Friday, November 22, 2024

ಮಂಗಳೂರಿನ 16 ಫಿಶ್ ಮಿಲ್ ಘಟಕಗಳ ಸ್ಥಗಿತಕ್ಕೆ ಆದೇಶ.!

ಮಂಗಳೂರು: ಮಂಗಳೂರಿನಲ್ಲಿ 16 ಫಿಶ್ ಮಿಲ್ ಘಟಕಗಳ ಸ್ಥಗಿತಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದೇಶ ಹೊರಡಿಸಿದೆ.

ನೀರು ಮತ್ತು ತೀವ್ರ ಪರಿಸರ ಮಾಲಿನ್ಯದ ಬಗ್ಗೆ ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಪದೇ ಪದೇ ನೋಟಿಸ್ ಕೊಟ್ಟು ಮಾಲಿನ್ಯ ತಗ್ಗಿಸಲು ಮಂಡಳಿ ಸೂಚಿಸಿತ್ತು. ಮಂಡಳಿ ನೋಟಿಸ್​ಗೆ ಫಿಶ್ ಮಿಲ್ ಘಟಕಗಳ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದರು. ಮಲಿನ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡುತ್ತಿದ್ದರಿಂದ ಗಬ್ಬು ವಾಸನೆ ಹೊಡೆಯುತ್ತಿದೆ. ಹೀಗಾಗಿ ಈಗ ಮಾಲಿನ್ಯ ಮಂಡಳಿ ಈ ಆದೇಶ ಹೊರಡಿಸಿದೆ.

ಅಸಹ್ಯ ವಾಸನೆಯಿಂದಾಗಿ ಪರಿಸರದ ಜನರಿಗೆ ವಾಸಕ್ಕೆ ಕಷ್ಟವಾಗಿತ್ತು. ಈ ಬಗ್ಗೆ ಪ್ರಾದೇಶಿಕ ಪರಿಸರ ನಿಯಂತ್ರಣ ಮಂಡಳಿಗೆ ಸಾರ್ವಜನಿಕರು ದೂರು ನೀಡಿದ್ದರು. ದೂರಿನ ಹಿನ್ನೆಲೆ ಬಯೋ ಫಿಲ್ಟರ್ ಅಳವಡಿಸಲು ಪರಿಸರ ನಿಯಂತ್ರಣ ಮಂಡಳಿ ಸೂಚಿಸಿತ್ತು.

ಕಳೆದ ಜುಲೈನಲ್ಲಿ ಅಂತಿಮ ಗಡುವು ನೀಡಿ ನೋಟಿಸ್ ನೀಡಿತ್ತು. ಪರಿಸರ ಮಾಲಿನ್ಯ ತಪ್ಪಿಸಲು ಕಾರ್ಖಾನೆಗಳು ಯಾವುದೇ ಕ್ರಮ ಕೈಗೊಳ್ಳದೇ, ವಿಚಾರಣೆಗೂ ಹಾಜರಾಗದ ಹಿನ್ನೆಲೆ 16 ಘಟಕಗಳ ಬಂದ್ ಮಾಡಲು ಜಿಲ್ಲಾಧಿಕಾರಿಗೆ, ಮೆಸ್ಕಾಂ ಎಂಡಿಗೆ ಕಾರ್ಖಾನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಮಂದಿನ ಆದೇಶದ ವರೆಗೆ ಘಟಕ ಸ್ಥಗಿತಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES