Friday, April 19, 2024

ಮಹದೇಶ್ವರ ಬೆಟ್ಟದಲ್ಲಿ ಶಿವಣ್ಣ ಕೈಗೆ ಕೋಳ ಹಾಕಿದ್ಯಾರು..?

ಆಡು ಮುಟ್ಟದ ಸೊಪ್ಪಿಲ್ಲ. ಶಿವಣ್ಣ ಮಾಡದೇ ಇರೋ ಪಾತ್ರಗಳಿಲ್ಲ. 123 ಸಿನಿಮಾಗಳನ್ನು ಹ್ಯಾಟ್ರಿಕ್​​ ಹೀರೋ ಕಣ್ಣು ಬಿಟ್ಟು ನೋಡುವಷ್ಠರಲ್ಲಿ ಮಾಡಿ ಮುಗಿಸಿದಂತಿದೆ. ಶಿವಣ್ಣನ ಎನರ್ಜಿ ಸಿನಿಮಾದಿಂದ ಸಿನಿಮಾಗೆ ಡಬಲ್​ ಅಗಿರುತ್ತೆ. ಇದೀಗ 123 ಸಿನಿಮಾಗಳನ್ನು ಮೀರಿಸುವ ಹೊಸ ಕಥೆ ಸೃಷ್ಠಿ ಆಗಿದೆ. ಈ ಚಿತ್ರದ ಕಥೆಯೇ ಸಖತ್​​ ಇಂಟ್ರೆಸ್ಟಿಂಗ್​ ಆಗಿದೆ. ಗಂಧದ ಗುಡಿ ನೆನಪಿಸುವ ಕಾಡಿನ ಕೂತೂಹಲದ ಸಿನಿಮಾ ಯಾವುದು ಗೊತ್ತಾ..?

ಮಹದೇಶ್ವರ ಬೆಟ್ಟದಲ್ಲಿ ಶಿವಣ್ಣ ಕೈಗೆ ಕೋಳ ಹಾಕಿದ್ಯಾರು..?

ವೀರಪ್ಪನ್​​ ಅಟ್ಟಹಾಸ ಮೆರೆದ ಕಾಡಿನಲ್ಲಿ ಶಿವಣ್ಣ ಟೆಂಟ್​​​..!

ಮಾಫಿಯಾ ಚಿತ್ರದ ಯುವ ನಿರ್ದೇಶಕರಿಗೆ ಶಿವಣ್ಣ ಕಾಲ್​​ಶೀಟ್​​​​​..!

ಕೊರಳಲ್ಲಿ ರುದ್ರಾಕ್ಷಿ.. ಕೈಯಲ್ಲಿ ಕೋಳ.. ಶಾಂತಿ – ಕ್ರಾಂತಿ ಸಂಗಮ

ದೊಡ್ಮನೆಯ ಹಿರಿಯ ಕುಡಿ ಡಾ.ಶಿವಣ್ಣ ಮೊನ್ನೆಯಷ್ಟೆ ತಮ್ಮ 60ನೇ ಬರ್ತ್​ಡೇ ಸೆಲೆಬ್ರೇಟ್​ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಅವ್ರ ಹೊಸ ಸಿನಿಮಾಗಳ ವಿಭಿನ್ನ  ಪೋಸ್ಟರ್​ಗಳು ರಿಲೀಸ್​ ಆಗೋ ಮೂಲಕ ಚಿತ್ರರಸಿಕರಿಗೆ ಅಚ್ಚರಿ ಮೂಡಿಸಿವೆ. ಇಷ್ಟೊಂದು ಸಿನಿಮಾಗಳಲ್ಲಿ ಅಭಿನಯಿಸೋಕೆ, ಸ್ಟಿಲ್​ ಯಂಗ್​​ ಅಂಡ್​ ಎನರ್ಜಿಟಿಕ್​ ಹೀರೋ ಶಿವಣ್ಣನಿಗೆ ಮಾತ್ರ ಸಾಧ್ಯ. ಇತ್ತ ಬೈರಾಗಿ ರಾಜ್ಯಾದ್ಯಂತ ಧೂಳೆಬ್ಬಿಸ್ತಾ ಇದ್ರೆ, ಮುಂದಿನ ಸಿನಿಮಾ ಸತ್ಯಮಂಗಳ ಫಸ್ಟ್​ ಲುಕ್​​ ಕಿಚ್ಚು ಹಚ್ಚಿದೆ.

ಸತ್ಯಮಂಗಳ ಹೆಸ್ರು ಕೇಳಿದ ತಕ್ಷಣ, ಎರಡು ರಾಜ್ಯಗಳನ್ನು ಬೆಚ್ಚಿ ಬೀಳಿಸಿದ್ದ ಕಾಡುಗಳ್ಳ ವೀರಪ್ಪನ್​ ನೆನಪಾಗುತ್ತಾನೆ. ಈ ಸಿನಿಮಾ ಕೂಡ ಕಂಪ್ಲೀಟ್​ ಫಾರೆಸ್ಟ್​ ಮೇಲೆ ಇರೋದ್ರಿಂದ, ದಂತಚೋರ ವೀರಪ್ಪನ್​ಗೂ, ಈ ಸಿನಿಮಾಗೂ ಲಿಂಕ್​ ಇದೆಯಾ ಅನ್ನೋ ಕುತೂಹಲ ಮೂಡಿದೆ. ಈ ಸಿನಿಮಾದ ಪೋಸ್ಟರ್​​ನಲ್ಲಿ ಶಿವಣ್ಣನ ಕೈಗೆ ಕೋಳ ತೊಡಿಸಿದ್ದಾರೆ. ಇದ್ರ ಜತೆಯಲ್ಲಿ ಒನ್ಸ್​ ಎ ಗ್ಯಾಂಗ್​ಸ್ಟರ್​​​​ ಈಸ್​ ಆಲ್ವೇಸ್​ ಎ ಗ್ಯಾಂಗ್​​ಸ್ಟರ್​​ ಎಂಬ ಸಬ್​ಟೈಟಲ್​​ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಿದೆ. ಸತ್ಯಮಂಗಳ ಕಾಡಿನ ಮೇಲೆ ಚಿತ್ರಕಥೆ ಸಾಗೋದ್ರಿಂದ ಮತ್ತೊಮ್ಮೆ ಗಂಧದಗುಡಿ  ನೆನಪಿಸೋದ್ರಲ್ಲಿ ನೋ ಡೌಟ್​​.

ಮಮ್ಮಿ ಸಿನಿಮಾ ಡೈರೆಕ್ಟ್​ ಮಾಡಿ ಸಕ್ಸಸ್​ ಕಂಡಿದ್ದ ಯುವನಿರ್ದೇಶಕ ಲೋಹಿತ್​ ಸತ್ಯಮಂಗಳ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳ್ತಿದ್ದಾರೆ. ದಟ್ಟವಾದ ಕಾಡು , ಮರಿಜೋನಾ ಗಿಡಗಳು, ನಡುವಲ್ಲಿ ಕರಿಚಿರತೆ ಇರೋ ಸತ್ಯಮಂಗಳ ಚಿತ್ರದ ಪೋಸ್ಟರ್​ ಕೂಡ ಯ್ಯೂನಿಕ್​ ಆಗಿದೆ. ಶಿವಣ್ಣನ 123 ಸಿನಿಮಾ ಅವತಾರಗಳಿಗಿಂತ ಈ ಸಿನಿಮಾ ಡಿಫರೆಂಟ್​ ಆಗಿರಲಿದೆಯಂತೆ. 90ರ ದಶಕದ ಕಥೆಯನ್ನು ಸಖತ್​ ವರ್ಕ್​​ಔಟ್​ ಮಾಡಿ, ನಾಲ್ಕು ತಿಂಗಳ ಕಾಲ ಕಥೆಗೆ ಹೊಸ ಶೇಪ್​ ಕೊಟ್ಟು ಶಿವಣ್ಣ ಅವ್ರನ್ನು ಒಪ್ಪಿಸಲಾಗಿದೆ.

ಬೈರಾಗಿ ಚಿತ್ರದ ಯಂಗೆಸ್ಟ್​​ ಪ್ರೊಡ್ಯುಸರ್​ ಕೃಷ್ಣಸಾರ್ಥಕ್​​ ಸತ್ಯಮಂಗಳ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ. ಬೈರಾಗಿ ಸಿನಿಮಾಗೆ ಬಂಡವಾಳ ಹೂಡಿದ್ದ ಕೃಷ್ಣಸಾರ್ಥಕ್​​ ಅವ್ರೇ ಈ ಸಿನಿಮಾ ನಿರ್ಮಾಣ ಮಾಡ್ತಾ ಇರೋದ್ರಿಂದ, ಸಹಜವಾಗಿ ಕಾತರ ಹೆಚ್ಚಾಗಿದೆ. ಚಿತ್ರದ ಕಥೆ ಕೇಳಿದ ತಕ್ಷಣಕ್ಕೆ ಎಲ್ಲೂ ಕಾಂಪ್ರಮೈಸ್​ ಆಗದೆ ನಿರ್ಮಾಪಕರು ಓಕೆ ಮಾಡಿದ್ದಾರೆ.

ಶಿವಣ್ಣ ಕೂಡ ಸಖತ್​ ಎಗ್ಸೈಟ್​ ಆಗಿದ್ದಾರಂತೆ. ಫಸ್ಟ್​ ಲುಕ್​​ನಲ್ಲಿ ಶಿವಣ್ಣನ ಕೊರಳಲ್ಲಿ ರುದ್ರಾಕ್ಷಿ ಇದೆ. ಕೈಯಲ್ಲಿ ಕೋಳ ಇದೆ. ಶಾಂತಿ ಕ್ರಾಂತಿ ಸಂಗಮ ಈ ಸಿನಿಮಾದಲ್ಲಿ ಇರುತ್ತಾ ಅನ್ನೋದು ಇನ್ನೂ ಸಸ್ಪೆನ್ಸ್​ ಆಗಿದೆ. ಬಹುತೇಕ ಕಾಡಿನಲ್ಲೇ ಸಿನಿಮಾ ಕಥೆ ಸಾಗೋದ್ರಿಂದ ಕನ್ನಡದಲ್ಲಿ ಮತ್ತೊಂದು ವಿಭಿನ್ನ ಸಿನಿಮಾ ಸಾಲಿಗೆ ಸತ್ಯಮಂಗಳ ಸೇರಲಿದೆ.

ಫ್ಲೊ…

ಈ ಸಿನಿಮಾದಲ್ಲಿ ಹ್ಯಾಟ್ರಿಕ್​ ಹೀರೋ ಮೂರು ವಿಭಿನ್ನ ಲುಕ್​ನಲ್ಲಿ ಮಿಂಚಲಿದ್ದಾರಂತೆ. ಸಿನಿಮಾದ ಕಥೆ ಏನು, ಯಾರೆಲ್ಲಾ ಸಿನಿಮಾದಲ್ಲಿ ಆ್ಯಕ್ಟ್​ ಮಾಡ್ತಾರೆ ಅನ್ನೋ ಗುಟ್ಟು ಬಿಟ್ಟು ಕೊಟ್ಟಿಲ್ಲ ಚಿತ್ರತಂಡ. ನಿರ್ಮಾಪಕ ಕೃಷ್ಣಸಾರ್ಥಕ್​​ಗೆ ಈ ಸಿನಿಮಾ ದೊಡ್ಡ ಕನಸಂತೆ. ಹಾಗಾಗಿ ಭೀಮ ಸಿನಿಮಾ ನಂತ್ರ ಈ ಸಿನಿಮಾ ಟೇಕ್​ ಆಫ್​ ಆಗಬಹುದು ಅನ್ನೋ ಟಾಕ್​ ಶುರುವಾಗಿದೆ. ಇನ್ನೂ ಈ  ಚಿತ್ರದಲ್ಲಿ ವೈಲ್ಡ್​ ಫಾರೆಸ್ಟ್​ ಜೊತೆ ಕಾಡಿನ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES