Thursday, December 19, 2024

IND vs ENG 1st ODI : ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು

ಲಂಡನ್‌: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ 10 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 1–0 ಮುನ್ನಡೆ ಸಾಧಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ ತಂಡ 25.2 ಓವರ್‌ಗಳಲ್ಲಿ 110 ರನ್‌ಗಳಿಗೆ ಸರ್ವಪತನ ಕಂಡಿತ್ತು.

ರೋಹಿತ್ ಶರ್ಮಾ 58 ಬಾಲ್‌ಗಳಿಗೆ 76 ರನ್ ಹೊಡೆದರೆ, ಶಿಕರ್ ದವನ್ 54 ಬಾಲ್‌ಗಳಿಗೆ 31 ರನ್ ಹೊಡೆದು ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವಿನ ದಡ ಮುಟ್ಟಿದರು.

ಇದಕ್ಕೂ ಮೊದಲು ಜೇಸನ್‌ ರಾಯ್‌ ಶೂನ್ಯಕ್ಕೆ ಔಟ್‌ ಆಗುವ ಮೂಲಕ ಇಂಗ್ಲೆಂಡ್‌ ಆರಂಭಿಕ ಆಘಾತ ಅನುಭವಿಸಿತು. ನಂತರ ಬಂದ ಜೋ ರೂಟ್‌, ಬೆನ್‌ಸ್ಟೋಕ್ಸ್‌ ಕೂಡ ಶೂನ್ಯ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್‌ ಸಂಕಷ್ಟಕ್ಕೆ ತುತ್ತಾಯಿತು. ಜೋಸ್‌ ಬಟ್ಲರ್‌ (30), ಡೇವಿಡ್‌ ವಿಲ್ಲಿ (21) ನಿಧಾನವಾಗಿ ರನ್‌ ಗಳಿಸಲಾರಂಭಿಸಿದರಾದರೂ, ಭಾರತದ ಬೌಲರ್‌ಗಳ ಪಾರಮ್ಯದ ಮುಂದೆ ಇಂಗ್ಲೆಂಡ್‌ ಮಂಕಾಯಿತು.

ಅಂತಿಮವಾಗಿ 25.2 ಓವರ್‌ಗಳಲ್ಲಿ 110ಕ್ಕೆ ಇಂಗ್ಲೆಂಡ್‌ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಪರ ಜಸ್ಪ್ರಿತ್‌ ಬೂಮ್ರಾ 6 ವಿಕೆಟ್‌ ಗಳಿಸಿ ಮಿಂಚಿದರು. ಮೊಹಮದ್‌ ಶಮಿ 3 ವಿಕೆಟ್‌ ಪಡೆದರೆ, ಪ್ರಸಿದ್ಧ ಕೃಷ್ಣ ಒಂದು ವಿಕೆಟ್‌ ಪಡೆದರು.

RELATED ARTICLES

Related Articles

TRENDING ARTICLES