Sunday, January 5, 2025

ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಜನ ಮತ ಬೇಕು : ಎಂಬಿ ಪಾಟೀಲ್

ಕಲಬುರಗಿ : ಎಲ್ಲಾ ಜಾತಿ-ಧರ್ಮದ ಜನ ಈ ಬಾರಿ ರಾಜ್ಯ-ಕೇಂದ್ರ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯಲು ನಿರ್ಧರಿಸಿದ್ದಾರೆ ಎಂದು ಕಲಬುರಗಿಯ ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ,

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಇದು ಬಿಜೆಪಿಯ ಸ್ಪಾನ್ಸರ್, ಇದು ಬಿಜೆಪಿ ಮುಖಂಡರ ಕೆಲಸ. ತಮ್ಮ ಸರ್ಕಾರದ ವಿಫಲತೆ ಮರೆಮಾಚಲು ಬಿಜೆಪಿ ಈ ಕೆಲಸಕ್ಕೆ ಮುಂದಾಗಿದೆ. ಬಿಜೆಪಿಯವರಿಗೆ ನಡುಕ ಹುಟ್ಟಿದೆ, ಸಹಿಸಿಕೊಳ್ಳೊಕೆ ಆಗ್ತಿಲ್ಲ, ಅದಕ್ಕೆ ಈ ಹಾದಿ ಹಿಡಿದಿದೆ ಎಂದರು.

ಅದಲ್ಲದೇ, ಮೊಟ್ಟೆ ಎಸೆಯೊದು ದೊಡ್ಡ ಕೆಲಸವಲ್ಲ, ನಮಗೆನು ಬರಲ್ವ? ಆದರೆ ಇದು ಚಿಲ್ಲರೆ ಕೆಲಸ. ಅಂದು ಬಿಜೆಪಿಗೆ ಟಿಪ್ಪು ಬೇಕಾಗಿದ್ದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಟಿಪ್ಪು ಡ್ರೇಸ್ ಹಾಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಜನ ಮತ ಬೇಕು. ಎಲ್ಲಾ ಜಾತಿ-ಧರ್ಮದ ಜನ ಈ ಬಾರಿ ರಾಜ್ಯ-ಕೇಂದ್ರ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES