Tuesday, April 23, 2024

ತೂಕ ಇಳಿಸಲು ಬಯಸುವವರ ಆಹಾರ ಕ್ರಮ ಹೇಗಿರಬೇಕು? ಪೌಷ್ಠಿಕಾಂಶದ ಫುಡ್ ಯಾವುವು?

ದೇಹದ ತೂಕ ಇಳಿಸಿಕೊಳ್ಳಲು ವ್ಯಾಯಾಮ ಎಷ್ಟು ಮುಖ್ಯವೋ ಅಷ್ಟೇ ಆಹಾರ ಸೇವನೆ ಅಗತ್ಯವಾಗಿರುತ್ತದೆ. ಪ್ರತಿದಿನ ಏನೇನು ತಿನ್ನುತ್ತೀವೋ ಅದರ ಆಧಾರದ ಮೇಲೆ ದೇಹದ ತೂಕದಲ್ಲಿ ವ್ಯತ್ಯಾಸವಾಗುತ್ತದೆ. ಹೀಗಾಗಿ ಆಹಾರ ಪದ್ಧತಿ ಸರಿಯಾಗಿದ್ದರೆ ಮಾತ್ರ ದೇಹದ ತೂಕ ನಿರ್ವಹಣೆ ಸಾಧ್ಯ. ಅದರಲ್ಲೂ ರಾತ್ರಿ ಆಹಾರ ಸರಿಯಾಗಿರಬೇಕು. ರಾತ್ರಿ ಲಘು ಆಹಾರ ಸೇವನೆ ಮುಖ್ಯ, ಜೀರ್ಣ ಶಕ್ತಿ ರಾತ್ರಿ ಹೊತ್ತು ನಿಧಾನವಾಗಿರುವುದರ ಕಾರಣ ಕಡಿಮೆ ಆಹಾರ ಸೇವನೆ ಮಾಡುವುದು ಉಪಯುಕ್ತ.

ಹಾಗಾದರೆ ರಾತ್ರಿ ಊಟಕ್ಕೆ ಏನೆಲ್ಲ ಸೇವನೆ ಮಾಡಬೇಕು, ದೇಹದ ತೂಕ ಇಳಿಕೆಗೆ ಲಘು ಆಹಾರ ಯಾವರೀತಿ ಇರಬೇಕು ಎನ್ನುವ ಮಾಹಿತಿ ತಿಳಿಯೋಣ :

1. ಪ್ರೊಟೀನ್, ಓಟ್ಸ್ ನಿಂದ ತಯಾರಿಸಿದ ಪದಾರ್ಥಗಳನ್ನ ಸೇವಿಸುವುದು ಉತ್ತಮವಾಗಿರುತ್ತದೆ, ಪ್ರೊಟೀನ್, ಓಟ್ಸ್ ನಿಂದ ತಯಾರಿಸಿದ ಇಡ್ಲಿಗಳನ್ನ ನೀವು ರಾತ್ರಿ ಊಟಕ್ಕೆ ಸೇವಿಸಬಹುದು. ವಾರಕ್ಕೆ ಒಮ್ಮೆ ಇದನ್ನ ರಾತ್ರಿ ಊಟದಲ್ಲಿ ನೀವು ತಿನ್ನಬಹುದು. ಪ್ರೊಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ವಿಟಮಿನ್​​ಗಳು ಸಮೃದ್ಧವಾಗಿರುವ ಮೊಟ್ಟೆಗಳು ತೂಕವನ್ನ ಕಳೆದುಕೊಳ್ಳಲು ಸಹಾಯಮಾಡುತ್ತದೆ.

2. ಹಾಗೆಯೇ ರಾತ್ರಿ ಊಟಕ್ಕೆ ನೀವು ಮೊಟ್ಟೆಯಿಂದ ಮಾಡಿದ ಚಾಟ್ ತಿನ್ನಲು ನೀವು ಬಯಸಿದರೆ, ಬೇಯಿಸಿದ 2 ಮೊಟ್ಟೆಗಳನ್ನ ಬಟ್ಟಲಿಗೆ ಹಾಕಿ ಸ್ಮಾಷ್ ಮಾಡಿ, ಸಣ್ಣದಾಗಿ ಕತ್ತರಿಸಿದ ಈರುಳ್ಳಿಯನ್ನ ಬೆರೆಸಿ, ಎಲೆಕೋಸು ಮತ್ತು ಇತರ ತರಕಾರಿಗಳನ್ನ ಬೆರೆಸಿ ಅದಕ್ಕೆ ಸ್ವಲ್ಪ ಉಪ್ಪು, ಮೆಣಸು ಸೇರಿಸಿ ತಿನ್ನಬಹುದು.

3. ರಾತ್ರಿಯ ಊಟದ ಮೂಲಕ ನೀವು ತೂಕವನ್ನ ಇಳಿಸಲು ಬಯಸಿದರೆ ನೀವು ಹುರಿದ ಎಲೆಕೋಸನ್ನ ತಿನ್ನಬಹುದು, ಎಲೆಕೋಸು ಹುರಿದ ನಂತರ ಮಸಾಲೆ ಮತ್ತು ಉಪ್ಪು ಸೇರಿಸಿ ಮಸಾಲೆ ಹಾಕಿ ತಿನ್ನಬಹುದು. ಎಲೆಕೋಸಿನಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ಕೊಬ್ಬಿನಾಂಶಗಳು ತುಂಬಾ ಕಡಿಮೆ ಇರುತ್ತದೆ.

4. ದೇಹದ ಆರೋಗ್ಯಕ್ಕೆ ಮಾತ್ರವಲ್ಲ ತೂಕ ಇಳಿಕೆಗೂ ಮೊಸರು ಉತ್ತಮ ಫಲಿತಾಂಶ ನೀಡುತ್ತದೆ. ಕಡಿಮೆ ಕ್ಯಾಲೋರಿಯನ್ನ ಹೊಂದಿರುವ ಆರೋಗ್ಯಯುತ ಆಹಾರ ಮೊಸರು. ಇದರ ಸೇವನೆಯಿಂದ ದೇಹದ ತೂಕವನ್ನ ಆರಾಮವಾಗಿ ಇಳಿಸಬಹುದು. ಹಾಗಾದರೆ ಮೊಸರು ದೇಹದ ತೂಕದ ನಷ್ಟಕ್ಕೆ ಹೇಗೆ ಸಹಕಾರಿಯಾಗಿದೆ? ಇದರಿಂದ ಅತಿಯಾದ ಬೊಜ್ಜನ್ನ ಇಳಿಸಲು ಉಪಯುಕ್ತವಾಗಿದೆ.

ಇನ್ನು ತೂಕ ಹೆಚ್ಚಾಗಲು ಮುಖ್ಯ ಕಾರಣವೆಂದರೆ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವುದು. ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಅಂಶವು ನಿಮ್ಮ ಕರುಳಿನ ಕಾರ್ಯಗಳನ್ನ ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಸರಿಯಾದ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. ಮೊಸರು ಹಾಲಿಗಿಂತ ಬೇಗ ಜೀರ್ಣವಾಗುತ್ತದೆ. ಈ ರೀತಿಯಾಗಿ ದೇಹದ ತೂಕವನ್ನ ಇಳಿಸಬಹುದಾಗಿದೆ.

RELATED ARTICLES

Related Articles

TRENDING ARTICLES