Wednesday, January 22, 2025

ಟಗರು ಕಾಳಗ, ಅಖಾಡದಲ್ಲೇ ಎರಡು ಟಗರು ಸಾವು.!

ವಿಜಯಪುರ: ಟಗರು ಕಾಳಗದ ಅಖಾಡದಲ್ಲೇ ಎರಡು ಟಗರು ಸಾವೊನ್ನೊಪ್ಪಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿವೆ.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಜಾತ್ರೆಯಲ್ಲಿ ಪರಸ್ಪರ ಎರಡು ಟಗುರುಗಳು ಕಾಳಗದಲ್ಲಿ ಒಂದೇ ಏಟಿಗೆ ಸ್ಥಳದಲ್ಲೇ ಸಾವನಪ್ಪಿದ್ದಾವೆ. ಈ ಎರಡು ಟಗರುಗಳು ಮೂಲತಃ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಮಾಲಿಕರದ್ದಾಗಿವೆ.

ಬಾಗಲಕೋಟೆ ಜಿಲ್ಲೆಯ ಬೆನ್ನಿಕಟ್ಟಿ ಗ್ರಾಮದ ಟಗರು ಗುದ್ದಿದ ಪರಿಣಾಮ ಎರಡೂ ಟಗರು ಸಾವು ಖಂಡಿವೆ. ಟಗರು ಸಾವನಪ್ಪಿದ ಕಾರಣ ಒಂದು ಲಕ್ಷ ರೂ ಬೆಲೆ ಬಾಳುವ ಟಗರು ಕಳೆದುಕೊಂಡು ಮಾಲಿಕ ಈಗ ಸಂಕಷ್ಟಕ್ಕೆ ಒಳಗಾದ್ದಾನೆ. ಇನ್ನು ಜಾತ್ರಾ ಕಮೀಟಿ ವತಿಯಿಂದ ಸಾವನಪ್ಪಿದ ಟಗರು ಮಾಲೀಕರಿಗೆ ಪರಿಹಾರ ನೀಡಲಾಗಿದೆ.

RELATED ARTICLES

Related Articles

TRENDING ARTICLES