Friday, March 29, 2024

2022ರಲ್ಲಿ ಆಕ್ಸ್‌ಫರ್ಡ್ ನಿಘಂಟಿಗೆ ಸೇರಿದ ಹೊಸ ಪದಗಳು ಯಾವುವು ಗೊತ್ತಾ?

ಪ್ರತಿ ವರ್ಷ , ಜನಪ್ರಿಯ ಸಂಸ್ಕೃತಿ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳು ಮತ್ತು ಪ್ರಪಂಚದಾದ್ಯಂತದ ತಂತ್ರಜ್ಞಾನದಲ್ಲಿನ ಆವಿಷ್ಕಾರಗಳ ಆಧಾರದ ಮೇಲೆ ಆಕ್ಸ್‌ಫರ್ಡ್ ನಿಘಂಟಿಗೆ ಹೊಸ ಇಂಗ್ಲಿಷ್ ಪದಗಳನ್ನು ಸೇರಿಸಲಾಗುತ್ತಿದೆ. ಹಾಗೆ ಕಾಲಾನಂತರದಲ್ಲಿ ನಾವು ನಮ್ಮ ಶಬ್ದಕೋಶದಲ್ಲಿ ಆ ಹೊಸ ಪದಗಳನ್ನು ಬಳಸಬೇಕಾಗುತ್ತದೆ. ಹಾಗಾದರೆ 2022 ರಲ್ಲಿ ಟ್ರೆಂಡಿಂಗ್ ಆಗಿರುವ ಹೊಸ ಶಬ್ದಗಳು ಯಾವುವು ಗೊತ್ತಾ?

ನೋಮೋಫೋಬಿಯಾ (Nomophobia): ಮೊಬೈಲ್ ಫೋನ್ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಭಯ.

ಶೇರಂಟ್​ (SHARENT): ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಮಕ್ಕಳೊಂದಿಗೆ ನಿಯಮಿತವಾಗಿ ಮಾಹಿತಿಯನ್ನು ಹಂಚಿಕೊಳ್ಳುವ ಪೋಷಕರನ್ನು ಶೇರರ್​ ಎಂದು ಕರೆಯಲಾಗುತ್ತದೆ. ಶೇರರ್ ಮತ್ತು ಪೋಷಕ ಸೇರಿದರೆ ಶೇರಂಟ್ ಆಗುತ್ತಾರೆ.

ಫಿನ್‌ಫ್ಲುಯೆನ್ಸರ್ (FINFLUENCER): ಹಣಕಾಸು ಸಂಬಂಧಿತ ವಿಷಯಗಳ ಮೇಲೆ ಪ್ರಭಾವ ಬೀರುವಂಥವನ್ನು ಫಿನ್‌ಫ್ಲುಯೆನ್ಸರ್ ಎಂದು ಕರೆಯುತ್ತಾರೆ.

ಫಿಟ್‌ಸ್ಪಿರೇಶನ್ (FITSPIRATION): ಆರೋಗ್ಯವನ್ನು ಸುಧಾರಿಸುವ ಬಗ್ಗೆ ಅಥವಾ ಫಿಟ್ನೆಸ್ ಬಗ್ಗೆ ಅಥವಾ ಅದರ ಬಗ್ಗೆ ಕಲಿಯುವ ವ್ಯಕ್ತಿ ಅಥವಾ ವಸ್ತುವಿನ ಕುರಿತು ಹೇಳುವಾಗ ಫಿಟ್‌ಸ್ಪಿರೇಷನ್ ಎಂಬ ಪದವನ್ನು ಬಳಸಲಾಗುತ್ತದೆ. ಫಿಟ್ನೆಸ್ ಮತ್ತು ಇನ್ಸಪಿರೇಶನ್ ಪದಗಳಿಂದ ಫಿಟ್‌ಸ್ಪಿರೇಷನ್ ರೂಪುಗೊಂಡಿದೆ.

ಸ್ಟಾನ್ (STAN): ಸೆಲೆಬ್ರಿಟಿಗಳ ಬಗ್ಗೆ ಭಾವೋದ್ರಿಕ್ತನಾಗಿರುವ ವ್ಯಕ್ತಿಯನ್ನು ಸ್ಟಾನ್ ಎನ್ನಲಾಗುತ್ತದೆ.

ಆಸಮೆಸಾಸ್ (AWESOMESAUCE): ಅದ್ಭುತ ಎನ್ನುವುದಕ್ಕಿಂತ ಹೆಚ್ಚಿನದನ್ನು ಅರ್ಥೈಸಲು ಈ ಪದವನ್ನು ಬಳಸಲಾಗುತ್ತದೆ.

ಲೋ-ಕೀ (LOW-KEY): ಯಾವುದೋ ಒಂದು ವಿಷಯವನ್ನು ಇತರರಿಗೆ ಸ್ಪಷ್ಟವಾಗಿ ಹೇಳಬಾರದು ಎಂಬುದನ್ನು ಸೂಚಿಸಲು ವಿಶೇಷಣವಾಗಿ ಬಳಸಲಾಗುತ್ತದೆ. ಅಲ್ಲದೆ, ತಮ್ಮ ಬಗ್ಗೆ ಹೆಮ್ಮೆಪಡಲು ಇಷ್ಟಪಡದ ಜನರ ಬಗ್ಗೆ ಮಾತನಾಡುವಾಗ ಈ ಪದವನ್ನು ಬಳಸಬಹುದು.

ಹ್ಯಾಂಗ್ರಿ (HANGRY): ಈ ಪದವನ್ನು ಹಸಿವಿನಿಂದ ಉಂಟಾಗುವ ಕೋಪ ಮತ್ತು ಹತಾಶೆ ವಿವರಿಸಲು ಬಳಸಲಾಗುತ್ತದೆ.

ಮೆಟಾವರ್ಸ್ (METAVERSE): ಮೆಟಾವರ್ಸ್ ಎಂಬುದು ಒಂದು ವರ್ಚುಯಲ್ ವಿಧಾನವಾಗಿದೆ. ಇದು ಎಲ್ಲ ಬಳಕೆದಾರರನ್ನು ಕಂಪ್ಯೂಟರ್‌ನಲ್ಲಿ ವಾಸ್ತವಿಕವಾಗಿ ಭೇಟಿಯಾಗಲು ಮತ್ತು ಡಿಜಿಟಲ್ ಅವತಾರಗಳೊಂದಿಗೆ ಪರಸ್ಪರ ಸಂವಹನ ನಡೆಸಲು ಅನುಕೂಲ ಕಲ್ಪಿಸುತ್ತದೆ.

ಸಿಚುವೇಶನ್​ಶಿಪ್ (SITUATIONSHIP): ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧವು ಸ್ನೇಹ ಸಂಬಂಧಕ್ಕಿಂತ ಹೆಚ್ಚು ಮತ್ತು ದಂಪತಿಗಳಿಗಿಂತ ಕಡಿಮೆ ಎಂದು ಹೇಳಲು ಈ ಪದವನ್ನು ಬಳಸಲಾಗುತ್ತದೆ.

RELATED ARTICLES

Related Articles

TRENDING ARTICLES