ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸರ್ಕಾರ ನೊಂದವರ ಜತೆ ಸದಾ ಇರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಪ್ರಚೋದನೆ ನೀಡುವ ಸಂಘಟನೆಗಳ ನಿಷೇಧ ಮಾಡುವ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ. ಮೋದಿ, ಯೋಗಿ ಮಾಡೆಲ್ ನೀಡಿರುವುದು ಬಿಜೆಪಿಯೇ. ಕಾಂಗ್ರೆಸ್ ಅಥವಾ ಬೇರೆಯವರು ಇದನ್ನ ಮಾಡಿಲ್ಲ. ಸಂದರ್ಭ ಬಂದರೆ ಮೋದಿ, ಯೋಗಿ ಮಾಡೆಲ್ ಗಿಂತಲೂ ಮುಂದೆ ಹೋಗಿ ಸರ್ಜಿಕಲ್ ಸ್ಟ್ರೈಕ್ ಮಾಡಲು ಸಿದ್ಧ ಎಂದರು.
ನಮ್ಮ ವಿಚಾರಧಾರೆಗಳನ್ನು ಯಾವತ್ತೂ ಹತ್ಯೆ ಮಾಡಲು ಸಾಧ್ಯವಿಲ್ಲ. ಕಾರ್ಯಕರ್ತರ ಭಾವನೆಗಳ ಜತೆ ನಾವೂ ಇದ್ದೇವೆ. ಸಂದರ್ಭ ಬಂದರೆ ಬೀದಿಗಿಳಿದು ಹೋರಾಡಲು ಸಿದ್ಧ. ನಾವೂ ಕೂಡ ಬೀದಿಯಲ್ಲಿದ್ದೇ ಹೋರಾಟ ಮಾಡಿ ಬಂದವರು. ಸಂದರ್ಭ ಬಂದರೆ ಕಾರ್ಯಕರ್ತರ ಜತೆ ಬೀದಿಗಿಳಿಯುತ್ತೇವೆ ಎಂದು ಹೇಳಿದರು.