Thursday, April 25, 2024

ಮತ್ತೆ ಸದ್ದು ಮಾಡಿದ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ

ಬೆಂಗಳೂರು : ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಿದ್ರು. 15 ದಿನದಲ್ಲಿ ‌ಕೇಸ್‌ನಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದು ಈಶ್ವರಪ್ಪ ‌ಹೇಳಿಕೊಂಡಿದ್ದರು. ಆದರೆ ರಾಜೀನಾಮೆ ನೀಡಿ ತಿಂಗಳುಗಳೇ ಕಳೆದರೂ ಪ್ರಕರಣದ ತನಿಖೆ ಕುಂಟುತ್ತಲೇ ಇದೆ. ಹೀಗಾಗಿ ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ಅಳಲನ್ನು ತೋಡಿಕೊಂಡಿದ್ದಾರೆ.

ತಮ್ಮ ಹಣಬಲ, ರಾಜಕೀಯ ಬಲ ಬಳಸಿ ಆತ್ಮಹತ್ಯೆ ಪ್ರಕರಣ ತನಿಖೆ ದಿಕ್ಕು ತಪ್ಪಿಸಿರುವ ಅನುಮಾನವಿದೆ. ಪೊಲೀಸ್ ಅಧಿಕಾರಿಗಳು ಈ ಕೇಸ್‌ನ ಪ್ರತಿ ಹಂತದ ತನಿಖೆ ಸೋರಿಕೆ ಮಾಡುತ್ತಿದ್ದಾರೆ. ಈ ಮೂಲಕ ಈಶ್ವರಪ್ಪಗೆ ಅನುಕೂಲ ಮಾಡಿ ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಇದೇ ಕಾರಣಕ್ಕಾಗಿ ಈಶ್ವರಪ್ಪ ಅವರು ಬಹಿರಂಗವಾಗಿ ಪ್ರಕರಣದಿಂದ ಹೊರಬರುವ ಮಾತುಗಳನ್ನ ಆಡಿದ್ದಾರೆ. ಹೀಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಕುಟುಂಬಕ್ಕೆ ನ್ಯಾಯ ಸಿಗುತ್ತೋ..? ಇಲ್ಲವೋ ಎಂಬ ಅನುಮಾನ ಕಾಡತೊಡಗಿದೆ. ಹೀಗಾಗಿ ರಾಜ್ಯಪಾಲರಿಗೆ ಪತ್ರ ಬರೆದು ಪಾರದರ್ಶಕ ತನಿಖೆಗೆ ಮನವಿ ಮಾಡಿಕೊಂಡಿದ್ದಾರೆ.

40% ಕಮಿಷನ್ ‌ಕೇಸ್ ಮತ್ತೆ ಸದ್ದು‌ಮಾಡುತ್ತಿದೆ. ಸಂತೋಷ್ ಪಾಟೀಲ್ ಪತ್ನಿ ಪತ್ರ ಬರೆದದನ್ನ ಬೆಂಬಲಿಸಿ‌ದ ಕಾಂಗ್ರೆಸ್ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ತನಿಖೆಗೆ ವಹಿಸಿದ ಮೇಲೂ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ತನಿಖೆಗೆ ಆದೇಶಿಸಿದ್ದೇ ಈ‌ ಎಪಿಸೋಡ್ ಕವರಪ್ ಮಾಡೋಕೆ. ಹೀಗಾಗಿ ಸಂತೋಷ್ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ಬಿಜೆಪಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡ್ತಿದೆ ಅಂತ ಆರೋಪ‌ ಮಾಡಿದ್ದಾರೆ. ಸಿಟ್ಟಿಂಗ್ ಜಡ್ಜ್ ಮೂಲಕ ತನಿಖೆ ಮಾಡಲು ಕಾಂಗ್ರೆಸ್ ‌ನಾಯಕರು ಆಗ್ರಹಿಸಿದ್ದಾರೆ.

ಸದ್ಯ 40% ಕಮಿಷನ್ ಪ್ರಕರಣದಲ್ಲಿ ನ್ಯಾಯ‌ಕೊಡಿಸಿ ಅಂತ ಸಂತೋಷ್ ಪತ್ನಿ ರಾಜಭವನದ ಕದ ತಟ್ಟಿದ್ದಾರೆ. ಕಾಂಗ್ರೆಸ್ ‌ಮತ್ತೆ ಆತ್ಮಹತ್ಯೆ ‌ಕೇಸ್ ಇಟ್ಟುಕೊಂಡು ಈಶ್ವರಪ್ಪ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಈ ಪ್ರಕರಣ ಮುಂದೆ ಯಾವ ಆಯಾಮ‌ ಪಡೆದುಕೊಳ್ಳತ್ತದೋ ಕಾದುನೋಡಬೇಕಿದೆ

ರೂಪೇಶ್ ಬೈಂದೂರು ‌ಪವರ್ ಟಿವಿ

RELATED ARTICLES

Related Articles

TRENDING ARTICLES