೀನ್​ ಮೇಲೆ ಅಬ್ಬರಿಸೋ ಮುನ್ಸೂಚನೆ ಕೊಟ್ಟಿದೆ. ಹೇಗಿದೆ ಶಿವನ ಉಗ್ರವತಾರ ಅಂತೀರಾ..? ಈ ಸ್ಟೋರಿ ಓದಿ.

ಶಿವನ ಪ್ಯೂರ್​​ ಲವ್​ ಸ್ಟೋರಿ.. ಖಡಕ್​​ ಮಾಸ್​​​ ಎಂಟ್ರಿ..!

ಕನ್ನಡ ಚಿತ್ರರಂಗಕ್ಕೆ ದೊಡ್ಮನೆಯ ಕುಟುಂಬ ಕೊಟ್ಟಿರೋ ಕೊಡುಗೆ ಅಪಾರವಾದುದು. ಡಾ. ರಾಜ್​​​​ಕುಮಾರ್​​ ನಂತ್ರ ಬಂದ ಸೆಂಚುರಿ ಸ್ಟಾರ್​ ಶಿವಣ್ಣ, ನಮ್ಮೆಲ್ಲರ ಪ್ರೀತಿಯ ಅಪ್ಪು, ರಾಘವೇಂದ್ರ ರಾಜ್​ಕುಮಾರ್​​ ಸಿನಿದುನಿಯಾವನ್ನು ಆಳಿದ್ದಾರೆ. ಚಿತ್ರಪ್ರೇಮಿಗಳನ್ನು ಎಡೆಬಿಡದೇ ರಂಜಿಸಿದ್ದಾರೆ. ಇದೀಗ ದೊಡ್ಮನೆಯ ಬಳಗದಿಂದ ಹೊಸ ಪ್ರತಿಭೆ ಧೀರೇನ್​  ರಾಮ್​ಕುಮಾರ್​ ಮಾಸ್​ ಅವತಾರದಲ್ಲಿ ಗ್ರ್ಯಾಂಡ್​ ಎಂಟ್ರಿ ಕೊಡ್ತಿದ್ದಾರೆ.

ಡಾ.ರಾಜ್ ಕುಮಾರ್​​​ ಮೊಮ್ಮಗ ಹಾಗೂ ರಾಮ್​​​ಕುಮಾರ್ ಅವರ ಪುತ್ರ ಧೀರೇನ್,​ ಶಿವ 143 ಸಿನಿಮಾ ಮೂಲಕ ಕನ್ನಡ ಸಿನಿ ಲೋಕಕ್ಕೆ ಲಾಂಚ್​ ಆಗ್ತಿದ್ದಾರೆ. ಚೊಚ್ಚಲ ಸಿನಿಮಾದ ಸ್ಯಾಂಪಲ್​ ತುಣುಕುಗಳ ಮೂಲಕ ಎಲ್ಲರ ದಿಲ್​ ದೋಚಿದ್ದಾರೆ. ಟೀಸರ್​ ನೋಡಿದ್ದ ಪ್ರೇಕ್ಷಕರು ಸಿನಿಮಾ ಬಗ್ಗೆ ಕುತೂಹಲ ವ್ಯಕ್ರಪಡಿಸಿದ್ರು. ಇದೀಗ ಸಿನಿಮಾದ ಟ್ರೈಲರ್​ ರಿಲೀಸ್ ಆಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ಅಂತೂ ದೊಡ್ಮನೆಯ ಕುಟುಂಬದಿಂದ ಮತ್ತೊಬ್ಬ ಸ್ಟಾರ್​​ ಹೊರಹೊಮ್ಮುವ ಸೂಚನೆ ಸಿಕ್ಕಿದೆ.

ಆರ್​ ಎಕ್ಸ್​ 100 ಸಿನಿಮಾದ ಫ್ಲೇವರ್​​ನಲ್ಲಿ ಬರ್ತಿರೋ ಶಿವ 143 ಸಿನಿಮಾದಲ್ಲಿ ಧೀರೇನ್​ ಮಾಸ್​ ಗೆಟಪ್​​ನಲ್ಲಿ ಕಾಣಿಸಿದ್ದಾರೆ. ಟಗರು ಖ್ಯಾತಿಯ ಮಾನ್ವಿತಾ ಶಿವನಿಗೆ ಜತೆಯಾಗಿದ್ದಾರೆ. ಸಿನಿಮಾದ ಟ್ರೈಲರ್​ ನೋಡಿದವ್ರಿಗೆ ಓಂ ಸಿನಿಮಾ ಕಣ್ಮುಂದೆ ಬಂದು ಹೋಗಲಿದೆ. ಟೈಟಲ್​ ಕೂಡ ಶಿವ ಹೆಸರಿನಲ್ಲಿದ್ದು, ಸಿನಿಮಾದ ಪ್ರತಿ ಫ್ರೇಮಿನಲ್ಲೂ ಓಂ ಚಿತ್ರದ ಕೋಪ, ಭಯಂಕರ ಸಿಟ್ಟು, ಹಠ ಎದ್ದು ಕಾಣುತ್ತೆ.

ಐ ಲವ್​ ಯು. ಯು ಮಸ್ಟ್​ ಲವ್​ ಮಿ ಡೈಲಾಗ್​ ಕೇಳ್ತಾ ಇದ್ರೆ ಎಲ್ಲರಿಗೂ ರೋಮಾಂಚನವಾಗುತ್ತೆ. ಅದೇ ರೀತಿ ಇಲ್ಲೂ ಪ್ರೇಮದ ಪರಾಕಾಷ್ಟೆಯಲ್ಲಿ ಶಿವ ಬಂದಿದ್ದಾನೆ. ತನ್ನ ಪ್ರೀತಿಯನ್ನು ಏನೆಲ್ಲಾ ಹೋರಾಟ ಮಾಡ್ತಾನೆ ಅನ್ನೋದು ಟ್ರೈಲರ್​ನಲ್ಲಿ ಜಗಮಗಿಸ್ತಾ ಇದೆ. RX100 ಗೆ ಸೆಡ್ಡು ಹೊಡದಂತಿದೆ ಶಿವ 143 ಸಿನಿಮಾದ ಮೇಕಿಂಗ್​ ಸ್ಟೈಲ್​​.

ಜಯಣ್ಣ, ಭೋಗೇಂದ್ರ, ಡಾ.ಸೂರಿ ಸಾರಥ್ಯದಲ್ಲಿ ನಿರ್ಮಾಣವಾಗ್ತಿರೋ ಶಿವ 143 ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲವಿದೆ. ಚಿತ್ರದಲ್ಲಿ ಸಾಧುಕೋಕಿಲ, ಚಿಕ್ಕಣ್ಣ, ಚರಣ್​ ರಾಜ್​ ಸೇರಿದಂತೆ ಕಲಾವಿದರ ದಂಡೇ ಇದೆ. ಅನಿಲ್​​ ಕುಮಾರ್​ ಆ್ಯಕ್ಷನ್​ ಕಟ್​​ಗೆ ಪ್ರೇಕ್ಷಕರ ರಿಯಾಕ್ಷನ್​ ಹೇಗಿರುತ್ತೆ ಅಂತಾ ಆಗಸ್ಟ್​​ 26 ರವರೆಗೂ ಕಾಯಲೇಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES