ಬೆಂಗಳೂರು : ಚುನಾವಣೆ ವೇಳೆ ಸಮುದಾಯದ ಓಲೈಕೆಗೆ ನಾಯಕರು ಮುಂದಾಗ್ತಿದ್ದಾರೆ. ಹುಟ್ಟಿದ ಹಬ್ಬ ಆಚರಣೆ ವಿಚಾರ ಈಗ ಪಕ್ಷಗಳಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಅದ್ರಲ್ಲೂ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಪರ ವಿರೋಧ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಮತ್ತೆ ಅಹಿಂದ ವಿಚಾರ ಮತ್ತೆ ಮುನ್ನೆಲೆಗೆ ಬರ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾರ್ ಶುರುವಾಗಿದೆ.
ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ರೇಸ್ ಶುರುವಾಗಿದೆ. ಅದ್ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಹುಟ್ಟು ಹಬ್ಬ ಮಾಡಿಕೊಳ್ತಿದ್ದಾರೆ. ಅದಕ್ಕೆ ನಾವು ಶುಭ ಹಾರೈಸ್ತಿವಿ ಅಂತ ಸಿಟಿ ರವಿ ವ್ಯಂಗ್ಯವಾಡಿದ್ರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ದುರ್ಬಲ ಆಗ್ತಿದ್ದಾರೆ. ಅದಕ್ಕೆ ಉತ್ಸವ ಮಾಡ್ತಿದ್ದಾರೆ. ಕಾಂಗ್ರೆಸ್‌ನಲ್ಲೇ ಅವರು ಪ್ರಶ್ನಾತೀತ ನಾಯಕನಾಗಿ ಉಳಿದ್ದಿಲ್ಲ. ಸಿದ್ದರಾಮಯ್ಯನವರು, ದಲಿತ ನಾಯಕರಾಗಿರುವ ಪರಮೇಶ್ವರ್ ರವರು ಸಿಎಂ ಆಗ್ತಾರೆ, ಪೈಪೋಟಿ ಕೊಡ್ತಾರೆ ಅಂತಾ ಅವರನ್ನೇ ಸೋಲಿಸಿದ್ರು. ಅಹಿಂದದಿಂದ ಹಿಂದುಳಿದವರನ್ನು ಬಿಟ್ಟು ಅಲ್ಪಸಂಖ್ಯಾತರನ್ನುಇಟ್ಟುಕೊಂಡು ರಾಜಕಾರಣ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ರು.
ಬಿಜೆಪಿ ನಾಯಕ ಸಿಟಿ ರವಿ ಅಹಿಂದ ವಿಚಾರಕ್ಕೆ ತಿರುಗೇಟು ನೀಡಿದ ಸಿದ್ದು, ಸಿಟಿ ರವಿಗೆ ಅಹಿಂದ, ಹಿಂದ ಅಂದ್ರೇನು ಅಂತನೂ ಗೊತ್ತಿಲ್ಲ. ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಇರೋವವರು ಬಿಜೆಪಿಯವರು. ಈ ಹಿಂದೆ ಮಂಡಲ್ ಕಮಿಷನ್ ವರದಿ ವಿರೋಧ ಮಾಡಿದ್ದು ಯಾರು..? ರಾಮ್ ಜೋಯಿಶ್ ಯಾಕೆ ಸುಪ್ರೀಂ ಕೋರ್ಟ್ ಗೆ ಯಾಕೆ ಹೋದ್ರು..? ಅಲ್ಲಿ ಯಾರ ಪರ ವಾದ ಮಾಡಿದ್ರು ಅನ್ನೋದು ಗೊತ್ತಿದೆ ಅಂತ ತಮ್ಮದೇ ಆದ ಸ್ಟೈಲ್‌ನಲ್ಲಿ ತಿರುಗೇಟು ನೀಡಿದ್ರು ಸಿದ್ದರಾಮಯ್ಯ.
ಒಟ್ನಲ್ಲಿ ಚುನಾವಣೆ ಸಿದ್ದತೆಯಲ್ಲಿರುವಾಗಲೇ ನಾಯಕರಿಗೆ ಅಹಿಂದ ವಿಚಾರ ಅಸ್ತ್ರವಾಗ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಚುಕ್ಕಾಣಿ ಯಾರು ಹಿಡಿತ್ತಾರೆ ಅನ್ನೋದನ್ನು ಕಾಲವೇ ನಿರ್ಧರಿಸುತ್ತದೆ. ಪಕ್ಷದ ನಾಯಕರ ಆರೋಪ- ಪ್ರತ್ಯಾರೋಪಗಳು ಇನ್ನು ಯಾವ ಮಟ್ಟಕ್ಕೆ ನಿಲ್ಲುತ್ತೆ. ಇದಕ್ಕೆ ರಾಜ್ಯದ ಜನತೆ ಯಾವ ಉತ್ತರ ಕೊಡ್ತಾರೆ ಅನ್ನೋದು ಕಾದುನೋಡಬೇಕಿದೆ.
ರೂಪೇಶ್ ಬೈಂದೂರು ಪವರ್ ಟಿವಿ