Wednesday, January 15, 2025

ನೇಮು, ಫೇಮು ಮೊದಲಿನಿಂದ ಇದೆ, ಹೋರಾಟ ಹೊಸದಲ್ಲ: ನಟ ಅನಿರುದ್ಧ್​

ಬೆಂಗಳೂರು: ಕನ್ನಡ ಕಿರುತೆರೆಯಿಂದ 2 ವರ್ಷ ನಿಷೇಧ ಮಾಡಿರೋ ಹಿನ್ನೆಲೆ ಮತ್ತೊಮ್ಮೆ ಇಂದು ನಟ ಅನಿರುದ್ಧ್​ ಸುದ್ದಿ ಗೋಷ್ಠಿ ನಡೆಸಿದರು.

ನನ್ನ ಹತ್ತಿರ ಕೋಪ ಇದೆ ಎಂದಾದರೂ ದುರಹಂಕಾರ ಇರೋದು ನೋಡಿದ್ದೀರಾ. ನಾಳೆನೂ ಕೋಪಿಸ್ಕೋತಿನಿ. ಕ್ರಿಯೇಟಿವ್ ಪ್ರೊಸೆಸ್ ಇಂದ ಸರಿ ಮಾಡ್ಕೊಂಡು ಇರಬೇಕು. ಅವರು ಮಾಡಿದ ಪ್ರೆಸ್ ಮೀಟ್​ಲಿ ಕೆಲವೊಬ್ಬರನ್ನು ನೋಡೆ ಇಲ್ಲ. ಹಿಂದೆ ಕೂಡ ಕೋಪ ಮಾಡ್ಕೊಂಡಿದಿನಿ. ಅದಕ್ಕೆ ಅರ್ಥ ಇದೆ. ನನ್ನಲ್ಲಿ ಸ್ಟಾರ್ ಆಟ್ಟಿಟ್ಯುಡ್ ಇದ್ದಿದ್ರೆ. ಈ ರೀತಿ ಮಾಡ್ತಾ ಇರಲಿಲ್ಲ ಎಂದು ಸಮಜಾಯಿಸಿ ಉತ್ತರ ನೀಡಿದರು.

ಬಹಳಷ್ಟು ಜನ ಕರೆ ಮಾಡಿ ಹೇಳಿದ್ದಾರೆ. ನಿಮ್ಮ ಯಶಸ್ಸು ಬಯಸ್ತೀವಿ ಅಂತಾ. 25 ಲೇಖನಗಳನ್ನು ಬರೆದಿದ್ದೆನೆ. ಅದು ನನ್ನ ಯಶಸ್ಸು. ಯಶಸ್ಸು ಇದು ಹೊಸದಲ್ಲ. ಇನ್​​ಸೆಕ್ಯೂರಿಟಿ ಬಗ್ಗೆ ಮಾತಾಡ್ತೀರಿ ನನ್ನ ಲೇಖನಗಳನ್ನು ಓದಿ. ಶ್ರದ್ಧೆಯಿಂದ ಕೆಲಸ ಮಾಡಿದ್ದೀನಿ.

ಅಭಿನಯ ಒಂದೇ ಅಲ್ಲ ನಂಗೆ. ಅಭಿನಯ ಇಷ್ಟ ಪಡೋರಿಗೆ ಎಲ್ಲಾದ್ರೂ ಇನ್​​ಸೆಕ್ಯೂರಿಟಿ ಬರೋಕೆ ಸಾಧ್ಯನಾ. ನನ್ನ ಸಹ ಕಲಾವಿದರಿಗೆ ಕೇಳಿ ನಾನೇನು ಅಂತಾ. ಮಾದ್ಯಮದ ಮುಂದೆ ಆರೋಪ‌ ಮಾಡುವ ಬದಲು ನನ್ನ ಬಳಿ ಮಾತನಾಡಬಹುದಿತ್ತು ಎಂದರು.

ಕ್ಯಾರಾವಾನ್​ ಕೇಳೋಕೆ ಹುಚ್ಚ ಅಲ್ಲ ನಾನು. ಕಿರುತೆರೆ ಸಂಘದ ಅಧ್ಯಕ್ಷ ಭಾಸ್ಕರ್ ಅವರನ್ನ ನಾನು ನೋಡೆ ಇಲ್ಲ. ಹೋರಾಟ, ಸಂಘರ್ಷ ನನಗೆ ಹೊಸದಲ್ಲ.  ಸ್ಮಾರಕಕ್ಕೆ ಹೋರಾಟ ತುಂಬಾ ಮಾಡಿದಿನಿ. ಟಿಆರ್​ಪಿ ಅಂದ್ರೆ ನಂಗೆ ಗೊತ್ತು ನಾನು ಓದಿದಿನಿ. ನೇಮು, ಫೇಮು ಮೊದಲಿನಿಂದ ಇದೆ ಎಂದು ಅನಿರುದ್ಧ್​ ಹೇಳಿದರು.

RELATED ARTICLES

Related Articles

TRENDING ARTICLES