Friday, April 19, 2024

ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಎತ್ತಿಹಿಡಿಯಬೇಕು : ಡಿ.ಕೆ. ಶಿವಕುಮಾರ್

ಬೆಂಗಳೂರು : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಎತ್ತಿಹಿಡಿಯಬೇಕು ಎಂದು ಸದಾಶಿವನಗರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಎತ್ತಿಹಿಡಿಯಬೇಕು. ಅಧಿವೇಶನದ ಸಮಯದಲ್ಲಿ ಬೇಕಾದನ್ನ ತೋರಿಸೋದು ಬೇಡದನ್ನ ತೋರಿಸೋದು, ಪ್ರಜಾಪ್ರಭುತ್ವದಲ್ಲಿ ನಿಮ್ಮ ಕೆಲಸ ನೀವು ಮಾಡಿದ್ದೀರಿ ಎಲ್ಲಾ ಅಧಿಕಾರಿಗಳು ಕೆಟ್ಟವರು, ಒಳ್ಳೆಯವರು ಎಂದು ನಾನು ಹೇಳಲ್ಲ ಎಂದರು.

ಇನ್ನು, ಅಧಿವೇಶನದಲ್ಲಿ ಮಾಧ್ಯಮದವರನ್ನ ಹೊರಗೆ ಹಾಕಿದಾಗಲೇ ನೀವು ಪ್ರತಿಭಟನೆ ಮಾಡಬೇಕಿತ್ತು. ಆದ್ರೆ ಅವತ್ತು ನೀವು ಪ್ರತಿಭಟನೆ ಮಾಡಿಲ್ಲ. ಈಗ ಮಾಧ್ಯಮದಲ್ಲಿ ದೊಡ್ಡ ಸುದ್ದಿ ಆದ್ಮೇಲೆ ರಾತ್ರೋ ರಾತ್ರಿ ಆದೇಶ ವಾಪಸ್ ಆಗಿದೆ. ಸರ್ಕಾರದ ನಡೆಗೆ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನ್ಯಾಯ ಸಿಕ್ಕಿಲ್ಲ,ರಕ್ಷಣೆ ಸಿಕ್ಕಿಲ್ಲ,ಡುಡ್ಡು ಸಿಕ್ಕಿಲ್ಲ. ಹೀಗಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಗೋವಿಂದ ಕಾರಜೋಳ ಸೇರಿದಂತೆ ಹಲವು ಮಂತ್ರಿಗಳು ಹೋಗಿ ದುಡ್ಡು ಕೊಡಿಸುತ್ತೇವೆ ಅಂತ ಹೇಳಿದ್ದರು. ಮಂತ್ರಿ ಹೇಳಿದ್ದೇಕೆ ಕೆಲಸ ಮಾಡಿದ್ದಾನೆ. ಕಮಿಷನ್ ಕೇಳಿದ್ದಕ್ಕೆ ಅಲ್ವಾ ಅವರ ಸೂಸೈಡ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES