ಹುಬ್ಬಳ್ಳಿ : ಹಳೇ ಹುಬ್ಬಳ್ಳಿಯ ಹಜರತ್ ಸೈಯದ್ ಫತೇಶ ಅಲಿ ವಲಿ ಅವರ ಉರುಸು ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
608ನೇ ಉರುಸು ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂ ಜನರಿಂದ ಭಾವೈಕ್ಯತೆ ಯಿಂದ ಆಚರಿಸಲಾಗುತ್ತಿದೆ. ಹುಬ್ಬಳ್ಳಿಯ ಫತೇಶ ವಲಿ ದರ್ಗಾ ಕೋಮುಸೌಹಾರ್ದತೆಯ ಪ್ರತೀಕ ಅಂತ ಬಿಂಬಿಲಾಗುತ್ತೆ. ಉರುಸು ಮಹೋತ್ಸವ 2ದಿನಗಳ ಕಾಲ ನಡೆಯುತ್ತೆ. ವಿವಿಧ ರಾಜ್ಯಗಳಿಂದ ಭಕ್ತರು ಉರುಸುನಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸೋದು ವಾಡಿಕೆ. ಸಿದ್ದಾರೂಢರು ಮತ್ತು ಫತೇಶ ವಲಿ ಹುಬ್ಬಳ್ಳಿಯಲ್ಲಿ ನೆಲೆಸಿರುವುದು ಸೂಫಿ ಮತ್ತು ಶರಣರ ಸಂಗಮ ಸಹೋದರ ಸೌಹಾರ್ದತೆಗೆ ಸಾಕ್ಷಿ ಎನ್ನಲಾಗಿದೆ.