Friday, July 19, 2024

ಅಪಾರ್ಟ್​​​ಮೆಂಟ್​​ ಗೋಡೆ ಕುಸಿದು 4 ಮಂದಿ ದುರ್ಮರಣ

ದೇವನಹಳ್ಳಿ : ಅಪಾರ್ಟ್​​ಮೆಂಟ್​​​​ ಗೋಡೆ ಕುಸಿದು ನಾಲ್ವರು ಸಾವನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟ ಹಳ್ಳಿ ಸೌಖ್ಯ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.

ಶೆಡ್​​ ಮೇಲೆ ಗೋಡೆ ಕುಸಿದು ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. ಮೃತ ಕಾರ್ಮಿಕರು ಉತ್ತರ ಭಾರತ ಮೂಲದವರಾಗಿದ್ದಾರೆ. ಶೆಡ್​​​ನಲ್ಲಿ ಒಟ್ಟು 8 ಕಾರ್ಮಿಕರು ಮಲಗಿದ್ದರು. ಈ ವೇಳೆ ಅಪಾರ್ಟ್​​ಮೆಂಟ್​​ ಗೋಡೆ ಕುಸಿದಿದೆ. ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಸ್ಥಳಕ್ಕೆ ASP ಪುರುಷೋತ್ತಮ್​​ ಹಾಗೂ ಹೊಸಕೋಟೆ DySP ಉಮಾಶಂಕರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಾಸಗಿ ಸಂಸ್ಥೆ ಕಾಂಪೌಂಡ್​​​ ನಿರ್ಮಾಣ ಮಾಡಿತ್ತು. ಕೂಲಿ ಕಾರ್ಮಿಕರು ಸೌಪರ್ಣಿಕ ಅಪಾರ್ಟ್​​ಮೆಂಡ್​ ಬಳಿ ತಂಗಲು ತಾತ್ಕಾಲಿಕ ಶೆಡ್​​​ ನಿರ್ಮಿಸಿದ್ದರು.

ರಾತ್ರಿ ಸುರಿದ ಮಳೆಗೆ ಪಕ್ಕದ ಗೋಡೆ ಶೆಡ್​​ ಮೇಲೆ ಕುಸಿದಿದ್ದು, ದುರಂತ ಸಂಭವಿಸಿದೆ. ಮನೋಜ್​​ ಕುಮಾರ್​​​(35), ರಾಮ್​​ ಕುಮಾರ್​​​( 25), ನಿತೀಶ್​​ ಕುಮಾರ್​​​(22) ಸೇರಿಂದಂತೆ ಒಟ್ಟು ನಾಲ್ವರು ಮೃತ ದುರ್ದೈವಿಗಳು. ಇನ್ನು ಘಟನೆಯಲ್ಲಿ ಸುನೀಲ್​​, ಶಂಭು, ದಿಲೀಪ್​​ ಮತ್ತಿತರರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬೈಟ್​​​​​​ಫೀಲ್ಡ್​​​ನ ವೈದೇಹಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES