Monday, December 23, 2024

ಸುದೀಪ್ ಗೆಳೆಯರ ಬಳಗದಿಂದ ‘ಮರ್ದಿನಿ’ ಮ್ಯಾಜಿಕ್

ಕಿಚ್ಚ ಸುದೀಪ್ ಗೆಳೆಯರ ಬಳದಿಂದ ತಯಾರಾಗಿರೋ ಮರ್ದಿನಿ ಸಿನಿಮಾದ ರಿಲೀಸ್ ಡೇಟ್​ನ ಪ್ರಿಯಾ ಸುದೀಪ್ ಅನೌನ್ಸ್ ಮಾಡಿದ್ದಾರೆ. ಪಕ್ಕಾ ವುಮೆನ್ ಸೆಂಟ್ರಿಕ್ ಸಸ್ಪೆನ್ಸ್, ಌಕ್ಷನ್ ಥ್ರಿಲ್ಲರ್ ಸಿನಿಮಾಗೆ ಕಾಫಿನಾಡು ಚಂದು ಕೂಡ ಶುಭ ಹಾರೈಸಿದ್ದಾರೆ. ಇಷ್ಟಕ್ಕೂ ಸಿನಿಮಾ ಯಾವಾಗ..? ಕಿಚ್ಚನ ಯಾವ ಗ್ಯಾಂಗ್ ಅದು ಅನ್ನೋದ್ರ ರಿಪೋರ್ಟ್​ ಇಲ್ಲಿದೆ.

  • ಸೆ- 16ರ ಡೇಟ್ ಅನೌನ್ಸ್ ಮಾಡಿದ ಪ್ರಿಯಾ ಸುದೀಪ್..!
  • ಜಗ್ಗಿ ಡಿಜಿಟಲ್ ಸೈನ್ಸ್​ನಲ್ಲಿ ರಿತನ್ಯ ಡೇರಿಂಗ್ & ಡೆಡ್ಲಿ ಎಂಟ್ರಿ

ಯೆಸ್.. ಟ್ರೈಲರ್​ನಿಂದ ಸಿಕ್ಕಾಪಟ್ಟೆ ದೊಡ್ಡ ನಿರೀಕ್ಷೆ ಮೂಡಿಸಿರೋ ಮರ್ದಿನಿ ಚಿತ್ರದ ರಿಲೀಸ್ ಡೇಟ್ ಫೈನಲ್ ಆಗಿದೆ. ಸ್ವತಃ ಕಿಚ್ಚ ಸುದೀಪ್ ಅವ್ರ ಶ್ರೀಮತಿಯಾದ ಪ್ರಿಯಾ ಸುದೀಪ್ ಅವ್ರೇ ಮರ್ದಿನಿ ರಿಲೀಸ್ ದಿನಾಂಕವನ್ನು ಅಫಿಶಿಯಲಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅನೌನ್ಸ್ ಮಾಡಿದ್ದಾರೆ. ಆ ಮೂಲಕ ಚಿತ್ರತಂಡ ಅಫಿಶಿಯಲ್ ಪ್ರೊಮೋಷನ್ಸ್​ಗೆ ಕೈಹಾಕಿದೆ.

ಕಿರಣ್ ಕುಮಾರ್ ವಿ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರ ಪಕ್ಕಾ ಕಮರ್ಷಿಯಲ್ ಎಂಟರ್​ಟೈನರ್ ಆಗಿದ್ದು, ಹಂಡ್ರೆಡ್ ಪರ್ಸೆಂಟ್ ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಪ್ರಕೃತಿಯಲ್ಲಿ ಯಾವ ಜೀವಿಯೂ ತನ್ನ ಸ್ವಜಾತಿ ಜೀವ ತೆಗೆದು ಸಂಭ್ರಮಿಸಲ್ಲ, ಆದ್ರೆ ಅದು ಮನುಷ್ಯನಲ್ಲಿ ಮಾತ್ರ ಸಾಧ್ಯ. ಅದ್ಯಾಕೆ ಅನ್ನೋದೇ ಚಿತ್ರದ ಎಳೆ. ಔಟ್ ಅಂಡ್ ಔಟ್ ಮರ್ಡರ್ ಮಿಸ್ಟರಿ ಥ್ರಿಲ್ಲರ್​ನ ಕ್ರೈಂ ಕಥಾನಕ ಇದಾಗಿದ್ದು, ಅದನ್ನ ಭೇದಿಸೋ ಪೊಲೀಸ್ ಆಫೀಸರ್ ಕಥೆ ಚಿತ್ರದಲ್ಲಿದೆ.

ಈ ಚಿತ್ರದ ಮುಖೇನ ನಾಯಕನಟಿಯಾಗಿ ಹಾಸನ ಮೂಲದ ರಿತನ್ಯ ಗೌಡ ಚಂದನವನಕ್ಕೆ ಕಾಲಿಡ್ತಿದ್ದಾರೆ. ಸಿನಿಮಾಗಾಗಿ ಜಿಮ್​ನಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ಥೇಟ್ ಪೊಲೀಸ್ ಕಾಪ್ ರೀತಿ ಫಿಟ್ ಅಂಡ್ ಫೈನ್ ಆದ ಬಳಿಕವಷ್ಟೇ ಶೂಟಿಂಗ್ ಅಖಾಡಕ್ಕಿಳಿದಿದ್ದ ರಿತನ್ಯ, ನುರಿತ ಕಲಾವಿದೆಯಂತೆ ಸಖತ್ ಡೇರಿಂಗ್ ಅಂಡ್ ಡೆಡ್ಲಿ ಸ್ಟಂಟ್ಸ್​ನಿಂದ ಹುಬ್ಬೇರಿಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ರ ಅತ್ಯಾಪ್ತ ಜಗದೀಶ್ ಹಾಗೂ ಅವ್ರ ಪತ್ನಿ ಭಾರತಿ ಜಗದೀಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಆತ್ಮೀಯ ಮಿತ್ರನ ಮರ್ದಿನಿ ಸಿನಿಮಾದ ಟ್ರೈಲರ್​ನ ಸುದೀಪ್ ಅವ್ರೇ ಲಾಂಚ್ ಮಾಡಿದ್ರು. ಸಿನಿಮಾ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ರು. ಇದೀಗ ಚಿತ್ರದ ರಿಲೀಸ್ ದಿನಾಂಕ ಪ್ರಿಯಾ ಅವ್ರು ಘೋಷಿಸಿದ್ದಾರೆ. ಕಾಫಿನಾಡು ಚಂದು ಕೂಡ ಅವ್ರದ್ದೇ ಸ್ಟೈಲ್​ನಲ್ಲಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES