ಬಳ್ಳಾರಿ: ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂಪ್ಲಿ- ಗಂಗಾವತಿ ಸೇತುವೆ ನಿರ್ಮಾಣ ಆಗ್ಬೇಕು ಅನ್ನೋದು ದಶಕಗಳ ಬೇಡಿಕೆ ಇದೆ. ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಸ್ಥಳೀಯ ಮುಖಂಡರು ಸೇತುವೆ ನಿರ್ಮಾಣಕ್ಕೆ ಸಿಎಂಗೆ ಒತ್ತಾಯಿಸಿದ್ರು. ಸಿಎಂ ಬಸವರಾಜ ಬೊಮ್ಮಾಯಿ ಇದಕ್ಕೆ ಸ್ಪಂದಿಸಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೆ 79 ಕೋಟಿ ಮಂಜೂರು ಮಾಡಿದ್ದಾರೆ ಎಂದರು.
ಇನ್ನು, ಸೇತುವೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಆದರೆ ಸ್ಥಳೀಯ ಶಾಸಕ ಜೆಎನ್ ಗಣೇಶ್ ತಿಳುವಳಿಕೆ ಇಲ್ಲದೇ ಮಾತನಾಡುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸಹಕಾರ ಮಾಡ್ಬೇಕು. ಹೊಸ ಸೇತುವೆ ನಿರ್ಮಾಣದ ಮೂಲಕ ಶಾಶ್ವತ ವ್ಯವಸ್ಥೆ ಕಲ್ಪಿಸುತ್ತೇವೆ. ಕಂಪ್ಲಿ ಕೋಟೆ ಪ್ರದೇಶದ ಕೆಲ ಕುಟುಂಬಗಳು ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಎದುರಿಸುತ್ತಾರೆ. ಆ ಕುಟುಂಬಗಳಿಗೆ ಬೇರೆಡೆ ಶಿಫ್ಟ್ ಮಾಡಿ ಅವರಿಗೆ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸುತ್ತೇವೆ ಎಂದು ಹೇಳಿದರು.