Wednesday, December 25, 2024

ಟಿಪ್ಪು ಸುಲ್ತಾನ್ಗೆ ಹೆದರಲಿಲ್ಲ, ಇನ್ನು ಸಿದ್ದು ಸುಲ್ತಾನ್ಗೆ ಹೆದರುತ್ತೀವಾ? : ಪ್ರತಾಪಸಿಂಹ

ಬೆಂಗಳೂರು : ಕೊಡಗಿಗೆ ಟಿಪ್ಪು ಸುಲ್ತಾನ್ ​ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಸಿದ್ದು ಸುಲ್ತಾನ್ ಬಂದರೆ ಹೆದರುತ್ತೀವಾ? ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಮೈಸೂರು, ಮಂಡ್ಯ, ಹಾಸನ‌ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದು ಸವಾಲು ಹಾಕಿದರು. ಇದೇ ವೇಳೆ ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿದ್ದು, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ. ಹಂದಿ ಮಾಂಸ ಕೂಡ ಒಂದು ಆಹಾರ ಪದ್ಧತಿ. ಹಂದಿ ಮಾಂಸ ತಿನ್ನಬೇಡಿ ಎಂದು ಯಾವ ದೇವರು ಹೇಳಿಲ್ಲ. ಹಂದಿ ಮಾಂಸ ತಿನ್ನಲು ನಿಮ್ಮ ಜಮೀರ್​, ಬೆಂಬಲಿಗರಿಗೆ ಹೇಳಿ. ಅದನ್ನ ಹೇಳುವುದಕ್ಕೆ ನಿಮಗೆ ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಸಿದ್ದರಾಮಯ್ಯ ಪದೇ ಪದೇ ಈ ರೀತಿ ಮಾಡುತ್ತಾರೆ. 2017ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ. ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಎಂದರು.

RELATED ARTICLES

Related Articles

TRENDING ARTICLES