Sunday, December 22, 2024

ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇಂಡಿಯನ್ ಸ್ಟಾರ್ಸ್​

ಯಶ್, ಅನುಷ್ಕಾ ಶರ್ಮಾ ದಂಪತಿ ಸೇರಿದಂತೆ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ಸ್​ ತಮ್ಮ ಮನೆಯ ಮೇಲೆ ತಿರಂಗ ಹಾರಿಸಿ, ದೇಶಪ್ರೇಮ ಮೆರೆದಿದ್ದಾರೆ. ಸ್ವತಂತ್ರ್ಯೋತ್ಸವದ ಶುಭಾಶಯಗಳನ್ನ ತಮ್ಮದೇ ಶೈಲಿಯಲ್ಲಿ ವಿಭಿನ್ನವಾಗಿ ಕೋರೋ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಅದೆಲ್ಲದರ ರೌಂಡಪ್ ಇಲ್ಲಿದೆ, ನೀವೇ ಓದಿ.

  • ಎಲ್ಲೆಲ್ಲೂ ತಿರಂಗ.. ಮೊಳಗಿದ ಉಚ್ಛಲ ಜಲದಿ ತರಂಗ..!

ನಾಡು, ನುಡಿ, ಜಲ, ಭಾಷೆಯ ವಿಚಾರ ಬಂದಾಗ ಎಲ್ಲರೂ ಒಟ್ಟಾಗುವಂತೆ, ಭಾರತಾಂಬೆಯ ಜನ್ಮದಿನದ ಸಡಗರ ಸಂಭ್ರಮಾಚರಣೆ ಎಲ್ಲೆಲ್ಲೂ ಅನುರಣಿಸುತ್ತದೆ. ಎಲ್ಲರೂ ಒಟ್ಟಾಗಿ ಕೈಯಲ್ಲಿ ಧ್ವಜ ಹಿಡಿದು ಜೈಕಾರ ಹಾಕ್ತಾರೆ. ದೇಶದ ಉದ್ದಗಲಕ್ಕೂ ತಾಯಿ ಭಾರತಾಂಬೆಯ ಘೋಷಗಳು ಮೊಳಗುತ್ತವೆ. ಭಾರತಾಂಬೆಯ ಜನ್ಮದಿನವನ್ನು ಸೆಲೆಬ್ರೆಟಿಗಳು ಕೂಡ ಅದ್ಧೂರಿಯಾಗಿ ಆಚರಿಸಿದ್ದಾರೆ.

ಗ್ಲೋಬಲ್​ ಐಕಾನ್​ ರಾಕಿಭಾಯ್​ ಕೂಡ 75ನೇ ಸ್ವಾತಂತ್ರ್ಯದ ಅಮೃತ ಮಹೂತ್ಸವವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಪ್ರಧಾನಿ ಮೋದಿ ಕೊಟ್ಟ ಕರೆಗೆ ಮನೆ ಮೇಲೆ ರಾಷ್ಟ್ರದ್ವಜ ಕಟ್ಟಿದ್ದ ರಾಜಾಹುಲಿ, ತಮ್ಮ ಪತ್ನಿ ರಾಧಿಕಾ ಪಂಡಿತ್​​ ಹಾಗೂ ಮುದ್ದಿನ ಮಕ್ಕಳೊಂದಿಗೆ ಸ್ವಾತಂತ್ರ್ಯದ ದಿನವನ್ನು ಸಂಭ್ರಮಿಸಿದ್ದಾರೆ.

ಸ್ಯಾಂಡಲ್​ವುಡ್​ ಸಲಗ ಕೈಯಲ್ಲಿ ಫ್ಲಾಗ್​ ಹಿಡಿದು ಪೋಸ್​ ಕೊಟ್ಟರೆ, ಮೆಗಾಸ್ಟಾರ್ ಚಿರಂಜೀವಿ ನ್ಯಾಷನಲ್​ ಫ್ಲಾಗ್​ಗೆ ಸೆಲ್ಯೂಟ್​ ಮಾಡ್ತಾ ಇರೋ ಫೋಟೋ ಶೇರ್ ಮಾಡಿದ್ದಾರೆ. ಕಾರ್ತಿಕ್​ ಆರ್ಯನ್​​, ಜೋಗಿ ಪ್ರೇಮ್​​, ನವೀನ್​ ಸಜ್ಜು, ನೀನಾಸಂ ಸತೀಶ್​​, ರಚಿತಾ ರಾಮ್​​, ತಾರಾ, ಹಾಗೂ ಸಂಸದೆ ಸುಮಲತಾ ಅಂಬರೀಶ್​ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ತಾಯಿ ಭಾರತಾಂಬೆಯ ಮೇಲಿನ ಪ್ರೀತಿ, ಗೌರವವನ್ನು ಹೊರಹಾಕಿದ್ದಾರೆ.

ಬಾಲಿವುಡ್​ನ ಶಾರೂಖ್​ ಖಾನ್, ಮಹೇಶ್​ ಬಾಬು, ಶ್ರೀನಿ, ಅನುಷ್ಕಾ ಶರ್ಮಾ ತಮ್ಮ ​ಫ್ಯಾಮಿಲಿ ಜತೆ ಆಚರಿಸಿದ್ದಾರೆ. ಇನ್ನೂ ಆ್ಯಂಕರ್​ ಅನುಶ್ರೀ, ಅನಿರುದ್ಧ್​​, ಆಶಾ ಭಟ್​​​, ಕಾರುಣ್ಯ ರಾಮ್, ಸಂತೋಷ್​ ಆನಂದ್​ರಾಮ್​ ಕೂಡ ರಾಷ್ಟ್ರಭಕ್ತಿಯನ್ನು ತೋರಿದ್ದಾರೆ. ಅಂತೂ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಅಸಮಾನ್ಯನವರೆಗೂ ತಲುಪಿ ಜಗಮಗಿಸಿದ್ದು ವಿಶೇಷ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES