Wednesday, January 22, 2025

ಮುಸ್ಲಿಮರ ಕ್ಷೌರ ಅಂಗಡಿಗಳನ್ನ ನಾವೇ ಉಡಿಸ್ ಮಾಡ್ತಿವಿ : ಪ್ರಮೋದ್ ಮುತಾಲಿಕ್

ಬಾಗಲಕೋಟೆ : ಕ್ಷೌರಕ್ಕೆ ಅಂತಲೇ ಬಾಂಗ್ಲಾದೇಶದಿಂದ ಮುಸ್ಲಿಮರು ಬಂದು ಅವರ ಹೊಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡ್ತಿದ್ದಾರೆ ಎಂದು ಬಾಗಲಕೋಟೆಯಲ್ಲಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರು ಕ್ಷೌರ ಅಂಗಡಿಗಳನ್ನ ನಾವೇ ಉಡಿಸ್ ಮಾಡ್ತಿವಿ. ದೇಶದೆಲ್ಲೆಡೆ ಕ್ಷೌರಿಕ ಸಮಾಜ ಇದೆ. ಅವರಿಗೆ ಕ್ಷೌರ ಬಿಟ್ರೆ ಬೇರೆ ಏನೂ ಗೊತ್ತಿಲ್ಲ. ಅವರ ಜೀವನ, ಹೆಂಡತಿ ಮಕ್ಕಳು ಅದರ ಕ್ಷೌರ ಉದ್ಯೋಗದ ಮೇಲೆ ಇದ್ದಾರೆ. ವ್ಯವಸ್ಥಿತ ಷಡ್ಯಂತ್ರ, ಕುತಂತ್ರ ನಡೀತಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ನೀಡಲಾಗಿದೆ. ಆದರೆ ಯಾವುದೇ ಕ್ರಮ ಆಗಿಲ್ಲ.

ಇನ್ನು, ಎಲ್ಲಿಂದಲೋ ಬಂದು ದಾಖಲೆ ಇಲ್ಲದೆ ಇವರು ಅಂಗಡಿ ಹೇಗೆ ಹಾಕ್ತಾರೆ. ಅವರಿಗೆ ಯಾರು ಹಾಕಿಕೊಡ್ತಾರೆ, ಅವರಿಗೆ ಬಂಡವಾಳ ಹೇಗೆ ಸಿಗ್ತಿದೆ. ಆರು ಅಂಗಡಿ ಆಗಿವೆ ಅಂತ ಹೇಳ್ತಿದ್ದಾರೆ. ಒಂದು ವಾರದಲ್ಲಿ ಅವರು ಬಂದ್ ಮಾಡದಿದ್ರೆ ಉಡಾಯಿಸಿ ಬಿಸಾಕ್ತಿವಿ. ಕ್ಷೌರಿಕ ಸಮಾಜದವರು ಎಲ್ಲಿ ಹೋಗಬೇಕು. ಹೊಟ್ಟೆಗೆ ಏನ್ ತಿನ್ನಬೇಕು. ಇದನ್ನು ಬಿಟ್ರೆ ಬೇರೆ ಏನೂ ಉದ್ಯೋಗ ಬರೋದಿಲ್ಲ. ಎಸ್ಪಿಯವರೇ, ಡಿಸಿಯವರೇ ಇದು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದರು.

ಅದಲ್ಲದೇ, ಬಾಂಗ್ಲಾದೇಶದಿಂದ ಇಲ್ಲಿ ಯಾಕೆ ಬಂದಿದ್ದಾರೆ ಅವರು ಇಲ್ಲೇನು ಕೆಲಸ ಅವರಿಗೆ. ನೀವು ಒದ್ದು ಹೊರಗೆ ಹಾಕ್ತಿರೋ ಅಂಗಡಿ ತೆಗೆದುಹಾಕ್ತಿರೋ., ಅಥವಾ ನಾವೇ ತೆಗೆದುಹಾಕಬೇಕೋ. ಆಮೇಲೆ ಗೊಂದಲ ಆಯ್ತು ಗಲಭೆ ಅಂತ ಹೇಳಗಿಲ್ಲ, ನಿಮಗೆ ಬಿಟ್ಟಿದ್ದೀವಿ ನೀವು ಯಾವುದೇ ಗೊಂದಲ ಗದ್ದಲ ಆಗದಿರುವ ಹಾಗೆ ಅಂಗಡಿ ಕಿತ್ತು ಬಿಸಾಕಿ. ಕೆರೂರು ನಲ್ಲೂ ಒಂದು ಅಂಗಡಿ ಆಗಿದೆ. ಹೀಗೆ ಹಬ್ಬಿಸುತ್ತಾ ಹೋಗ್ತಾರೆ. ಆಮೇಲೆ ಕ್ಷೌರಿಕ ಸಮಾಜದವರ ಹೊಟ್ಟೆಗೆ ನೀವು ಹಾಕ್ತಿರಾ. ಸೋ, ಮುಸ್ಲಿಂ ಸಮಾಜದವರನ್ನ ಒದ್ದು ಒಡಿಸಬೇಕು ಎಂದು ಹೇಳಿದರು.

ಹಿಂದೂ ಸಮಾಜದವರಿಗೂ ಹೇಳ್ತೀನಿ ನಿಮಗೆ ನಾಚಿಕೆ ಮಾನ ಮರಿಯಾದೆ ಏನಾದ್ರೂ ಇದ್ರೆ ಇವತ್ತು ಕೊಲೆಗಳು ಆಗ್ತಿವೆ. ದೇಶದ್ರೋಹಿ ಚಟುವಟಿಕೆ ಆಗ್ತಿವೆ. ಗೋ ಹತ್ಯೆ ಆಗ್ತಿವೆ. ಮತ್ತೆ ಅವರ ಅಂಗಡಿಗೆ ಹೋಗಿ, ಶಗಣಿ ತಿಂತಿದ್ದೀರಿ ಹಿಂದೂ ಸಮಾಜದವರು..? ಯಾಕೆ ಅಲ್ಲಿಯಾಕೆ ಹೋಗ್ತೀರಿ ನೀವು. ನಮ್ಮ ಹಿಂದೂ ಅಂಗಡಿಗಳು ಇಲ್ಲೇನು. ಡಿಸಿ ಅವರಿಗೆ ಎಚ್ಚರಿಕೆ ಕೊಡ್ತಿದ್ದೇನೆ ಇದನ್ನ ಕೂಡಲೇ ಬಂದ್ ಮಾಡಬೇಕು ಎಂದು ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES