Monday, December 23, 2024

ಮೂವರು ಚಿರತೆ ಬೇಟೆಗಾರರ ಬಂಧನ

ಚಾಮರಾಜನಗರ : ಚಿರತೆ ಭೇಟೆಯಾಡಿ ಉಗುರು ಮತ್ತು ಹಲ್ಲುಗಳನ್ನು ಸಾಗಿಸುತ್ತಿದ್ದ ಮೂವರು ಭೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಜವರಯ್ಯ, ಕೆಂಪ, ತಮ್ಮಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಚಿರತೆ ಹಲ್ಲು, ಉಗುರುಗಳನ್ನು ಬಳಸಿ ತಾಯತ ಮಾಡಿಕೊಂಡರೆ ಒಳಿತು ಎಂಬ ಜನರ ಮೂಡನಂಬಿಕೆಯಿಂದ ಈ ಕೃತ್ಯ ಎಸಗಲಾಗ್ತಿದೆ. ಬಂಧನದ ವೇಲೆ ಓರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ. ಚಿರತೆ ಬೇಟೆಯಾಡಿದ ಸ್ಥಳವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES