Thursday, April 25, 2024

ಬಂಧನಕ್ಕೆ ತಡೆ ಕೋರಿ ನೂಪುರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ

ನವದೆಹಲಿ: ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಹಲವು ಎಫ್‌ಐಆರ್‌ಗಳಾಗಿವೆ ಈ ಮಧ್ಯೆ, ಬಂಧನದ ಭೀತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧನಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ವಿರುದ್ಧ ದೇಶಾದ್ಯಂತ ಸಾಕಷ್ಟು ಎಫ್‌ಐಆರ್ ದಾಖಲಾಗಿದೆ. ನೂಪುರ್ ಅವರು ಎಲ್ಲಾ ಎಫ್‌ಐಆರ್‌ಗಳನ್ನು ಒಂದೆಡೆಗೆ ತರಲು ನಿರ್ದೇಶನವನ್ನು ಕೋರಿದ್ದಾರೆ. ನೂಪುರ್ ಶರ್ಮಾ ತಮಗಿರುವ ಜೀವ ಬೆದರಿಕೆಯ ಬಗ್ಗೆಯೂ ಕೋರ್ಟ್‌ಗೆ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಕೂಡ ನೂಪುರ್‌ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ನಂತರ, ತನಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದಿವೆ ಎಂದು ಹೇಳಿದ್ದಾರೆ.. ಶರ್ಮಾ ತನ್ನ ವಿರುದ್ಧ ದಾಖಲಾಗಿರುವ 9 ಎಫ್‌ಐಆರ್‌ಗಳಲ್ಲಿ ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತನ್ನ ವಿರುದ್ಧ ದೆಹಲಿಯಲ್ಲಿ ಎಫ್‌ಐಆರ್ ದಾಖಲಾಗಿರುವುದರಿಂದ, ಇತರ ಸ್ಥಳಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ದೆಹಲಿ ಪ್ರಕರಣದೊಂದಿಗೆ ಜೋಡಿಸಬೇಕು ಎಂದು ಶರ್ಮಾ ದೇಶಾದ್ಯಂತ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಕ್ಲಬ್ ಮಾಡಲು ನಿರ್ದೇಶನವನ್ನು ಕೋರಿದ್ದಾರೆ.

RELATED ARTICLES

Related Articles

TRENDING ARTICLES