ಚಾಮರಾಜಪೇಟೆ : ಶಾಸಕ ಜಮೀರ್ ಅಹಮದ್ ಖಾನ್‌ರಿಗೆ ಎಸಿಬಿಯಿಂದ ಬುಲಾವ್ ಬಂದಿದ್ದು, ಎಸಿಬಿ ಕಛೇರಿಗೆ ವಿಚಾರಣೆಗೆ ಇಂದು ಹಾಜರಾಗಿದ್ದಾರೆ.
ಇನ್ನು, ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ದಾಳಿಯಲ್ಲಿ ಮನೆ, ಆಸ್ತಿ, ಆದಾಯದ, ಮೂಲ ಪತ್ತೆಯಾಗಿತ್ತು. ಅದಮತೋಲನ ಆಸ್ತಿ ಗಳಿಕೆ ಹಿನ್ನೆಲೆ ವಿಚಾರಣೆಗೆ 10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ಆದರೆ, ಇಂದು ಎಸ್ಪಿ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಜಮೀರ್ ವಿಚಾರಣೆ ನಡೆಯಿತು.
ಅದಲ್ಲದೇ, ಇಡಿ ಅಧಿಕಾರಿಗಳಿಗೆ ಕೊಟ್ಟಿರುವ ಮಾಹಿತಿಯನ್ನೇ ಎಸಿಬಿಗೆ ಕೊಟ್ಟಿದ್ದೀನಿ. ಇಡೀ ದೇಶದಲ್ಲಿ ಬೇರೆ ಯಾರೂ ಕಾಣ್ತಿಲ್ಲ. ಬಿಜೆಪಿಯವರು ಯಾರು ಮನೆನೇ ಕಟ್ಟಿಲ್ವಾ.? ನಾವೇ ಅವರಿಗೆ ಕಾಣ್ತಾ ಇರೋದು. ಕರ್ನಾಟಕದಲ್ಲಿ ನಾನು ಮತ್ತೆ ಡಿಕೆ ಶಿವಕುಮಾರ್ ಸಾಹೇಬ್ರೆ ಇಬ್ರೆ ಕಾಣ್ತಾ ಇರೋದು. ಅಗತ್ಯವಿದ್ರೆ ನಾವು ಕರೀತೀವಿ ಅಂದ್ರು ಬರ್ ಬೇಕು ಅಂದ್ರು ಬರ್ತೀನಿ ಅಂದೆ. ಸಮನ್ಸ್ ಮೂಲಕ ಕೆಲವು ದಾಖಲೆಗಳ ಕೇಳಿದ್ದರು. ನಾವು ಇಡಿಗೆ ಸಲ್ಲಿದ್ದ ದಾಖಲೆಗಳನ್ನೆ ಎಸಿಬಿಗೆ ಸಲ್ಲಿಸಿದ್ದೇನೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳ ಕೇಳಿದ್ದರು ಸಲ್ಲಿಸಿದ್ದೇನೆ ಎಂದರು.