Sunday, January 19, 2025

3,000 ಮೀ.ಸ್ಟೀಪಲ್ ಚೇಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಅವಿನಾಶ್

ಕಾಮನ್‍ವೆಲ್ತ್ ಕ್ರೀಡಾಕೂಟದ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿ ಅವಿನಾಶ್ ಸಬ್ಲೆ ಮತ್ತು ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ.

ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ ಕೂಟದ 9ನೇ ದಿನದ ಆರಂಭದಲ್ಲಿ 3,000 ಮೀ. ವಿಭಾಗದ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಸಬ್ಲೆ ಬೆಳ್ಳಿ ಪದಕ ಗೆದ್ದರು. ಇತ್ತ ಮಹಿಳೆಯರ 10,000 ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಈ ಮೂಲಕ ಭಾರತ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ 9ನೇ ದಿನವೂ ಪದಕ ಬೇಟೆ ಮುಂದುವರಿಸಿದ್ದು, ಈವರೆಗೆ 9 ಚಿನ್ನ, 10 ಬೆಳ್ಳಿ, 9 ಕಂಚು ಸೇರಿ ಒಟ್ಟು 28 ಪದಕ ಪಡೆದುಕೊಂಡಿದೆ. ಇಂದು ಇನ್ನಷ್ಟು ಪದಕ ಗೆಲ್ಲುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES