ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಬದಲು ಭ್ರಷ್ಟಚಾರಕ್ಕೆ ಕುಮ್ಮಕ್ಕು ನೀಡುವಂತ ವಿವಾದತ್ಮಾಕ ಆದೇಶವನ್ನ ಸರ್ಕಾರ ಹೊರಡಿಸಿದೆ. ಪವರ್ ಟಿವಿಯ ಪವರ್ ಸ್ಟ್ರಿಂಗ್ ಆಪರೇಷನ್‌ಗಳಿಗೆ ಬೆದರಿರುವ ಸರ್ಕಾರ, ಇನ್ಮುಂದೆ ಸರ್ಕಾರಿ ಕಚೇರಿಯಲ್ಲಿ ಫೋಟೋ,ವಿಡಿಯೋ ಚಿತ್ರೀಕರಣ ಮಾಡದಂತೆ ಎಡವಟ್ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ.. ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.. ಸರ್ಕಾರ ಮಾಡದ್ದನ್ನು, ಮೀಡಿಯಾಗಳು ಮಾಡಿದ್ರೆ ಏನಾದ್ರೂ ಪ್ರಾಬ್ಲಮ್ಮಾ..? ಹೌದು, ಇಂತಹದ್ದೇ ಪ್ರಶ್ನೆ ಇವಾಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿದೆ.
ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಡವಟ್ಟು ಆದೇಶವೊಂದನ್ನ ಹೊರಡಿಸಿದೆ. ಈ ಮೂಲಕ ಲೂಟಿಕೋರರ ಬೆನ್ನಿಗೆ ಸ್ವತಃ ಸರ್ಕಾರ ನಿಂತಂತೆ ಕಾಣುತ್ತಿದೆ. ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ಸಾಲು ಸಾಲು ಹಿರಿಯ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಮುದ್ದೆ ಮುರಿಯಲು ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ನಿರ್ಧಾರ ತೆಗೆದುಕೊಳ್ಳುವ ಬದಲು ಸರ್ಕಾರ ವಿವಾದಾತ್ಮಕ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಅನಧಿಕೃತ ವ್ಯಕ್ತಿಗಳು ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಬಾರದೆಂದು ಎಡವಟ್ ಆದೇಶವೊಂದನ್ನು ಹೊರಡಿಸಿದೆ. ಈ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಸರ್ಕಾರ ಗುರಿಯಾಗಿದೆ.
ಪವರ್ ಟಿವಿಯ ಸ್ಟಿಂಗ್ ಆಪರೇಷನ್‌ಗೆ ಬೆದರಿತಾ ಸರ್ಕಾರ..? :
ಇನ್ನು ಪವರ್ ಟಿವಿಯ ಪವರ್ ಫುಲ್ ಸ್ಟಿಂಗ್ ಆಪರೇಷನ್‌ಗಳಿಗೆ ಸರ್ಕಾರ ಬೆದರಿದೆ ಅನ್ನೋದು ಸಾಬೀತಾದಂತಾಗಿದೆ. ಸರ್ಕಾರಿ ಕಚೇರಿಗಳ ಕರ್ಮಾಕಾಂಡವನ್ನ ಪವರ್ ಟಿವಿ ಬಯಲಿಗೆಳೆಯುತ್ತಿದೆ. ಪವರ್ ಟಿವಿಯ ಸ್ಟಿಂಗ್ ಆಪರೇಷನ್‌ಗಳಿಗೆ ಲೂಟಿಕೋರರು ಬೆಚ್ಚಿಬಿದ್ದಿದ್ದಾರೆ. ದೊಡ್ಡ ದೊಡ್ಡ ಭ್ರಷ್ಟ ತಿಮಿಂಗಿಲಗಳಿಗೆ ನಡುಕ ಶುರುವಾಗಿದೆ. ಹೀಗಾಗಿಯೇ ಈ ರೀತಿಯ ವಿಚಿತ್ರ ಆದೇಶ ಹೊರಡಿಸುವ ಮೂಲಕ ನುಂಗುಬಾಕರ ಪರ ಸರ್ಕಾರ ನಿಂತಂತೆ ಕಾಣಿಸುತ್ತಿದೆ.
ಭ್ರಷ್ಟರನ್ನು ಹಿಡಿದುಕೊಡಿ ಎನ್ನುತ್ತಿದೆ ಆಪ್ ಸರ್ಕಾರ
ಭ್ರಷ್ಟರ ರಕ್ಷಣೆಗೆ ನಾವು ಇದ್ದೀವಿ ಎಂದ ಬಿಜೆಪಿ ಸರ್ಕಾರ
ಇನ್ನು ಭ್ರಷ್ಟಾಚಾರಿಗಳಿಗೆ ಎಡೆಮುರಿ ಕಟ್ಟಲು ಪಂಜಾಬ್ ಹಾಗೂ ದೆಹಲಿಯಲ್ಲಿ ಆಪ್ ಸರ್ಕಾರ ಮುಂದಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಯಾರಾದರೂ ಲಂಚ ಕೇಳಿದ್ರೆ, ಅಧಿಕಾರಿಗಳ ಆಡಿಯೋ, ವಿಡಿಯೋ ರೆಕಾರ್ಡ್ ಮಾಡಿ ಹೆಲ್ಪ್ ಲೈನ್ ಗೆ ಕರೆ ಮಾಡಿ ಎಂದಿದೆ. ಆದ್ರೆ ಇದಕ್ಕೆ ವಿರುದ್ಧವಾಗಿ ಕರ್ನಾಟಕದ ಬಿಜೆಪಿ ಸರ್ಕಾರ, ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡಬಾರದೆಂದು ವಿಚಿತ್ರ ಆದೇಶ ಹೊರಡಿಸಿದೆ.
ಇನ್ನು ಸರ್ಕಾರದ ಎಡವಟ್ ಆದೇಶವನ್ನು ವಾಪಸ್ ಪಡೆದುಕೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದೆ.ಒಟ್ಟಾರೆ, ಭ್ರಷ್ಟರಿಗೆ ಸಿಂಹ ಸ್ವಪ್ನವಾಗಬೇಕಿದ್ದ ಬಿಜೆಪಿ ಸರ್ಕಾರ, ಭ್ರಷ್ಟಚಾರಿಗಳಿಗೆ ರೆಡ್ ಕಾರ್ಪೆಡ್ ಹಾಸಲು ಮುಂದಾಗಿರೋದು ವಿರ್ಪಯಾಸ.
ಗೋವಿಂದ್,ಪೊಲಿಟಿಕಲ್ ಬ್ಯುರೋ,ಪವರ್ ಟಿವಿ