ಶ್ರೀನಗರ : ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಆರು ಯಾತ್ರಿಕರು ಮತ್ತು ಕುದುರೆ ಸವಾರನೊಬ್ಬ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾರೆ.
ಇದರೊಂದಿಗೆ ಒಟ್ಟಾರೇ ಮೃತಪಟ್ಟವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 8 ರಂದು ಸಂಭವಿಸಿದ್ದ ದಿಢೀರ್ ಪ್ರವಾಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ 15 ಯಾತ್ರಿಗಳು ಕೂಡಾ ಇದರಲ್ಲಿ ಸೇರಿದ್ದಾರೆ.
ಜೂನ್ 30 ರಿಂದ ಆರಂಭವಾದ ಯಾತ್ರೆಯಲ್ಲಿ ಈವರೆಗೆ 47 ಯಾತ್ರಿಗಳು ಹಾಗೂ ಇಬ್ಬರು ಕುದುರೆ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಪಹಲ್ಗಾಮ್‌ನ ಆಳವಾದ ಕಂದರಕ್ಕೆ ಕುದುರೆಯಿಂದ ಬಿದ್ದು ಕುದುರೆ ಸಾವನ್ನೊಬ್ಬ ಸಾವನ್ನಪ್ಪಿದ್ದ. ಜುಲೈ 8 ರಂದು ಗುಹಾ ದೇಗುಲದ ಸಮೀಪ ಸಂಭವಿಸಿದ ಪ್ರವಾಹದಲ್ಲಿ 15 ಯಾತ್ರಿಗಳು ಪ್ರಾಣ ಕಳೆದುಕೊಂಡಿದ್ದರೆ ಸುಮಾರು 55 ಜನರು ಗಾಯಗೊಂಡಿದ್ದರು. ಇಲ್ಲಿಯವರೆಗೆ 1.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಗುಹಾ ದೇಗುಲಕ್ಕೆ ಭೇಟಿ ನೀಡಿದ್ದಾರೆ.