Friday, March 29, 2024

ಬೆಂಗಳೂರಲ್ಲಿ ಊರ್ವಶಿ ಜೊತೆ ಲಕ್ಷ್ಮಿ ರಾಯ್ ಮಸ್ತ್ ಮ್ಯಾಜಿಕ್

ಬಹುಭಾಷಾ ಅಪ್ಸರೆಯರಾದ ಊರ್ವಶಿ ರೌಟೆಲಾ ಹಾಗೂ ಲಕ್ಷ್ಮೀ ರಾಯ್ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಲರ್​ಫುಲ್ ಹಾಡಿಗೆ ಸ್ಟೆಪ್ ಹಾಕೋ ಮೂಲಕ ಅದ್ರ ಅಂದೆ ಚೆಂದ ಹೆಚ್ಚಿಸಿದ್ರು. ಅದಕ್ಕೆ ಸಾಕ್ಷಿ ಆಗಿದ್ದು ಲೆಜೆಂಡ್ ಸರವಣನ್. ಅಪ್ಪುಗೆ ಆ್ಯಡ್ ಡೈರೆಕ್ಟ್ ಮಾಡಿದ್ದ ಜೆಡಿ- ಜೆರ್ರಿ ಸಾರಥ್ಯದ ಲೆಜೆಂಡ್ ಕಹಾನಿ ಇಲ್ಲಿದೆ.

ಬೆಂಗಳೂರಲ್ಲಿ  ಊರ್ವಶಿ ಜೊತೆ ಲಕ್ಷ್ಮಿ ರಾಯ್ ಮಸ್ತ್ ಮ್ಯಾಜಿಕ್

ಅಪ್ಪು ಆ್ಯಡ್ ಡೈರೆಕ್ಟರ್​ ಗರಡಿಯಿಂದ ‘ದಿ ಲೆಜೆಂಡ್’ ಸರವಣನ್

ದಿ ಲೆಜೆಂಡ್.. ಸೈಂಟಿಸ್ಟ್ ಬೇಸ್ಡ್ ಕಥಾನಕವಿರೋ ಪಕ್ಕಾ ಕಮರ್ಷಿಯಲ್ ಪ್ಯಾನ್ ಇಂಡಿಯಾ ಸಿನಿಮಾ. ನಮ್ಮ ಕಿಚ್ಚನ ವಿಕ್ರಾಂತ್ ರೋಣನ ಎದುರು ರಿಲೀಸ್ ಆಗ್ತಿರೋ ಚಿತ್ರವಿದು. ತಮಿಳಿನ ನಟ ಸರವಣನ್ ಈ ಚಿತ್ರದ ಮುಖೇನ ನಾಯಕನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದು, ಟ್ರೈಲರ್ ಹಾಗೂ ಸಾಂಗ್ಸ್​ನಿಂದ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾರೆ.

ಸಿನಿಮಾ ಪ್ರೊಮೋಷನ್ಸ್ ವಿಚಾರ ನಮ್ಮ ಬೆಂಗಳೂರಿಗೆ ಬಂದಿದ್ದ ಚಿತ್ರತಂಡ, ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸಿತು. ಅಲ್ಲಿ 51ರ ಹರೆಯದ ಸರವಣನ್ ಸಿನಿಮೋತ್ಸಾಹ ಹಾಗೂ ಪ್ಯಾಷನ್ ಜೊತೆಗೆ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅನಿಸಿದ್ದು ಚಿತ್ರದ ನಾಯಕಿಯರಾದ ಊರ್ವಶಿ ರೌಟೆಲಾ ಹಾಗೂ ಕನ್ನಡತಿ ಲಕ್ಷ್ಮೀ ರಾಯ್.

ಅದ್ರಲ್ಲೂ ಈ ಗ್ಲಾಮರ್ ಡಾಲ್​ಗಳ ಡ್ಯಾನ್ಸ್ ಧಮಾಕ ಸಖತ್ ಕಿಕ್ ಕೊಟ್ಟಿತು. ಚಿತ್ರದ ಹಾಡುಗಳಿಗೆ ಇಬ್ಬರೂ ಸ್ಟೆಪ್ ಹಾಕಿ ಗಮನ ಸೆಳೆದರು. ಲಕ್ಷ್ಮಿರಾಯ್ ಕನ್ನಡದಲ್ಲೇ ಮಾತನಾಡಿ, ಸದ್ಯದಲ್ಲೇ ಕನ್ನಡಕ್ಕೆ ಕಂಬ್ಯಾಕ್ ಮಾಡ್ತೀನಿ ಅಂದ್ರು. ಇನ್ನು ಬಾಲಿವುಡ್ ಬ್ಯೂಟಿ ಊರ್ವಶಿ, ಕನ್ನಡದಿಂದ ಆಫರ್ಸ್​ ಬರ್ತಿದೆ. ಆದ್ರೆ ಯಶ್ ಜೊತೆ ನಟಿಸೋ ಆಸೆಯಿದೆ ಅಂತ ಸೌತ್ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ರು.

ರಾಜರತ್ನ ಅಪ್ಪು ಅವ್ರಿಗೆ 8ಕ್ಕೂ ಅಧಿಕ ಆ್ಯಡ್ ಗಳನ್ನು ಡೈರೆಕ್ಟ್ ಮಾಡಿದ್ದ ನಿರ್ದೇಶಕ ಜೆಡಿ-ಜೆರ್ರಿ ಜೋಡಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಗುರುವಾದಿಂದ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಒಳಗಾಗ್ತಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES