Wednesday, April 24, 2024

ಬಾಲಿವುಡ್ ಸ್ಟಾರ್ಸ್​ಗೆ ಬಿಸಿ ಮುಟ್ಟಿಸಿದ ಬಾಯ್ಕಾಟ್ ಟ್ರೆಂಡ್

ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡಿದ್ದ ಬಾಲಿವುಡ್​ನ ದೊಡ್ಡ ದೊಡ್ಡ ಸಿನಿಮಾಗಳಿಗೆ ಬಾಯ್ಕಾಟ್​ ಸಂಕಷ್ಟ ಎದುರಾಗಿದೆ. ಬಾಲಿವುಡ್​ನ ಬಿಗ್​ ಸ್ಟಾರ್​ ಸಿನಿಮಾಗಳು ನೆಗಟಿವ್​ ಪ್ರಚಾರದಿಂದ ಬಾಕ್ಸ್​ ಆಫೀಸ್​​ ಕಲೆಕ್ಷನ್​ ವಿಚಾರದಲ್ಲಿ ನೆಲಕ್ಕಪ್ಪಳಿಸುತ್ತಿವೆ. ಬಾಯ್ಕಾಟ್​ ಭೂತ ಬಾಲಿವುಡ್​ ತಾರೆಯರನ್ನು ಬೆನ್ನು ಹತ್ತಿ ಕಾಡ್ತಿದೆ. ಇನ್ನೂ ಯಾವ ಯಾವ ಸಿನಿಮಾಗಳು ಈ ಭಯದಲ್ಲಿ ಬದುಕ್ತಾ ಇವೆ ಗೊತ್ತಾ..? ಈ ಸ್ಟೋರಿ ಓದಿ.

ಶಾರೂಖ್​​, ಹೃತಿಕ್​​​​ಗೂ ಬೆನ್ನು ಹತ್ತಿದ ಬೇತಾಳ ಬಾಯ್ಕಾಟ್​​​

ಭಾರತದ ಸಾರ್ವಭೌಮತೆಯನ್ನು ಪ್ರಶ್ನೆ ಮಾಡಿದ್ರೆ ಏನೆಲ್ಲಾ ಸಂಕಷ್ಟ ಎದುರಿಸಬೇಕಾಗುತ್ತೆ ಅನ್ನೋ ಪಾಠವನ್ನು ಜನರು ​​ ಸ್ಟಾರ್​ ನಟರಿಗೆ ಕಲಿಸಿದ್ದಾರೆ. ಬಾಲಿವುಡ್​​ನ ದೊಡ್ಡ ದೊಡ್ಡ ಸಿನಿಮಾಗಳೇ ಬಾಕ್ಸ್​ ಆಫೀಸ್​ ಕಲೆಕ್ಷನ್​​ ವಿಚಾರದಲ್ಲಿ ಮಖಾಡೆ ಮಲಗಿವೆ. ಹೇಳ ಹೆಸರಿಲ್ಲದಂತೆ ಥಿಯೇಟರ್​​ ಬಿಟ್ಟು ಓಡಿ ಹೋಗಿವೆ. ಈ ಸಾಲಿನಲ್ಲಿ ಆಮೀರ್​ ಖಾನ್​ ಅಭಿನಯದ ಲಾಲ್​ ಸಿಂಗ್​ ಚಡ್ಡಾ, ಅಕ್ಷಯ್​ಕುಮಾರ್​ ನಟನೆಯ ರಕ್ಷಾ ಬಂಧನ್​ ಹಿಟ್ ಲಿಸ್ಟ್​​​ನಲ್ಲಿವೆ.

ಬಾಯ್ಕಾಟ್​ ಭೂತ ಬೇರೆ ಸಿನಿಮಾಗಳಿಗೂ ದೊಡ್ಡ ತಲೆ ನೋವಾಗಿಬಿಟ್ಟಿದೆ.ಅಸಹಿಷ್ಣುತೆ ಬಗ್ಗೆ ದನಿ ಎತ್ತಿದ್ದ ಆಮೀರ್​ಗೆ ಸೋಶಿಯಲ್​ ಮೀಡಿಯಾದಲ್ಲಿ ಬಾಯ್ಕಾಟ್​​ ಹ್ಯಾಷ್​ಟ್ಯಾಗ್​ ಮೂಲಕ ಬಿಸಿ ಮುಟ್ಟಿಸಿದ್ದರು. ಸಿನಿಮಾ ಮೇಕಿಂಗ್​ ಬಗ್ಗೆ ಮೆಚ್ಚಗೆಯ ಮಾತುಗಳು ಕೇಳಿ ಬಂದ್ರೂ ಕೂಡ ಬಾಕ್ಸ್​ ಆಫೀಸ್​ ಕಲೆಕ್ಷನ್​ನಲ್ಲಿ ಸೋತು ಸುಣ್ಣವಾಯಿತು. ಚಡ್ಡಾ ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದ ಅಕ್ಷಯ್​​​, ಹೃತಿಕ್​ ರೋಷನ್​​ ಸಿನಿಮಾಗಳಿಗೂ ಈ ಬಿಸಿ ತಟ್ಟಿದೆ. ಬಾಯ್ಕಾಟ್​ ರಕ್ಷಾ ಬಂಧನ್​ಅಭಿಯಾನ ಕೂಡ ಜೋರಾಗಿದೆ.

ಭಾರತದ ಅಖಂಡತೆಯಯನ್ನು ಪ್ರಶ್ನೆ ಮಾಡಿದ್ರೆ, ಭಾರತದ ಸಂಸ್ಕೃತಿಯನ್ನು ಅವಹೇಳನ ಮಾಡಿದ್ರೆ, ಪರಿಣಾಮ ಯಾವ ಲೆವೆಲ್​​ಗೆ ಇರುತ್ತೆ ಅನ್ನೋದು ಬಿಟೌನ್​​ ಮಂದಿಗೆ ಗೊತ್ತಾಗಿದೆ. ಈ ಕಂಟಕದ ಸುಳಿಯಲ್ಲಿ ಶಾರುಖ್​ ಖಾನ್​ ಅಭಿನಯದ ಜವಾನ್​​​, ಹೃತಿಕ್​ ನಟನೆಯ ವಿಕ್ರಂ ವೇದ, ರಣಬೀರ್​ ಕಪೂರ್​​ ಅಭಿನಯದ ಬ್ರಹ್ಮಾಸ್ತ್ರ ಕೂಡ ಸಿಲುಕಲಿವೆ.

ಬಾಯ್ಕಾಟ್​ ಟ್ರೆಂಡ್​ ಒಳ್ಳೆ ಸಿನಿಮಾಗಳನ್ನು ನುಂಗಿ ಹಾಕುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನು ಈಗಲೇ ಚಿವುಟಿ ಹಾಕಬೇಕು. ಬಾಲಿವುಡ್​​​ನಲ್ಲಿ ಧಾರ್ಮಿಕತೆಯ ಆಧಾರದ ಮೇಲೆ ಸಿನಿಮಾಗಳ ಮಾರುಕಟ್ಟೆಯನ್ನು ನಾಶ ಮಾಡಲಾಗ್ತಿದೆ ಎಂಬ ಅಭಿಪ್ರಾಯ ಕೂಡ ಕೇಳಿ ಬರ್ತಿದೆ. ಇದ್ರ ಬೆನ್ನಲ್ಲೇ, ಅರ್ಜುನ್​ ಕಪೂರ್​ ಕೂಡ ಕರೀನಾ ಕಪೂರ್​ಗೆ ಬೆಂಬಲ ಸೂಚಿಸಿದ್ದು, ಕೆಲವರನ್ನು ಮಾತ್ರ ಟಾರ್ಗೆಟ್​ ಮಾಡಲಾಗ್ತಿದೆ. ಇದು ಒಳ್ಳೆಯದಲ್ಲ ಎಂದಿದ್ದಾರೆ.

ಎನಿವೇ, ಸಾಮಾಜಿಕ ಬದ್ಧತೆ ಮೆರೆಯಬೇಕಾದ ನಟರು ಕ್ಷುಲ್ಲಕ ಮಾತುಗಳ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ವಿಪರ್ಯಾಸ. ಇನ್ನಾದರು ತಿದ್ದಿಕೊಂಡರೆ ಅವರಿಗೆ ಒಳ್ಳೆಯದು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES