Wednesday, January 22, 2025

‘ಮುಸ್ಲಿಂ ಏರಿಯಾವನ್ನು ದೇಶದಿಂದ ಬೇರ್ಪಡಿಸ್ತೀರಾ : ಆರಗ ಜ್ಞಾನೇಂದ್ರ

ಬೆಂಗಳೂರು : ಸಿದ್ದರಾಮಯ್ಯ ವಿರುದ್ಧ ಕೊಡಗಿನಲ್ಲಿ ನಡೆದ ಘಟನೆ ದುರದೃಷ್ಟಕರ, ಕಾರಿನ ಮೇಲೆ ಮೊಟ್ಟೆ ಎಸೆದಿರುವುದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಈಗಾಗಲೇ 9 ಮಂದಿಯನ್ನು ಬಂಧಿಸಲಾಗಿದೆ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವೀರ ಸಾವರ್ಕರ್ ಫೋಟೋದ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಮುಸ್ಲಿಂ ಏರಿಯಾವನ್ನು ದೇಶದಿಂದಲೇ ಬೇರ್ಪಡಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರು ಯೋಚನೆ ಮಾಡಿ ಮಾತಾಡುವುದು ಒಳ್ಳೆಯದು. ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾದಲ್ಲಿ ಇಟ್ಟಿರಲಿಲ್ಲ. ಮಾಹಿತಿ ತಪ್ಪಿದ್ದು ಸಿದ್ದರಾಮಯ್ಯನವರು ಹಾಗೆ ಹೇಳಿದ್ದಾರೆ. ಮುಸ್ಲಿಂ ಏರಿಯಾವನ್ನು ದೇಶದಿಂದಲೇ ಬೇರ್ಪಡಿಸುತ್ತಿದ್ದಾರಾ? ಇಂತಹ ಹೇಳಿಕೆಗಳು ಎಲ್ಲರ ಭಾವನೆಗಳನ್ನು ಕೆರಳಿಸುತ್ತದೆ. ಹೋರಾಟಗಾರರ ಬಗ್ಗೆ ಕೀಳಾಗಿ ಮಾತಾಡೋದು ಜನ ಸಹಿಸಲ್ಲ. ಯಾರದೇ ಭಾವನೆ ಕೆರಳಿಸದಂತೆ ಹೇಳಿಕೆ ನೀಡಬೇಕಾಗುತ್ತದೆ ಎಂದರು.

ಭಾವನೆ ಕೆರಳಿಸಿ ಶಾಂತಿ ಸುವ್ಯವಸ್ಥೆ ಸರಿಯಿಲ್ಲ ಅಂತಾ ಹೇಳುತ್ತಿದ್ದಾರೆ. ಇದರಲ್ಲಿ ಯಾವುದೇ ಅರ್ಥವಿಲ್ಲ. ಸಿದ್ದರಾಮಯ್ಯ ಅವರಂತಹ ಹಿರಿಯರಿಗೆ ನಾನು ಪಾಠ ಮಾಡುವ ಅವಶ್ಯಕತೆ ಇಲ್ಲ, ಅವರನ್ನು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES