Monday, December 23, 2024

ನಾನು ಸ್ಟೇಟ್ ಫಿಗರ್ ಅಲ್ಲ : ಸಚಿವ ಎಸ್ ಟಿ ಸೋಮಶೇಖರ್

ಬೆಂಗಳೂರು: ನಾನ್ಯಾಕೆ ನನ್ನ ಕ್ಷೇತ್ರ ಬಿಟ್ಟುಕೊಡಲಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಕಿಡಿಕಾಡಿದ್ದಾರೆ.

ಸತತವಾಗಿ ಗೆಲ್ಲುವ ಸಚಿವರು ಕ್ಷೇತ್ರ ಬದಲಿಸಬೇಕು ಎಂಬ ಸಚಿವ ಮುನಿರತ್ನ ಸಲಹೆ ವಿಚಾರಕ್ಕೆ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ರಿ ನಾನ್ಯಾಕೆ ನನ್ನ ಕ್ಷೇತ್ರ ಬಿಟ್ಟುಕೊಡಲಿ. ಕಷ್ಡಪಟ್ಟಿದ್ದೀವಿರಿ, ನಮ್ಮ ಕ್ಷೇತ್ರದಲ್ಲಿ ಜನರ ಜೊತೆಗೆ ಗುರುತಿಸಿಕೊಂಡಿದ್ದೀವಿ. ನಾನ್ಯಾಕೆ ನನ್ನ ಕ್ಷೇತ್ರ ಬಿಟ್ಟುಕೊಡಲಿ? ಬೇರೆಯವರು ಬೇಕಿದರೆ ಅದೆಲ್ಲಾ ಮಾಡಲಿ. ಸಲಹೆ ಕೊಟ್ಟವರು ಸ್ಟೇಟ್ ಫಿಗರ್ ಇರಬಹುದು. ಆದರೆ, ನಾನು ಸ್ಟೇಟ್ ಫಿಗರ್ ಅಲ್ಲ, ನಾನೊಬ್ಬ ಸಣ್ಣ ಕ್ಷೇತ್ರದ ಶಾಸಕ. ಬೇರೆಯವರು, ಕೆಪ್ಯಾಸಿಟಿ ಇರೋರು ಏನಾದರೂ ಮಾಡಲಿ ಎಂದು ಬಹಿರಂಗವಾಗಿ ವಿರೋಧ ಮಾಡಿದಲ್ಲದೇ ಟಾಂಗ್ ನೀಡಿದ್ದಾರೆ.

ಇನ್ನು ಎಲ್ಲರಿಗೂ ಡಿಕೆಶಿ ತರಹ ಹೇಳುವ ಅಧಿಕಾರ ಇದೆ. ಪ್ರಜಾಪ್ರಭುತ್ವದಲ್ಲಿ 224 ಜನ ಶಾಸಕರು ಚುನಾಯಿತರಾಗ್ತಾರೆ.ಅವರು ಯಾರನ್ನು ಸಿಎಂ ಆಗಬೇಕು ಅಂತಾರೋ ಅವರೇ ಆಗ್ತಾರೆ. ಡಿಕೆಶಿ ಒಂದು ಪಕ್ಷದ ಅಧ್ಯಕ್ಷರಿದ್ದಾರೆ. ಯಾವುದೋ ಖಾಸಗಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ, ಯಾವುದೇ ಒಂದು ಸಮುದಾಯ ಒಂದು ಪಾರ್ಟಿಗೆ ಸೀಮಿತ ಅಲ್ಲ. ಡಿಕೆಶಿ ಒಕ್ಕಲಿಗ ನಾಯಕರಲ್ಲ ಅಂತಲ್ಲ. ಹಾಗಂತ ಇಡೀ ಒಕ್ಕಲಿಗರು ಅವರೊಬ್ಬರಿಗೇ ಬೆಂಬಲ ನೀಡುತ್ತಿಲ್ಲ. ಬಿಜೆಪಿ 100% ಪರ್ಸಂಟ್ ಅಧಿಕಾರಕ್ಕೆ ಬರುತ್ತದೆ. ಇನ್ನು ಹಳೆ ಮೈಸೂರು ಭಾಗದಲ್ಲಿ ನಮಗೇನೂ ರಿಸ್ಕ್ ಇಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES