Monday, January 13, 2025

ಆಡಿಯೋ ಲೀಕ್ ಮಾಡಿದ ವ್ಯಕ್ತಿ ವಿರುದ್ದ ದೂರು ನೀಡುವೆ: ಸಚಿವ ಮಾಧುಸ್ವಾಮಿ

ತುಮಕೂರು: ಸಚಿವ ಮಾಧುಸ್ವಾಮಿ ಆಡಿಯೋ ಲೀಕ್ ವಿಚಾರ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರದಲ್ಲಿ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ವೈರಲ್ ಆದ ಆಡಿಯೋ ತುಂಬಾ ಹಳೆಯದು. ಯಾವಾಗ ಮಾತನಾಡಿದ್ದಿನಿ ಅನ್ನೋದು ನನಗೆ ನೆನಪಿಲ್ಲ. ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಆಡಿಯೋ ರೆಕಾರ್ಡಿಂಗ್ ಮಾಡಿದ ವ್ಯಕ್ತಿ ವಿರುದ್ದ ದೂರು ನೀಡುತ್ತೇನೆ. ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಕೂಡ ಅಪರಾಧ ಎಂದರು.

ಹಾಗಾಗಿ‌ ಪ್ರಸಾರ ಮಾಡಿದ ಮಾಧ್ಯಮ ದ ಮೇಲೂ ಕೇಸ್ ಹಾಕುತ್ತೇನೆ. ಯಾರೂ ನನ್ನ ವಿರುದ್ದ ಷಡ್ಯಂತ್ರ ಮಾಡಿಲ್ಲ. ಯಾರನ್ನೂ ನಾನು ದೂಷಣೆ ಮಾಡೋದಿಲ್ಲ. ಈಗಾಗಲೇ ಸಿಎಂ ಗೆ ಸ್ಪಷ್ಟನೆ ನೀಡಿದ್ದೆನೆ. ರಾಜೀನಾಮೆ ಕೊಡುವ ಪ್ರಮಯ ಇಲ್ಲ. ಸಿಎಂ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದರು.

ಅನಾಮಿಕ ವ್ಯಕ್ತಿ ನನ್ನ ಪ್ರವೋಕ್ ಮಾಡಿದ್ದ. ಹಾಗಾಗಿ ನಾನು ಮ್ಯಾನೇಜ್ ಮಾಡುತಿದ್ದೇವೆ ಎಂದು ಹೇಳಿದೆ. ಸಚಿವ ಸೋಮಶೇಖರ್ ಕುರಿತು ನಾನು ಗೌರವಯುತವಾಗಿ ಮಾತನಾಡಿದ್ದೇನೆ. ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರದ ಬಗ್ಗೆ ಎರಡು ಮಾತಿಲ್ಲ. ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಬದಲಾವಣೆ ಇಲ್ಲ. ಸಚಿವ ಸಂಪುಟನೂ ಪುನಾರಚನೆ ಆಗೋದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES