Sunday, December 22, 2024

ಚಕ್ರವರ್ತಿ ಸೂಲಿಬೆಲೆ ಬಗ್ಗೆ ನನಗೆ ಗೌರವ ಇದೆ : ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ : 17 ಜನ ಕಾಂಗ್ರೆಸ್​ ಗೆ ರಾಜೀನಾಮೆ ನೀಡಿ ಬಿಜೆಪಿ ಸಿಂಬಲ್ ಮೇಲೆ ಗೆದ್ದು ಬಂದಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 23 ಕಗ್ಗೊಲೆಯಾಗಿದ್ದು ಕಾಂಗ್ರೆಸ್​ ಅವಧಿಯಲ್ಲಿ. 17 ಜನ ಕಾಂಗ್ರೆಸ್​ ಗೆ ರಾಜೀನಾಮೆ ನೀಡಿ ಬಿಜೆಪಿ ಸಿಂಬಲ್ ಮೇಲೆ ಗೆದ್ದು ಬಂದಿದ್ದಾರೆ. ಅವರು ಬಾರದಿದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ. ಗೋ ಹತ್ಯೆ ಸೇರಿದಂತೆ ಹಲವು ಕಾಯ್ದೆ ಜಾರಿಗೆ ಬರುತ್ತಿರಲಿಲ್ಲ. ಬೇರೆ ಪಕ್ಷದವರು ಬಿಜೆಪಿಗೆ ಬಂದಿದ್ದರಿಂದಲೇ ಪೂರ್ಣ ಬಹುಮತ ಬಂತು ಎಂದರು.

ಇನ್ನು, ನಮಗೂ ಕಾರ್ಯಕರ್ತರನ್ನು ಕಳೆದುಕೊಂಡಿದ್ದಕ್ಕೆ ನೋವಿದೆ. ಪರಿಸ್ಥಿತಿಯನ್ನು ಎಲ್ಲರೂ ಸೇರಿಕೊಂಡು ಎದುರಿಸಬೇಕಿದೆ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ನನಗೆ ಗೌರವ ಇದೆ. ಅವರೊಬ್ಬ ರಾಷ್ಟ್ರಭಕ್ತ-ಅವರಿಗೆ ಸಿಟ್ಟು ಬಂದಿದೆ. ಹೀಗಾಗಿ ಹಿರಿಯರು ಮಾತನಾಡುತ್ತಾರೆ. ಕೊಲೆಗಡುಕರು, ರಾಷ್ಟ್ರದ್ರೋಹಿಗಳು ನಮ್ಮ ಕಾರ್ಯಕರ್ತರನ್ನು ಕೊಲೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಅದಲ್ಲದೇ, ನಾವು ನಮ್ಮ ಕಾರ್ಯಕರ್ತರನ್ನು ದೊಡ್ಡ ಸಂಖ್ಯೆಯಲ್ಲಿ ಕಳೆದುಕೊಂಡಿದ್ದೇವೆ.ಅನೇಕರು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಎಸ್​ಡಿಪಿಐ ಹಾಗೂ ಪಿಎಫ್​ಐ ಕೊಲೆಗಡುಕರಿಗೆ ಬೆಂಬಲ ನೀಡುತ್ತಿವೆ. ಹೀಗಾಗಿ ನಮ್ಮ ಮನೆಯವರಿಗೆ ಸಿಟ್ಟು ಬರುತ್ತಿದೆ. ಆದರೆ ಸಿಟ್ಟನ್ನು ಯಾರ ಮೇಲೆ ತೋರಿಸಬೇಕು. ಕೊಲೆ ಆರೋಪಿಗಳನ್ನು ಸರ್ಕಾರ ತಕ್ಷಣ ಬಂಧಿಸಿದೆ. ಯುಪಿ ಮಾದರಿ ಕ್ರಮ ಬೇಕೆಂದು ಕಾರ್ಯಕರ್ತರು ಬಯಸುತ್ತಿದ್ದಾರೆ. ಈ ಬಗ್ಗೆ ನಾನು ಕೇಂದ್ರದ ನಾಯಕರೊಂದಿಗೆ ಮಾತನಾಡಿದ್ದೇನೆ ಎಂದರು.

RELATED ARTICLES

Related Articles

TRENDING ARTICLES