Wednesday, January 22, 2025

ಸಿದ್ದವಾಗಿದ್ದ ಅಡುಗೆ ಶಾಲೆ, ಹಾಸ್ಟೆಲ್​ಗಳಿಗೆ ವಿತರಣೆ

ದೊಡ್ಡಬಳ್ಳಾಪುರ : ಬಿಜೆಪಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಬಿಜೆಪಿಯ ಜನೋತ್ಸವ ಹಾಗೂ ಸಾಧನಾ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರದ್ದುಪಡಿಸಿದ್ದಾರೆ.

ಮಧ್ಯರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ರದ್ದು ಮಾಡಿರುವ ಬಗ್ಗೆ ಘೋಷಣೆ ಮಾಡಿದರು. ನಮ್ಮ ಕಾರ್ಯಕರ್ತ ಬರ್ಬರವಾಗಿ ಹತ್ಯೆಯಾಗಿರುವುದರಿಂದ ‘ಮನಃಸಾಕ್ಷಿ ಒಪ್ಪಿರಲಿಲ್ಲ. ತುಂಬಾ ತೊಳಲಾಟದಲ್ಲಿದ್ದೆ. ಹಾಗಾಗಿ ಕಾರ್ಯಕ್ರಮ ರದ್ದುಪಡಿಸಲು ನಿರ್ಧರಿಸಿದೆ’ ಎಂದರು.

ಅತ್ಯಂತ ಅಮಾಯಕ ಯುವಕನ ಕೊಲೆ ಆಗಿದೆ, ಈ‌ ಘಟನೆ ನೋಡಿ ಮನಸ್ಸಿಗೆ ಶಾಂತಿ ಇರಲಿಲ್ಲ. ಯುವಕನ ತಾಯಿಯ ಆಕ್ರಂದನ ನೋಡಿ ಮನಸ್ಸಿಗೆ ನೋವಾಯಿತು. ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ ಹಾಗೂ ಸಾಧನಾ ಸಮಾವೇಶ ರದ್ದು ಗೊಳಿಸಲಾಗಿದೆ ಎಂದರು. ಸಮಾವೇಶಕ್ಕೆ ಬರುವ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರಿಗೆ ಸಿದ್ದವಾಗಿದ್ದ ಅಡುಗೆಯನ್ನು ಶಾಲೆ ಮತ್ತು ಹಾಸ್ಟೆಲ್​ಗಳಿಗೆ ವಿತರಣೆ ಮಾಡಲಾಗುತ್ತಿದೆ. ಒಂದು ಲಕ್ಷ ಜನರಿಗೆ ಬೇಕಾಗುವಷ್ಟು ಮೊಸರನ್ನ, ಪಲಾವ್, ಬಾದುಷಾ ಸಹ ತಯಾರಿ ಮಾಡಲಾಗಿತ್ತು.

RELATED ARTICLES

Related Articles

TRENDING ARTICLES