Saturday, April 20, 2024

ಜಪಾನ್​ನಲ್ಲೂ ರಕ್ಕಮ್ಮ, ರೋಣನ್ಮೇಲೆ ಕೋಪ ಯಾಕಮ್ಮ..?

ವಿಕ್ರಾಂತ್​ ರೋಣ ರಿಲೀಸ್​ ಆದ ಮೂರೇ ದಿನದಲ್ಲಿ 150 ಕೋಟಿಗೂ ಅಧಿಕ ಬಾಕ್ಸ್​ ಆಫೀಸ್​ ಕೆಲೆಕ್ಷನ್​ ಗಳಿಸಿ ವರ್ಲ್ಡ್​​ ವೈಡ್​​ ಕಮಾಲ್​ ಮಾಡ್ತಿದ್ದಾನೆ. ಬಾಲಿವುಡ್​ ಸಿನಿಮಾಗಳನ್ನ ಹಿಂದಿಕ್ಕಿ ಅಬ್ಬರಿಸ್ತಿರೋ ರೋಣನ ಆರ್ಭಟಕ್ಕೆ ಜಪಾನ್​​ ಕೂಡ ಫಿದಾ ಆಗಿದೆ. ಯೆಸ್​​​. ಸೂರ್ಯ ಮುಳುಗದ ನಾಡಲ್ಲೂ ರಾರಾ ರಕ್ಕಮ್ಮ ಸದ್ದು ಮಾಡ್ತಿದ್ರೆ, ಇತ್ತ ನಟ ಚೇತನ್​​ ಮತ್ತೆ ಕಿಚ್ಚನ ಮೇಲೆ ಕಾಲ್ಕೆರೆದು ತಕರಾರು ತೆಗೆದಿದ್ದಾರೆ. ರೋಣನ ಕಾಂಟ್ರವರ್ಸಿ, ಕಾಂಪ್ಲಿಮೆಂಟ್​​​​​​​​​​​​ ಎರಡೂ ಕಥೆ ಹೇಳ್ತೀವಿ. ನೀವೇ ಓದಿ.

  • ವಿಕ್ರಾಂತ್​ ರೋಣನ ಮೇಲೆ ನಟ ಚೇತನ್​​ ಮತ್ತೆ ತಕರಾರು..!

ವಿಶ್ವದಾದ್ಯಂತ ಕಿಚ್ಚನ ಅಬ್ಬರ ಆರ್ಭಟ ಮುಂದುವರೆದಿದೆ. ವಿಕ್ರಾಂತ್​ ರೋಣ ಬಾಕ್ಸ್​ ಆಫೀಸ್​ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಗೆಲುವಿನ ನಾಗಾಲೋಟದಲ್ಲಿ ಮುನ್ನುಗ್ತಿದ್ದಾನೆ. ಚಿತ್ರಪ್ರೇಮಿಗಳ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಸಿನಿಮಾ ಗೆಲುವಿನ ಸಿಂಚನ  ಮೂಡಿಸಿದೆ. ಸಿನಿಮಾಂತ್ರಿಕ ರಾಜಮೌಳಿ ಮೆಚ್ಚುಗೆಯ ಮಾತುಗಳು ರೋಣನಿಗೆ ಆನೆಬಲ ಬಂದಂತಾಗಿದೆ. ಸಿನಿಮಾ ಮೇಕಿಂಗ್​ ಸ್ಟೈಲ್​ಗೆ ಸ್ಟಾರ್​ ನಿರ್ದೇಶಕರೆಲ್ಲಾ ಗುಣಗಾನ ಮಾಡಿದ್ದಾರೆ.

ರಾರಾ ರಕ್ಕಮ್ಮನ ಹಾಡಿಗೆ ಥಿಯೇಟರ್​​​ನಲ್ಲಂತೂ ಪ್ರೇಕ್ಷಕರು ಹುಚ್ಚೆದ್ದು ಕುಣಿತಿದ್ದಾರೆ. ರಕ್ಕಮ್ಮ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೇ ಗಡಿ ಮೀರಿ ಸೌಂಡ್​ಮಾಡ್ತಿದ್ದಾಳೆ. ಸೂರ್ಯ ಮುಳುಗದ ನಾಡು ಜಪಾನ್​​ನಲ್ಲೂ ರಕ್ಕಮ್ಮನ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ್ದಾರೆ. ರೋಣನ ಕರಾಮತ್ತು ವಿಶ್ವ ಮಟ್ಟದಲ್ಲಿ ಛಾಪು ಮೂಡಿಸ್ತಾ ಇದ್ರೆ, ಇತ್ತ ನಟ ಚೇತನ್​ ಮತ್ತೆ ಕಿಚ್ಚನ ಮೇಲೆ ಕಾಲ್ಕೆರೆದು ಹೋಗಿದ್ದಾರೆ. ರೋಣ ಚಿತ್ರದ ಮೇಲೆ ಮತ್ತೆ ತಕರಾರು ತೆಗೆದಿದ್ದು ಸಿನಿಮಾ ವಿರುದ್ಧ ಅಪಸ್ವರ ಎತ್ತಿದ್ದಾರೆ.

  • ಕೊರೋನಾ ಕಾಲದಲ್ಲೂ ಕಿಚ್ಚನ ಕಾಲೆಳೆದಿದ್ದ ಚೇತನ್​
  • ಆ ದಿನಗಳು ನಟನ ವಿರುದ್ಧ ಮತ್ತೆ ರೊಚ್ಚಿಗೆದ್ದ ಫ್ಯಾನ್ಸ್​​​​..!

ಕಾಂಟ್ರವರ್ಸಿಗಳನ್ನು ಸಾರಾಸಗಟಾಗಿ ಮೈ ಮೇಲೆ ಎಳೆದುಕೊಳ್ಳುವ ನಟ ಚೇತನ್​ ಸದಾ ಸುದ್ದಿಯಲ್ಲಿರಲು ಇಷ್ಟ ಪಡುತ್ತಾರೆ. ಅವರ ಎಡಪಂಥೀಯವಾದ ಸಿದ್ಧಾಂತಗಳು ಪದೇ ಪದೇ ಅವರನ್ನು ಪೇಚಿಗೆ ಸಿಲುಕುವಂತೆ ಮಾಡುತ್ತವೆ. ಆದ್ರೆ, ತಮ್ಮದೇ ವಿಭಿನ್ನ ನಿಲುವು, ತತ್ವ ಸಿದ್ಧಾಂತ ಹೊಂದಿರುವ ಚೇತನ್​​ ಮತ್ತೆ ಸುದೀಪ್​​ ಚಿತ್ರದ ಮೇಲೆ ತಮ್ಮ ಅಪಸ್ವರ ಎತ್ತಿದ್ದಾರೆ. ವಿಕ್ರಾಂತ್​ ರೋಣ ಸಿನಿಮಾ ಟೆಕ್ನಿಕಲಿ ಗುಡ್​​ ಮೂವಿ. ಆದ್ರೆ, ದಲಿತರನ್ನು ದುಷ್ಟರಂತೆ ತೋರಿಸಿ, ಮುಸ್ಲಿಮರನ್ನು ಸ್ಟಿರಿಯೋಟೈಪ್​ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೇವಲ ದುಡ್ಡಿಗಾಗಿ ಸಿನಿಮಾ ಮಾಡಿದ್ದಾರೆ ಎಂದು  ಕಟುವಾಗಿ ಆರೋಪ ಮಾಡಿದ್ದಾರೆ.

ಸಿನಿಮಾದಲ್ಲಿ ಫಕ್ರು ಹೆಸರಿನ ರೋಲ್​​​ ಇದೆ. ಅವನಿಗೆ 11 ಜನ  ಮಕ್ಕಳು.  ಅವನ ತಮಾಷೆಯ ಡೈಲಾಗ್​​​ಗಳು ಚೇತನ್​ಗೆ ಅ ರೀತಿ ಕಾಣಿಸಿರಬಹುದು. ಹಾಗೂ ದಲಿತ ಸಮುದಾಯಕ್ಕೆ ಸಂಬಂಧಿಸಿದ ಕೆಲವು ಸನ್ನಿವೇಶಗಳು ಚೇತನ್​ ಮನಸ್ಸಿನಲ್ಲಿ ವಿಭಿನ್ನ ಧೋರಣೆ ಮೂಡಿಸಿರಬಹುದು ಎನ್ನಲಾಗ್ತಿದೆ. ಈ ಮುಂಚೆಯೂ ಕೊರೋನಾ ಕಾಲದಲ್ಲಿ ವೈದ್ಯರಿಗೆ ವಂದನೆ ಸಲ್ಲಿಸಲು ಚಪ್ಪಾಳೆ ತಟ್ಟಲು ಪ್ರಧಾನಿ ಮೋದಿ ಹೇಳಿದ್ದರು. ಇದ್ರ ಪರವಾಗಿ ಕಿಚ್ಚ ಕೂಡ ಟ್ವೀಟ್​ ಮಾಡಿ ಮೋದಿ ಪರ ದ್ವನಿ ಎತ್ತಿದ್ದರು. ಆ ಸಮಯದಲ್ಲಿ ಕೂಡ ಕಿಚ್ಚನ ಅವೈಜ್ನಾನಿಕತೆಗೆ ಇದೊಂದು ನಿದರ್ಶನ ಎಂದು ಚೇತನ್​ ಟ್ವೀಟ್​ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.

ಚೇತನ್​ಕುಮಾರ್​ ಹೇಳಿಕೆಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿವೆ. ಸಿನಿಮಾದಲ್ಲೂ ಜಾತಿ ಹುಡುಕುವ ಕೆಟ್ಟ ಮನಸ್ಥಿತಿ ನಿಮ್ಮದು ಎಂದು ಕಮೆಂಟ್ಸ್​ ಮಾಡುತ್ತಿದ್ದಾರೆ. ಮೇಕಿಂಗ್​ ಸ್ಟೈಲ್​​ನಿಂದ್ಲೇ ಎಲ್ಲಾ ಕಡೆ ಸಖತ್​ ಸೌಂಡ್​ ಮಾಡ್ತಿರೋ ವಿಕ್ರಾಂತ್​ ರೋಣ ಚಿತ್ರಕ್ಕೆ ಈ ಘಟನೆಯಿಂದ ಸ್ವಲ್ಪ ಹಿನ್ನೆಡೆಯಾಗಿದೆ. ಪದೇ ಪದೇ ಕಿಚ್ಚನ ಮೇಲೆ ​ ಕಾಲ್ಕೆರೆದು ಬರ್ತಾ ಇರೋ ಚೇತನ್​ ವಿರುದ್ಧ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ಏನೇ ಆದ್ರೂ ವಿಕ್ರಾಂತ್​ ರೋಣ ಎಲ್ಲಾ ವಿಘ್ನಗಳ ನಡುವೆಯೂ ಸಾವರಿಸಿಕೊಂಡು ಮತ್ತೆ ಫಿನಿಕ್ಸ್​ ಹಕ್ಕಿಯಂತೆ ಎದ್ದು ಮುನ್ನುಗ್ತಿದ್ದಾನೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES