Wednesday, January 22, 2025

ಶಿವಮೊಗ್ಗದಲ್ಲಿ ಷರತ್ತುಬದ್ಧ ಗಣಪತಿ ಪ್ರತಿಷ್ಠಾಪನೆಗೆ ಜಿಲ್ಲಾಧಿಕಾರಿ ಅನುಮತಿ

ಶಿವಮೊಗ್ಗ: ಅಗಸ್ಟ್​ 31 ರಂದು ನಡೆಯುಲಿರುವ ಗಣಪತಿ ಹಬ್ಬಕ್ಕೆ ಶಿವಮೊಗ್ಗದಲ್ಲಿ ಷರತ್ತು ಬದ್ದ ಗಣಪತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ.

ಶಿವಮೊಗ್ಗದಲ್ಲಿ ಸುಮಾರು 755 ಕ್ಕೂ ಹೆಚ್ಚು ಗಣಪತಿ ಇಡುವ ನಿರೀಕ್ಷೆ ಇದೆ. ಯಾವುದೇ ರೀತಿ ಅಹಿತಕಾರಿ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ನಲ್ಲಿ ಗಣಪತಿಗೆ ಹಬ್ಬ ಆಚರಣೆ ಮಾಡಲು ಇಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿರ್ಧರಿಸಿದ್ದಾರೆ.

ಗಣಪತಿ ಹಬ್ಬಕ್ಕಾಗಿ ನಗರದ ಹಲವು ಪ್ರದೇಶಗಳಲ್ಲಿ ಸಿಸಿ ಅಳವಡಿಸಲು ಸೂಚಿಸಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚರ ವಹಿಸುವಂತೆ ಹಿಂದೂ ಮುಖಂಡರು ಜಿಲ್ಲಾಧಿಕಾರಿ ಸೆಲ್ವಮಣಿ ಮನವಿ ಮಾಡಿದ್ದಾರೆ.

ಸೆ. 9 ರಂದು ವಿಸರ್ಜನೆಗೊಳ್ಳಲಿರುವ ಹಿಂದೂ ಮಹಾಸಭಾ ಗಣಪತಿ, ಹಿಂದೂ ಮಹಾಸಭಾ ಗಣಪತಿ ಹಾಗೂ ಓಂ ಗಣಪತಿ ಎರಡು ಗಣಪತಿ ವಿಸರ್ಜನೆ ವೇಳೆ ನಗರದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗುವುದು. ಈ ಬಾರಿಯೂ ಡಿಜೆ ಅವಕಾಶ ನೀಡಲು ಜಿಲ್ಲಾಧಿಕಾರಿ ಸೆಲ್ವಮಣಿ ನಿರಾಕರಿಸಿದರು.

RELATED ARTICLES

Related Articles

TRENDING ARTICLES