Wednesday, January 22, 2025

ಬಿಬಿಎಂಪಿ ವಾರ್ಡ್‌ಗೆ ಪುನೀತ್‌ ರಾಜ್‌ಕುಮಾರ್‌ ಹೆಸರು ಸೇರ್ಪಡೆ

ಬೆಂಗಳೂರು : ಬಿಬಿಎಂಪಿ ವಾರ್ಡ್‌ಗೆ ಪುನೀತ್‌ ರಾಜ್‌ಕುಮಾರ್‌ ಹೆಸರು ಸೇರ್ಪಡೆಯಾಗಬೇಕೆಂದು ರಾಜ್ಯ ಸರ್ಕಾರದಿಂದ ಗುರುವಾರ ರಾತ್ರಿ ಅಂತಿಮ ಅಧಿಸೂಚನೆ

ಬಿಬಿಎಂಪಿ ವಾರ್ಡ್‌ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು, ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ 23 ವಾರ್ಡ್‌ಗಳ ಹೆಸರು ಬದಲಾವಣೆ ಮಾಡಲಾಗಿದೆ. ಸುಮಾರು 40 ವಾರ್ಡ್​ಗಳ ಗಡಿಯಲ್ಲಿ ಕೆಲವು ಬದಲಾವಣೆ ಮಾಡಿದ್ದು, ರಾಜ್ಯ ಸರ್ಕಾರದಿಂದ ಗುರುವಾರ ರಾತ್ರಿ ಅಂತಿಮ ಅಧಿಸೂಚನೆ ನೀಡಲಾಗಿದೆ.

ಬಹುಜನರ ಬೇಡಿಕೆಯಂತೆ ಪುನೀತ್​​ ರಾಜ್​ಕುಮಾರ್​​ ಹೆಸರು ಸೇರ್ಪಡೆಗೊಂಡಿದ್ದು, ಕರಡಿನಲ್ಲಿದ್ದ ಕೆಲವು ವಾರ್ಡ್​​ಗಳ ಹೆಸರನ್ನು ಅದಲು ಬದಲು ಮಾಡಲಾಗಿದೆ. ಅಧಿಸೂಚನೆಯಲ್ಲಿ 180 ಮತ್ತು230 ವಾರ್ಡ್​​ಗಳೆರಡಕ್ಕೂ ಅಗರ ಎಂದೇ ಹೆಸರಿಸಲಾಗಿದೆ. ಸರ್ಕಾರ ಜೂನ್​ 23ರಂದು ಕರಡು ಅಧಿಸೂಚನೆ ಹೊರಡಿಸಿತ್ತು.

ಇನ್ನು, ಜುಲೈ 7 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿತ್ತು. ಒಟ್ಟು 3833 ಆಕ್ಷೇಪಣೆಗಳು ಬಿಬಿಎಂಪಿಗೆ ಬಂದಿವೆ. ಇದರಲ್ಲಿ 1700 ಅರ್ಜಿಗಳು ವಾರ್ಡ್​​ ಹೆಸರು ಬದಲಾಣೆಗೆ ಆಗ್ರಹಿಸಿದ್ದವು. ನಂತರ ಜುಲೈ 11 ಮತ್ತು 12ರಂದು ಪರಿಶೀಲನಾ ಸಮಿತಿ ಸಭೆ ಮಾಡಲಾಗಿತ್ತು. ಅಂತಿಮವಾಗಿ 198 ವಾರ್ಡ್​​ಗಳಿಂದ 243 ವಾರ್ಡ್​​ಗಳಿಗೆ ಪುನರ್​ ವಿಂಗಡಣೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES