Wednesday, January 22, 2025

ತಿರಂಗ ಧ್ವಜ ಇಟ್ಟುಕೊಂಡು ಓಡಾಡಿದರೆ ಏನು ಆಗಲ್ಲ : ಹೆಚ್​ಡಿಕೆ

ರಾಮನಗರ : ದೇಶದಲ್ಲಿ ಇನ್ನು ಲಕ್ಷಾಂತರ ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೂ ಪರಿತಪಿಸುವ ದುಸ್ಥಿತಿ ಇದೆ ಎಂದು ಚನ್ನಪಟ್ಟಣದ ವಳಗೆರೆದೊಡ್ಡಿಯಲ್ಲಿ ಮಾಜಿ ಸಿಎಂ ಹೆಚ್‌ಡಿಕೆ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರಂಗ ಧ್ವಜ ಇಟ್ಟುಕೊಂಡು ಓಡಾಡಿದರೆ ಏನು ಆಗಲ್ಲ. ತಿರಂಗ ಧ್ವಜಕ್ಕೆ ಗೌರವ ಸಲ್ಲಿಸಬೇಕು ಅಂತಿದ್ದರೇ, ಹೃದಯಗಳಲ್ಲಿ ಗೌರವದ ಭಾವನೆಗಳು ಇದ್ದರೆ. ಮೊದಲು ದೇಶದಲ್ಲಿ ಅಶಾಂತಿಯ ವಾತಾವರಣ ಹೋಗಬೇಕು ಎಂದರು.

ಇನ್ನು, ನಮ್ಮ ದೇಶದಲ್ಲಿ ಶಿಶುಗಳ ಮರಣ ದರ ಏನಿದೆ. ಸುಮಾರು 17 ಲಕ್ಷ ಜನನ ಶಿಶುವಿನ ಸಾವು ಕಾಣುತ್ತಿದ್ದೇವೆ. ಪ್ರತಿವರ್ಷ 17 ಲಕ್ಷ ಜನನ ಶಿಶುಗಳು ಮೃತಪಡುತ್ತಿವೆ. ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸರಿಯಾದ ರೀತಿಯಲ್ಲಿ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುತ್ತೀವಿ ಅಂತಾರೆ. ದೇಶದಲ್ಲಿ ಇನ್ನು ಲಕ್ಷಾಂತರ ಕುಟುಂಬಗಳಿಗೆ ಎರಡು ಹೊತ್ತಿನ ಊಟಕ್ಕೂ ಪರಿತಪಿಸುವ ದುಸ್ಥಿತಿ ಇದೆ. ರೈತರ ಪರಿಸ್ಥಿತಿ ಏನಾಗಿದೆ ಎಂಬುದನ್ನ ನೋಡುತ್ತಿದ್ದೇವೆ ಎಂದು ಹೇಳಿದರು.

ಅದಲ್ಲದೇ, ನರೇಂದ್ರ ಮೋದಿ ಹೇಳಿದ್ದರು ನಮ್ಮ ರೈತರು ಬೆಳೆಯುವ ಬೆಳೆಯ ಬೆಲೆ ದ್ವಿಗುಣವಾಗುತ್ತದೆ ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ರೈತರ ಪರಿಸ್ಥಿತಿಯನ್ನ ಅದೆಂತಹದ್ದೋ ಭ್ರಷ್ಟಾಚಾರ ನಿಲ್ಲಿಸುತ್ತೀವಿ ಅಂತಾ ಹೇಳ್ತಾರೆ. ಕಳೆದ ಎಂಟು ವರ್ಷಗಳಲ್ಲಿ ಏನು ಮಾಡಿದ್ದಾರೆ. ಬರಿ ಭಾಷಣಕ್ಕೆ ಮಾತ್ರ ಇವರು ಸೀಮಿತ. ಇವರ ನಡವಳಿಕೆಗಳೇ ದೇಶದಲ್ಲಿ ಅಶಾಂತಿ ವಾತಾವರಣ ಮೂಡಲು ಕಾರಣ ಎಂದರು.

RELATED ARTICLES

Related Articles

TRENDING ARTICLES