Wednesday, January 22, 2025

ಸಿದ್ದರಾಮಯ್ಯ & ಡಿಕೆಶಿ ತಿರುಕನ ಕನಸು ಕಾಣುತ್ತಿದ್ದಾರೆ: ಸಿ.ಟಿ ರವಿ

ಕೋಲಾರ: ಗೋವಾ ಕಾಂಗ್ರೆಸ್‌ನ 12 ಶಾಸಕರು ಗಂಟು‌ಮೂಟೆ ಕಟ್ಟಿಕೊಂಡು ಹೊರಬರಲು ತಯಾರಾಗಿದ್ದಾರೆ. ಕರ್ನಾಟಕದಲ್ಲೂ ಹಲವರು ಸಂಪರ್ಕದಲ್ಲಿದ್ದು, ಟೆಂಟ್‌ ಸಮೇತ ಕಿತ್ತುಕೊಂಡು ಬರಲಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಅವರ ಬೆಂಬಲಿಗರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ‌ದ ಅವರು, ‌ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಗೂಟ ಇಟ್ಟುಕೊಂಡು ಬಡಿದಾಡಬೇಕು ಅಷ್ಟೆ ಎಂದು ಹೇಳಿದರು.

‘ರಾಜ್ಯದಲ್ಲೂ ರಾಜಕೀಯ ಧ್ರುವೀಕರಣ ನಡೆಯಲಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ತಿರುಕನ ಕನಸು ಕಾಣುತ್ತಿದ್ದು, ಎಂದೂ ನನಸು ಆಗುವುದಿಲ್ಲ. ಈಗಲೇ ಆ ಇಬ್ಬರ ನಡುವೆ ಸಿ.ಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ’ ಎಂದರು.

‘ಬಿಜೆಪಿ ಕಾರ್ಯಕರ್ತರು ಮುಂದಿನ ಚುನಾವಣೆವರೆಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಬೇಕು; ಹೊಟ್ಟೆಗಲ್ಲ’ ಎಂದು ಅವರು ಇದೇ ಸಂದರ್ಭದಲ್ಲಿ ಚಟಾಕಿ ಹಾರಿಸಿದರು.

RELATED ARTICLES

Related Articles

TRENDING ARTICLES