Wednesday, January 22, 2025

47ನೇ ವಸಂತಕ್ಕೆ ಕಾಲಿಟ್ಟ ನಟ ಸೂರ್ಯ

ನಟ ಸೂರ್ಯ ಅವರು ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರ್ತ್​ಡೇ ವಿಶ್​ಗಳು ಬರುತ್ತಿವೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಸೂರ್ಯ ಅವರ ಫೋಟೋವನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ಸೂರ್ಯ ಅವರು ಕುಟುಂಬದ ಜತೆ ಮಧ್ಯರಾತ್ರಿಯೇ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಮಯದಲ್ಲಿ ಸೂರ್ಯ ಅವರಿಗೆ ಅತಿ ದೊಡ್ಡ ಗಿಫ್ಟ್ ಸಿಕ್ಕಿದೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಜುಲೈ 22ರಂದು ಪ್ರಕಟ ಮಾಡಲಾಗಿದೆ. ‘ಸೂರರೈ ಪೋಟ್ರು’ ಚಿತ್ರದ ನಟನೆಗೆ ಸೂರ್ಯ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಬರ್ತ್​ಡೇ ಹಿಂದಿನ ದಿನ ಈ ಘೋಷಣೆ ಆಗಿರುವುದು ಅವರ ಪಾಲಿಗೆ ಅತಿ ದೊಡ್ಡ ಗಿಫ್ಟ್​. ಇದನ್ನು ಫ್ಯಾನ್ಸ್ ಕೂಡ ಸಂಭ್ರಮಿಸುತ್ತಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿ ಸಾಕಷ್ಟು ಮಂದಿ ಸೂರ್ಯ ಅವರಿಗೆ ಶುಭಾಶಯ ತಿಳಿಸಿದ್ದಾರೆ.ಇನ್ನೊಂದು ಕಾರಣಕ್ಕೆ ಸೂರ್ಯ ಅವರಿಗೆ ಬರ್ತ್​ಡೇ ವಿಶೇಷವಾಗಿದೆ. ಅವರ ನಟನೆಯ ‘ವಿಕ್ರಮ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಸಿನಿಮಾದಲ್ಲಿ ಸೂರ್ಯ ಅವರು ರೊಲೆಕ್ಸ್ ಹೆಸರಿನ ಪಾತ್ರ ಮಾಡಿದ್ದಾರೆ. ಇದು ಅತಿಥಿ ಪಾತ್ರ. ಆದರೆ, ಅವರ ಪಾತ್ರ ಬೀರಿರುವ ಪ್ರಭಾವ ತುಂಬಾನೇ ದೊಡ್ಡದು. ‘ವಿಕ್ರಮ್​’ ಸಿನಿಮಾದ ಗೆಲುವಿನಲ್ಲಿ ಅವರ ಪಾತ್ರವೂ ದೊಡ್ಡದಿದೆ. ಗೆಲುವಿನೊಂದಿಗೆ ಅವರು ಬರ್ತ್​ಡೇ ಆಚರಿಸಿಕೊಳ್ಳುತ್ತಿರುವುದು ವಿಶೇಷ.

RELATED ARTICLES

Related Articles

TRENDING ARTICLES