Saturday, April 20, 2024

ಫಕೀರನಾಗಿ ವಿಕ್ರಾಂತ್ ರೋಣ ಹಳ್ಳಿ-ಹಳ್ಳಿ ಅಲೆದಾಟ

ಇಡೀ ಭಾರತೀಯ ಚಿತ್ರರಂಗವೇ ತುದಿಗಾಲಲ್ಲಿ ಕಾಯುತ್ತಿರೋ ಸಿನಿಮಾ ವಿಕ್ರಾಂತ್​ ರೋಣ. 3ಡಿ ವರ್ಷನ್​​ನಲ್ಲಿ​​ ಕಮಾಲ್ ಮಾಡೋಕೆ ರಾ.ರಾ.ರಕ್ಕಮ್ಮ ರೆಡಿಯಾಗಿದ್ದಾಳೆ. ರಕ್ಕಮ್ಮನ ಕಿಕ್ಕಿನ ಮತ್ತಿನಲ್ಲಿ ಕಳೆದು ಹೋಗಿದ್ದ ಪ್ರೇಕ್ಷಕರು, ರಾಜಕುಮಾರಿ ಮೆಲೋಡಿ ಟ್ಯೂನ್​ಗೆ ಇಂಪ್ರೆಸ್​​ ಆಗಿದ್ದರು. ಇದೀಗ ಅಲೆಮಾರಿ ಫಕೀರನಾಗಿ ವಿಕ್ರಾಂತ್​ ರೋಣ ಎಂಟ್ರಿ ಕೊಟ್ಟಿದ್ದಾನೆ. ಹಳ್ಳಿಮುಕ್ಕನ ಹೊಸ ಹಾಡು ಹೇಗಿದೆ ಗೊತ್ತಾ..?

ಫಕೀರನಾಗಿ ವಿಕ್ರಾಂತ್ ರೋಣ ಹಳ್ಳಿ- ಹಳ್ಳಿ ಅಲೆದಾಟ..!

ಅಮ್ಮನ ಹುಡುಕಿ ಹೊರಟ ಹಳ್ಳಿಮುಕ್ಕನ ಸಾಂಗ್​ ವೈರಲ್​​​

ನಿನ್ನ ಗೂಡಿಗೆ ಬೇಗ ಬಾ ಎಂದು ಅಮ್ಮನ ಅಳಲು..!

ಸಂಚಿತ್​ ಹೆಗಡೆ ಮಧುರ ದನಿಯಲ್ಲಿ ಸಾಂಗ್​ ಹಿಟ್​​​

ಸದ್ಯ ಬಜಾರಲ್ಲಿ ಚಾಲ್ತಿಯಲ್ಲಿರೋದು ಒಂದೇ ಹೆಸರು, ವಿಕ್ರಾಂತ್​ ರೋಣ. ಯೆಸ್​​​.. ರೋಣನ ಆರ್ಭಟ ಮುಗಿಲು ಮುಟ್ಟಿದೆ. ಗುಮ್ಮ ಬೆಚ್ಚಿ ಬೆವರಿಳಿಸೋಕೆ ಸಜ್ಜಾಗಿ ನಿಂತಿದ್ದಾನೆ. ಯಾವುದೋ ನಿಗೂಢ ಜಗತ್ತಿಗೆ ನಿಮ್ಮನ್ನೆಲ್ಲಾ ಕರೆದುಕೊಂಡು ಹೋಗೋಕೆ ಇಡೀ ಚಿತ್ರತಂಡ ಪ್ಲಾನ್​​ ಮಾಡಿಕೊಂಡಿದೆ. ಹಾರರ್​​​​ ಥ್ರಿಲ್ಲರ್​ ಸಿನಿಮಾ ಇದಾಗಿದ್ದು ಕ್ಷಣಕ್ಷಣಕ್ಕೂ ಮೈನವಿರೇಳಿಸುವ ಮಹಾದೃಶ್ಯಕಾವ್ಯದ ಅನಾವರಣವಾಗಲಿದೆ.

ವಿಕ್ರಾಂತ್​ ರೋಣದ ಸ್ಪೆಷಲ್ ಅಪ್​ಡೇಟ್​​ ಬಗ್ಗೆ ಕೂತೂಹಲದಿಂದ ಎದುರು ನೋಡ್ತಿದ್ದ ಫ್ಯಾನ್ಸ್​​ಗಳಿಗೆ ಮತ್ತೊಂದು ಲಡ್ಡು ಬಂದು ಬಾಯಿಗೆ ಬಿದ್ದಿದೆ. ರಕ್ಕಮ್ಮನ ಗುಂಗಿನಲ್ಲಿ ತೇಲ್ತಾ ಇರೋ ಅಭಿಮಾನಿಗಳನ್ನು, ಅಮ್ಮನ ಜೋಗುಳದಲ್ಲಿ ತಣ್ಣಗೆ ಮಲಗಿಸಿದ್ದ ವಿಕ್ರಾಂತ್​ ರೋಣ, ಸಖತ್​ ಹೈಪ್​​ ಕ್ರಿಯೇಟ್​ ಮಾಡಿತ್ತು. ಇದೀಗ ಹಳ್ಳಿಮುಕ್ಕನಾಗಿ ಫಕೀರನ ರೀತಿ ಅಲೆದಾಟದ ಹಾಡು ರಿಲೀಸ್​ ಆಗಿದೆ. ಅಂಕುಡೊಂಕಿನ ಫಕೀರ ಲಿರಿಕಲ್​​ ಸಾಂಗ್​ ಧೂಳೆಬ್ಬಿಸ್ತಾ ಇದ್ದು, ಅಮ್ಮ, ಮಗನಿಗಾಗಿ ಕಾದು ಕುಳಿತ ವಾತ್ಸಲ್ಯದ ದೃಶ್ಯವಿದೆ.

ಅಂಕು ಡೊಂಕು ದಾರಿಯಲ್ಲಿ ಅಮ್ಮನ ನೋಡೋಕೆ ನಿರೂಪ್​ ಭಂಡಾರಿ ಬರ್ತಾ ಇದ್ದಾರೆ. ಇತ್ತ ಹಾಡಿನಲ್ಲಿ ಅಮ್ಮ ಮಗನನ್ನು ನೋಡಲು ಶಬರಿಯಂತೆ ಕಾದು ಕುಳಿತಿದ್ದಾಳೆ. ಇದು ನಿನ್ನದೇ ಗೂಡು ದಯವಿಟ್ಟು ಬೇಗ ಬಾ ಎಂದು ಅಂಗಲಾಚ್ತಿದ್ದಾಳೆ. ಅಮ್ಮನ ನೋಡೋ ಖುಷಿಯಲ್ಲಿ, ಕಚ್ಚಾ ರಸ್ತೆಯಲ್ಲಿ, ಜೀಪ್​ ಮೇಲೇರಿ, ಹೊಲ ಗದ್ದೆಗಳ ನಡುವೆ ಸಖತ್​ ಜೋಶ್​ನಲ್ಲಿ ಓಡೋಡಿ ಬರ್ತಿದ್ದಾರೆ ನಿರೂಪ್​ ಭಂಡಾರಿ.

ಅಜನೀಶ್​ ಲೋಕನಾಥ್​​ ಮ್ಯೂಸಿಕ್​ ಕಂಪೋಸಿಂಗ್​​ಗೆ 100 % ಮಾರ್ಕ್ಸ್​​ ಕೊಟ್ಟಿರೋ ಅಬಿಮಾನಿಗಳು ಈ ಹಾಡಿನ ಗುಂಗಲ್ಲಿದ್ದಾರೆ. ಈ ಫಕೀರ ಹಾಡಿಗೆ ಅನೂಪ್​ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಸಂಚಿತ್​ ಹೆಗಡೆ, ಚಿನ್ಮಯಿ ಶ್ರೀಪಾದ, ಅನೂಪ್​, ಅಜನೀಶ್​ ಹಿನ್ನೆಲೆ ಗಾಯನವಿದೆ. ಲಾಲಿ ಹಾಡಿನ ನಂತ್ರ ಹೇ ಫಕೀರಾ ಸಿಕ್ಕಾಪಟ್ಟೆ ವೀವ್ಸ್ ಪಡೆದುಕೊಂಡು ದಾಖಲೆ ಬರಿತಿದೆ.

ಜಾಕ್​ ಮಂಜು ನಿರ್ಮಾಣದಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ವಿಕ್ರಾಂತ್​ ರೋಣ ಫ್ಯಾಂಟಸಿ ಜಗತ್ತನ್ನು ತೆರೆದಿಡಲಿದೆ. ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಮೊದಲ ಬಾರಿಗೆ ಒಟ್ಟು ಆರು ಭಾಷೆಗಳಲ್ಲಿ ಸಂಚಲನ ಮೂಡಿಸಲಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಟ್ಟಿದ್ದಾರೆ. ಟ್ರೈಲರ್​ ನೋಡಿದವ್ರು ಕ್ಲೀನ್​ ಬೋಲ್ಡ್​ ಆಗಿದ್ದು, ಜುಲೈ 28ಕ್ಕೆ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ನಿದ್ದೆ ಬಿಟ್ಟು ಕಾಯ್ತಿದ್ದಾರೆ. ಸದ್ಯ ಫಕೀರನ ಆಲಾಪನೆಯಲ್ಲಿ ಅಭಿಮಾನಿಗಳು ಮುಳುಗಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES