Sunday, January 19, 2025

ಕ್ರೀಡಾಪಟುಗಳನ್ನು ಹುರಿದುಂಬಿಸಿದ ಪ್ರಧಾನಿ

22ನೇ ಆವೃತ್ತಿಯ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಇಂಗ್ಲೆಂಡ್‍ನ ಬರ್ಮಿಂಗ್‍ಹ್ಯಾಂಗ್ ಸಕಲ ರೀತಿಯಲ್ಲೂ ಸಜ್ಜಾಗಿದೆ. ಜುಲೈ 28 ರಿಂದ ಆಗಸ್ಟ್ 8 ರವರೆಗೆ ಕ್ರೀಡಾಕೂಟ ನಡೆಯುತ್ತಿದ್ದು, 20 ವರ್ಷಗಳ ಬಳಿಕ ಇಂಗ್ಲೆಂಡ್‍ನಲ್ಲಿ ಪ್ರತಿಷ್ಠಿತ ಕ್ರೀಡಾಕೂಟ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಜೊತೆ ವರ್ಚುವಲ್​ ಸಂವಾದ ನಡೆಸಿ, ಸ್ಫೂರ್ತಿ ತುಂಬುವ ಮೂಲಕ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದರು.

ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒತ್ತಡವನ್ನು ಬಿಟ್ಟು ನಿಮ್ಮ ಬಲದೊಂದಿಗೆ ಉತ್ತಮವಾಗಿ ಆಡಿ. ಕೊಯ್​ ನಹಿ ಹೈ ಟಕ್ಕರ್​ ಮೈ, ಕ್ಯೂನ್​ ಪಡೆ ಹೂ ಚಕ್ಕರ್​ ಮೈ ಎಂಬ ಪದವನ್ನು ನೀವು ಕೇಳುರುತ್ತೀರಿ, ಅದೇ ಉತ್ಸಾಹದಲ್ಲೇ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಆಡಿ ಎಂದು ಪ್ರಧಾನಿ ಮೋದಿ ಹೇಳಿದರು. ಜುಲೈ 28ರಂದು ಬರ್ಮಿಂಗ್​ಹ್ಯಾಮ್​ನಲ್ಲಿ ಕಾಮನ್​ವೆಲ್ತ್​ ಗೇಮ್ಸ್​ ಆರಂಭವಾದಾಗ ಅದೇ ದಿನ ತಮಿಳುನಾಡಿನಲ್ಲಿ ಅಂತಾರಾಷ್ಟ್ರೀಯ ಚೆಸ್​ ಒಲಿಂಪಿಯಾಡ್​ ಶುರುವಾಗಲಿದೆ. ಹೀಗಾಗಿ ತಮ್ಮ ಸಾಮರ್ಥ್ಯವನ್ನು ವಿಶ್ವದ ಎದುರು ಸಾಬೀತು ಮಾಡಲು ಮುಂಬರುವ ದಿನಗಳು ಭಾರತೀಯ ಆಟಗಾರರಿಗೆ ಮಹತ್ವವವಾಗಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES