Monday, December 23, 2024

ತೋತಾಪುರಿಗೆ ಲೈನ್ ಕ್ಲಿಯರ್.. ದಸರಾಗೆ ಟೇಸ್ಟ್ ಫಿಕ್ಸ್

ಈ ಬಾರಿ ದಸರಾ ಹಬ್ಬ ನಗುವಿನ ಹಬ್ಬವಾಗಲಿದೆ. ತೋತಾಪುರಿ ಸವಿಯುತ್ತಾ, ಬಾಯಿ ಚಪ್ಪರಿಸೋ ಜತೆಗೆ ಹೊಟ್ಟೆ ಹುಣ್ಣಾಗುವಷ್ಟು ನಗೋದಕ್ಕೂ ಅವಕಾಶವಿದೆ. ನವರಸಗಳ ನಾಯಕ ಜಗ್ಗೇಶ್​​ ತೋತಾಪುರಿ ಮಾವಿಗೆ ನಗುವಿನ ಉಪ್ಪು- ಖಾರ ಬೆರೆಸಿ ನಿಮ್ಮ ಮುಂದೆ ಇಡಲಿದ್ದಾರೆ. ಯೆಸ್​​.. ಸೆಪ್ಟೆಂಬರ್​ ಎಂಡ್​ಗೆ ಬಾಗ್ಲು ತೆಗಿ ಮೇರಿ ಜಾನ್​ ಅಂತ ಬೆಳ್ಳಿ ತೆರೆ ಬೆಳಗಲಿದ್ದಾರೆ ಜಗ್ಗಣ್ಣ.

  • ನವರಾತ್ರಿಗೆ ದೇಸಿ ಮಾವಿನ ರುಚಿ ಸವಿಯುವ ಆಫರ್​​​​..!

ಚೇಷ್ಠೆಗಳ ಚೇರ್ಮನ್, ತಲೆಹರಟೆ, ತಮಾಷೆಗಳ ಮೂಲಕ ಬದುಕಿನ ಸಾರವನ್ನು ತಿಳಿಸೋ ಕ್ರಿಯೇಟಿವ್​ ಡೈರೆಕ್ಟರ್​​​ ವಿಜಯ್​ ಪ್ರಸಾದ್​​ ತೋತಾಪುರಿ ಉಣಬಡಿಸಲಿದ್ದಾರೆ. ಯೆಸ್​​.. ವಿಜಯ್​​ಪ್ರಸಾದ್​ ಕನ್ನಡದ ಪೋಲಿ-ಯೋ  ಡಾಕ್ಟರ್​ ಇದ್ದ ಹಾಗೆ. ನಾಟಿ ಘಾಟಿ ಮಾತುಗಳ ಮೂಲಕವೇ ಡಬಲ್​ ಮೀನಿಂಗ್​ ಜೋಕ್ಸ್​ನ ಪ್ರೇಕ್ಷಕರಿಗೆ ಬಡಿಸೋ ಪ್ರವೀಣ. ಅದಕ್ಕೆ ಜಗ್ಗೇಶ್​ರ​​ ನವರಸಗಳು ಸೇರಿಬಿಟ್ರೆ ಸಿನಿಮಾ ಸೂಪರ್​ ಹಿಟ್​ ಆಗೋದ್ರಲ್ಲಿ ನೋ ಡೌಟ್​​​​​​.

ಟೈಲರ್​ ಈರೇಗೌಡ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಜಗ್ಗೇಶ್,​​ ತೋತಾಪುರಿ ಪಾರ್ಟ್-​​ 1ರಲ್ಲಿ ನಗುವಿನ ಬುಗ್ಗೆ ಹರಿಸಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ತೋತಾಪುರಿ ಚಿತ್ರದ ಪೋಸ್ಟರ್​ ರಿಲೀಸ್ ಆಗಿದ್ದು, ಸೆಪ್ಟೆಂಬರ್ 30ಕ್ಕೆ ಮಾವಿನ ರುಚಿ ಸವಿಯೋಕೆ ಸಿದ್ಧರಾಗಿ ಅಂತ ಗುಡ್​ ನ್ಯೂಸ್​​ ಕೊಟ್ಟಿದೆ. ಅಂತೂ ದಸರಾಗೆ ಬಾಗ್ಲು ತೆಗಿ ಮೇರಿ ಜಾನ್​​ ಅಂತ ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿ ಕೊಡಲಿದೆ ತೋತಾಪುರಿ ಟೀಮ್​​​​.

  • ಮಾರ್ಟಿನ್, ರಾಘವೇಂದ್ರ ಸ್ಟೋರ್ಸ್​ ಪೋಸ್ಟ್​ಪೋನ್
  • ಜಗ್ಗೇಶ್- ಡಾಲಿಯ ಪೋಲಿ & ಭಾವೈಕ್ಯತೆಯ ಸಂದೇಶ

ಪೆಟ್ರೋಮ್ಯಾಕ್ಸ್​ ಸಿನಿಮಾ ಥಿಯೇಟರ್​ನಲ್ಲಿ ಓಡ್ತಾ ಇದ್ರೂ, ಸೋಲೊಪ್ಪಿಕೊಂಡಿರುವ ವಿಜಯ್​ ಪ್ರಸಾದ್​ ಈ ಬಾರಿ ಹಸಿದ ಹೆಬ್ಬುಲಿಯಾಗಿದ್ದಾರೆ. ತೋತಾಪುರಿ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಸಿಕ್ಕಾಪಟ್ಟೆ ಕ್ರೇಜ್​ ಮೂಡಿಸಿದೆ. ತುಂಟತನ, ಪೋಲಿತನದ ಜತೆಗೆ ಭಾವೈಕ್ಯದ ಕಥೆಯನ್ನು ಆರ್ಥ ಮಾಡಿಸಲಿದೆ. ಹೆಣ್ಣು ಕುಲವೇ ಈ ಸಿನಿಮಾ ಮೂಲಕ ಜಗ್ಗೇಶ್​​​ರನ್ನು ನೂರು ಪಟ್ಟು ಪ್ರೀತಿಸಲಿದೆಯಂತೆ.

ಕಾಮನ್​ ಲಾಂಗ್ವೇಜ್​​ ಮೂಲಕ ಪ್ರೇಕ್ಷಕನಿಗೆ ಮಸ್ತ್​​ ಮಜಾ ಕೊಡೋ ಡೈರೆಕ್ಟರ್​ ವಿಜಯ್​ ಪ್ರಸಾದ್,​ ಈ ಬಾರಿ ಹೊಸತನದ ಬಾಡೂಟವನ್ನು ಉಣಬಡಿಸಲಿದ್ದಾರೆ. ಜಗ್ಗೇಶ್​ಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಷ್ಟೇ ಮುದ್ದಾಗಿ ನಟಿಸಿದ್ದಾರೆ. ನೀರ್​ದೋಸೆ ಕಾಂಬೋ ರಿಪೀಟ್​ ಆಗ್ತಿದ್ದು ದತ್ತಣ್ಣ, ಸುಮನ್​ ರಂಗನಾಥ್​​ ಕಾಮಿಡಿ ಕಚಗುಳಿ ಇಡ್ತಾರೆ.

ಮೊಟ್ಟ ಮೊದಲ ಬಾರಿಗೆ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಅಬ್ಬರಿಸಲಿರೋ ಮೊದಲ ಕಾಮಿಡಿ ಸಿನಿಮಾ ತೋತಾಪುರಿ. ಮೋನಿಫಿಕ್ಸ್​ ಬ್ಯಾನರ್​ನಡಿ ಕೆ.ಎ ಸುರೇಶ್​ ಚಿತ್ರ ನಿರ್ಮಿಸಿದ್ದಾರೆ. ಅನೂಪ್​ ಸೀಳಿನ್​ ಮ್ಯೂಸಿಕ್​ ಮ್ಯಾಜಿಕ್ ಮಾಡ್ತಿದ್ದು, ದಸರಾಗೆ ಬಾಯಲ್ಲಿ ನೀರು ತರಿಸೋದು ಪಕ್ಕಾ ಆಗಿದೆ ತೋತಾಪುರಿ. ವಿಶೇಷ ಅಂದ್ರೆ ಸೆಪ್ಟೆಂಬರ್ 30ಕ್ಕೆ ಅನೌನ್ಸ್ ಆಗಿದ್ದ ಧ್ರುವ ಸರ್ಜಾರ ಮಾರ್ಟಿನ್ ಹಾಗೂ ಹೊಂಬಾಳೆಯ ರಾಘವೇಂದ್ರ ಸ್ಟೋರ್ಸ್​ ರಿಲೀಸ್ ಪೋಸ್ಟ್​ಪೋನ್ ಆಗಿ, ತೋತಾಪುರಿಗೆ ಲೈನ್ ಕ್ಲಿಯರ್ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES