Thursday, December 19, 2024

ಪತಿಯನ್ನೇ ಕೊಲೆಗೈದ ಕಿರಾತಕಿ ಪತ್ನಿ

ಬಾಗಲಕೋಟೆ: ಸುಂದರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದೆ ಪ್ರಿಯಕರನ ಎಂಟ್ರಿ. ಪ್ರಿಯಕರನ ಜೊತೆಗಿನ ಸರಸ ಸಲ್ಲಾಪ ಪತ್ನಿಗೆ ಗೊತ್ತಾಗುತ್ತಿದ್ದಂತೆ ಕಿರಾತಕಿ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪರಲೋಕಕ್ಕೆ ಕಳಿಸಿದ್ದಾಳೆ.

ಜುಲೈ 2ರಂದು ಬಾಗಲಕೋಟೆಯ ಕಮತಗಿ ಬಳಿ ನಡೆದ ಪ್ರವೀಣ್ ಸೇಬಣ್ಣವರ ಸಾವಿಗೆ ಸ್ಫೋಟಕ ತಿರುವು ಸಿಕ್ಕಿದ್ದು, ಅದು ಅಪಘಾತವಲ್ಲ, ಮರ್ಡರ್ ಎಂಬುದು ಸಾಬೀತಾಗಿದೆ. ಮರ್ಡರ್ ಮಾಡಿದ ಆರೋಪಿ ಬೇರಾರು ಅಲ್ಲ, ತಾನೇ ಪ್ರೀತಿಸಿ ಮದುವೆ ಆಗಿದ್ದ ಪತ್ನಿ. ಹೌದು ಪತ್ನಿ ನಿತ್ಯಾ ಲವರ್ ಜೊತೆ ಸೇರಿ ಗಂಡನನ್ನೆ ಕೊಲೆ ಮಾಡಿ ಈಗ ಕಂಬಿ ಎಣಿಸುವಂತಾಗಿದೆ.

ಕಮತಗಿ ಕ್ರಾಸ್ ಬಳಿ ಜುಲೈ 2 ಮಧ್ಯರಾತ್ರಿ 12ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಕುರಿತು ಅಮಿನಗಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತಿ ಪ್ರವೀಣ್​ನನ್ನು ಅವನ ಪತ್ನಿ ನಿತ್ಯಾ ಹಾಗೂ ಲವರ್ ರಾಘವೇಂದ್ರ ಕೊಲೆ ಮಾಡಿರುವ ಬಗ್ಗೆ ಪೊಲೀಸರ ತನಿಖೆಯಿಂದಾಗಿ ಬೆಳಕಿಗೆ ಬಂದಿದೆ. ಪ್ರವೀಣ್- ನಿತ್ಯಾಳಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಗ್ಯಾರೇಜ್ ಇಟ್ಟಕೊಂಡಿದ್ದ ರಾಘವೇಂದ್ರ ಎಂಬುವನ ಪರಿಚಯವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ, ಆ ಪ್ರೀತಿ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ಗಂಡ ಪ್ರವೀಣ್​​​ಗೆ ತಿಳಿದ ತಕ್ಷಣವೇ ಅಲರ್ಟ್ ಆದ ನಿತ್ಯಾ ಹಾಗೂ ಪ್ರಿಯಕರ ರಾಘವೇಂದ್ರ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಪತಿ ಪ್ರವೀಣ್ ಶಿರವಾರದಿಂದ ಸ್ವಗ್ರಾಮಕ್ಕೆ ಹಿಂದಿರುಗುವಾಗ ಕಮತಗಿ ಕ್ರಾಸ್ ಬಳಿ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ.

ಒಟ್ಟಿನಲ್ಲಿ ಜೀವನದ ಜೊತೆಗೆ ಸಂಗತಿಯಾಗಿ ಇರಬೇಕದವಳೇ ಪ್ರೀತಿಸಿ ಮದುವೆಯಾದವನನ್ನೆ ಕೊಲೆ ಮಾಡಿ ತಾನೂ ಜೈಲು ಸೇರಿದ್ದಾಳೆ. ತಂದೆ, ತಾಯಿ ಇಬ್ಬರೂ ಇಲ್ಲದೆ ಮಕ್ಕಳು ಅನಾಥವಾಗಿದ್ದಾರೆ.

ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ

RELATED ARTICLES

Related Articles

TRENDING ARTICLES