Friday, April 19, 2024

ತಾಯಿಯ ಶವ ಮನೆಯಲ್ಲಿದ್ದರೂ, ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದ ಯುವತಿ

ಶಿವಮೊಗ್ಗ : ಅನಾರೋಗ್ಯದಿಂದ ಸಾವನ್ನಪ್ಪಿದ ತಾಯಿಯ ಶವ ಮನೆಯಲ್ಲಿದ್ದರೂ ನೋವಿನಲ್ಲೇ ವಿದ್ಯಾರ್ಥಿನಿಯೊಬ್ಬಳು ಪ್ರವೇಶ ಪರೀಕ್ಷೆ ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆಯ ಕೋಡೂರು ಗ್ರಾಪಂ ವ್ಯಾಪ್ತಿಯ ಶಾಂತಪುರ ಗ್ರಾಮದ ನಾಗರಾಜ್ ಎಂಬುವರ ಪತ್ನಿ ಅನುರಾಧ (45) ಎಂಬ ಮಹಿಳೆ ಸೋಮವಾರ ತೀವ್ರ ರಕ್ತದೊತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದರು.

ಸೋಮವಾರ ಮೃತ ಮಹಿಳೆಯ ಶವವನ್ನು ಮನೆಗೆ ತರಲಾಯಿತು ಆದರೆ ಮಂಗಳವಾರ ಮೃತ ಮಹಿಳೆ ಅನುರಾಧ ರವರ ಮಗಳು ಸ್ಫೂರ್ತಿ (18) ಎಂಬ ಯುವತಿ BSC ಕೃಷಿ ಪದವಿಗೆ ಕೃಷಿ ಕೋಟಾದಲ್ಲಿ ಪ್ರವೇಶ ಪಡೆಯಲು ಪ್ರಾಯೋಗಿಕ ಪರೀಕ್ಷೆ ಇತ್ತು. ಅಮ್ಮನ ಶವ ಮನೆಯಲ್ಲಿದ್ದರೂ ಹಿರಿಯರ ಮನವೊಪ್ಪಿಸಿ, ನೋವಿನಲ್ಲೇ ಪರೀಕ್ಷೆ ಬರೆದು ಬಳಿಕ ಮನೆಗೆ ಬಂದ ನಂತರ ಅಮ್ಮನ ಶವ ಸಂಸ್ಕಾರವನ್ನು ನೆರವೇರಿಸಲಾಯಿತು.

ಯುವತಿ ಸ್ಪೂರ್ತಿ ಮಹೇಶ್ ಪಿಯು ಕಾಲೇಜಿನಲ್ಲಿ ಶೇ. 90 ಅಂಕ ಪಡೆದು ಸಿಇಟಿ ಬರೆದಿದ್ದಾಳೆ. BSC ಕೃಷಿ ಪದವಿ ಮಾಡುವ ಕನಸು ಹೊಂದಿದ್ದ ಈಕೆ ಇಂತಹ ನೋವಿನ ಸಂದರ್ಭದಲ್ಲೂ ಪರೀಕ್ಷೆ ಬರೆಯುವ ಮೂಲಕ ಹಲವರಿಗೆ ಮಾದರಿಯಾಗಿದ್ದಾಳೆ. ಇವಳ ಕುಟುಂಬದ ದುಃಖದ ನಡುವೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಗ್ರಾಮಸ್ಥರಿಂದ ಹಾಗೂ ಸಾರ್ವಜನಿಕರಿಂದ ಪ್ರಶಂಸೆಯ ಮಾತುಗಳ ಮಹಾಪೂರವೇ ಹರಿದು ಬಂದಿದೆ.

RELATED ARTICLES

Related Articles

TRENDING ARTICLES