Thursday, April 18, 2024

ಕೃಷಿ ಸಚಿವರ ಜಿಲ್ಲೆಯ ಹಲವೆಡೆ ಗೊಬ್ಬರಕ್ಕೆ ಹಾಹಾಕಾರ; ರೈತರ ಪರದಾಟ

ಹಾವೇರಿ: ಗೊಬ್ಬರಕ್ಕಾಗಿ ಹಾವೇರಿಯಲ್ಲಿ ಗೋಲಿಬಾರ್ ನಡೆದು ಬರೋಬ್ಬರಿ 14 ವರ್ಷಗಳು ಕಳೆದಿದೆ. ಆದ್ರೆ ಗೊಬ್ಬರದ ಸಮಸ್ಯೆ ಮಾತ್ರ ಹಾಗೆ ಇದೆ. ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಹಾಹಾಕಾರ ಶುರುವಾಗಿದ್ದು, ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಅಂದು ಗೊಬ್ಬರಕ್ಕಾಗಿ ಬೀದಿಗಿಳಿದಿದ್ದ ರೈತರ ಮೇಲೆ ಹಾವೇರಿಯಲ್ಲಿ ಪೊಲೀಸರು ಗೋಲಿಬಾರ್ ನಡೆಸಿದ್ದರು. ಗೋಲಿಬಾರ್​ನಲ್ಲಿ ಇಬ್ಬರು ರೈತರು ಪ್ರಾಣ ಕಳೆದುಕೊಂಡಿದ್ರು. ಈ ಘಟನೆ ನಡೆದು 14 ವರ್ಷ ಕಳೆದ್ರು ಹಾವೇರಿ ಜಿಲ್ಲೆಯಲ್ಲಿ ಇನ್ನೂ ಗೊಬ್ಬರಕ್ಕಾಗಿ ರೈತರು ಅಲೆದಾಡುವುದು ತಪ್ಪಿಲ್ಲ. ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿ ಮಾಡಿ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ‌ಅಲ್ಲಲ್ಲಿ ಗೊಬ್ಬರಕ್ಕಾಗಿ ರೈತರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಯೂರಿಯಾ ಬದಲಿಗೆ ಬೇರೆ ಗೊಬ್ಬರ ಖರೀದಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಮೂರು ಚೀಲ ಯೂರಿಯಾ ತಗೊಂಡ್ರೆ ಬೇರೆ ಕಂಪನಿಯ ಮತ್ತೊಂದು ಚೀಲ ಗೊಬ್ಬರವನ್ನ ರೈತರು ಹೆಚ್ಚಿನ ದರ ನೀಡಿ ಖರೀದಿ ಮಾಡಬೇಕು. ಇಲ್ಲದಿದ್ರೆ ಗೊಬ್ಬರ ಕೊಡಲ್ಲ ಅಂತಿದಾರೆ.

ಹಾವೇರಿ ಜಿಲ್ಲೆಗೆ 58,498 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬೇಕಂತ ಅಂದಾಜು ಮಾಡಲಾಗಿದ್ದು, ಈಗಾಗಲೇ ಜಿಲ್ಲೆಗೆ 30,910 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಸಪ್ಲೈ ಮಾಡಲಾಗಿದ್ದು, 12,870 ಮೆಟ್ರಿಕ್ ಟನ್ ಹಂಚಿಕೆ ಮಾಡಲಾಗಿದೆ. ಇನ್ನೂ 18,040 ಮೆಟ್ರಿಕ್ ಟನ್ ಸ್ಟಾಕ್ ಇದೆ ಎನ್ನುತ್ತೆ ಕೃಷಿ ಇಲಾಖೆಯ ಅಂಕಿ‌ಸಂಖ್ಯೆಗಳು.‌ ಆದ್ರೆ ವಾಸ್ತವದಲ್ಲಿ ಮಾತ್ರ ರೈತರಿಗೆ ಯೂರಿಯಾ ಗೊಬ್ಬರ ಸಿಗ್ತಿಲ್ಲ. ಬೇರೆ ಕಂಪನಿಯ ಗೊಬ್ಬರವನ್ನ ಖರೀದಿಸುವಂತೆ ಒತ್ತಾಯ ಮಾಡ್ತಿರೋದು ಯಾಕೆ ಎನ್ನೋದು ರೈತರ ಪ್ರಶ್ನೆ ?

ಒಂದೆಡೆ ಯೂರಿಯಾ ಗೊಬ್ಬರ ಸಿಗದೆ ರೈತರು ಪರದಾಡ್ತಿದ್ರೆ ಜಿಲ್ಲಾಡಳಿತ ಮಾತ್ರ ನಮ್ಮ ಬಳಿ ಸ್ಟಾಕ್ ಇದೆ ಎನ್ನುತ್ತಿದೆ. ಆದ್ರೆ ಕೃಷಿ ಸಚಿವರ ತವರು ಜಿಲ್ಲೆಯಲ್ಲಿಯೇ ಕೃತಕ ಗೊಬ್ಬರದ ಅಭಾವ ಸೃಷ್ಟಿ ಮಾಡುತ್ತಿರುವ ವ್ಯಾಪಾರಸ್ಥರ ಮೇಲೆ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.

ವೀರೇಶ ಬಾರ್ಕಿ, ಪವರ್ ಟಿವಿ ಹಾವೇರಿ

RELATED ARTICLES

Related Articles

TRENDING ARTICLES