Sunday, January 19, 2025

ಇಂಡಸ್ಟ್ರಿಯಿಂದ ದೂರ ಇದ್ದಿದ್ಯಾಕೆ ಗೊತ್ತಾ ಟಗರು ಪುಟ್ಟಿ ?

ಕೆಂಡಸಂಪಿಗೆ ಸಿನಿಮಾ ಮೂಲಕ ಕನ್ನಡಿಗರ ಎದೆಯಲ್ಲಿ ಕಂಪು ಬೀರಿದ ನಟಿ ಮಾನ್ವಿತಾ. ಟಗರು ಪುಟ್ಟಿ ಎಂದೇ ಖ್ಯಾತಿ ಪಡೆದಿರೋ ನಟಿ ಮಾನ್ವಿತಾ, ಚಿತ್ರರಂಗದಿಂದ ಸ್ವಲ್ಪ ದೂರ ಸರಿದಿದ್ರು. ಸಾಕಪ್ಪಾ ಸಿನಿಮಾ ಸಹವಾಸ ಅಂತಾ, ಬೇರೆ ಕ್ಷೇತ್ರದಲ್ಲಿ ಬ್ಯುಸಿ ಆಗ್ಬಿಟ್ರಾ ಅಂದುಕೊಂಡವ್ರಿಗೆ ಮಾನ್ವಿತಾ ಉತ್ತರ ಕೊಟ್ಟಿದ್ದಾರೆ. ಗ್ಯಾಪ್​​ನ ಗುಟ್ಟನ್ನು ಗ್ಯಾಪ್ ಇಲ್ಲದೆ ಹೇಳಿಕೊಂಡಿದ್ದಾರೆ.

ಇಂಡಸ್ಟ್ರಿಯಿಂದ ದೂರ ಇದ್ದಿದ್ಯಾಕೆ ಗೊತ್ತಾ ಟಗರು ಪುಟ್ಟಿ ?

ತಾಯಿ ಮಾತು ಉಳಿಸಿಕೊಳ್ಳೋಕೆ ನಟಿ ಮಾನ್ವಿತಾ ಪಣ..!

ಬಣ್ಣದ ಲೋಕವೇ ಹಾಗೆ ಇಲ್ಲಿ ಕೆಲವರು ಮಿಂಚಿ ಮರೆಯಾಗ್ತಾರೆ. ಇನ್ನು ಕೆಲವರು ತಮ್ಮ ಬೇರುಗಳನ್ನು ಆಳವಾಗಿ ಊರಿ ಇಲ್ಲೇ ಬದುಕು ಕಂಡುಕೊಳ್ತಾರೆ. ಹೋದವರೆಷ್ಟು, ಇ್ದದವರೆಷ್ಟು ಲೆಕ್ಕಕ್ಕೆ ಸಿಗೋದಿಲ್ಲ. ಆದ್ರೆ ನಟಿ ಮಾನ್ವಿತಾ ಬೆರಳೆಣಿಕೆಯ ಸಿನಿಮಾ ಮೂಲಕ ಕನ್ನಡಿಗರ ಹೃದಯ ಗೆದ್ದವರು. ಕೆಂಡಸಂಪಿಗೆ ಅವ್ರ ಸಿನಿಕರಿಯರ್​​​ನ ಚೊಚ್ಚಲ ಚಿತ್ರವಾಗಿತ್ತು. ಈ ಸಿನಿಮಾ ಹಿಟ್ ಆದ ನಂತ್ರ ಅವ್ರಿಗೆ ಸಿಕ್ಕಾಪಟ್ಟೆ ಸಿನಿಮಾಗಳ ಆಫರ್​ ಕೂಡ ಬಂದ್ವು.

ನಟಿ ಮಾನ್ವಿತಾ ಕಾಮತ್​​ ತಮ್ಮ ಅಭಿನಯದ ಜೊತೆಗೆ ವಿದ್ಯಾಭ್ಯಾಸವನ್ನು ಬಿಟ್ಟಿರಲಿಲ್ಲ. ಕೆಂಡಸಂಪಿಗೆ ನಂತ್ರ, ಚೌಕ, ಕನಕ, ಟಗರು, ತಾರಕಾಸುರ ಸಿನಿಮಾಗಳ ಮೂಲಕ ತಮ್ಮದೇ ವಿಭಿನ್ನ ಛಾಪು ಮೂಡಿಸಿದವ್ರು ಮಾನ್ವಿತಾ. ಹೆಚ್ಚು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ರು ಕೂಡ ಯಾಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿಲ್ಲ ಅನ್ನೋ ಅನುಮಾನ ಸಿನಿಪ್ರಿಯರಿಗೆ ಕಾಡಿತ್ತು. ಎಲ್ಲಿ ಸಿನಿಮಾ ತೊರೆದುಬಿಟ್ರಾ ಎಂದು ಆಪ್ತ ಅಭಿಮಾನಿ ಬಳಗ ಆತಂಕಗೊಂಡಿದ್ರು.

ಇದೀಗ ಮಾನ್ವಿತಾ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಇದಕ್ಕೆ ಉತ್ತರ ನೀಡಿದ್ದಾರೆ. ನಾನು ಓದಲ್ಲಿ ಮುಂದುವರೆಯಬೇಕು ಎಂಬುದು ನನ್ನ ಅಮ್ಮನ ಕನಸು. ಹಾಗಾಗಿ ನಾನು ತುಂಬಾ ಸಮಯ ಬ್ರೇಕ್​ ತೆಗೆದುಕೊಳ್ಳಬೇಕಾಗಿ ಬಂತು ಎಂದಿದ್ದಾರೆ. ಇದ್ರ ಜೊತೆಯಲ್ಲಿ ಅಂತರ ಕಾದುಕೊಂಡಿದ್ದಕ್ಕೆ ಸ್ಪಷ್ಠನೆ ಕೂಡ ಕೊಟ್ಟಿದ್ದಾರೆ.

ಮಾಸ್​ ಕಮ್ಯೂನಿಕೇಷನ್​​ನಲ್ಲಿ ಮಾನ್ವಿತಾ ಮಾಸ್ಟರ್​ ಡಿಗ್ರಿ ಪೂರೈಸಿದ್ದಾರೆ. ಡಿಸ್ಟಿಂಕ್ಷನ್​​ನಲ್ಲಿ ಪಾಸ್​ ಆಗೋ ಮೂಲಕ ಓದಿನಲ್ಲೂ ಮುಂದಿದ್ದಾರೆ. ಈ ಮೂಲಕ ತಾಯಿಯ ಕನಸು ನನಸು ಮಾಡಿದ್ದಾರೆ. ನನ್ನ ಬಳಿ ಇರುವ ಉಳಿತಾಯದ ಹಣದಲ್ಲಿಯೇ ಎಜುಕೇಷನ್​ ಮುಗಿಸಿದ್ದೇನೆ. ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ.  ಇಂದು ಪ್ರತಿಫಲ ಸಿಕ್ಕಿದೆ. ಇನ್ನು ಮುಂದೆ ಸಿನಿಮಾದ ಕಡೆಗೆ ನನ್ನ ಗಮನ ಕೊಡುತ್ತೇನೆ ಎಂದಿದ್ದಾರೆ. ಒಟ್ನಲ್ಲಿ ಸ್ಯಾಂಡಲ್​​ವುಡ್​ಗೆ ಮತ್ತೆ ಕಂಬ್ಯಾಕ್​ ಅಗೋ ಮೂಲಕ ಗುಡ್​​​ ನ್ಯೂಸ್​ ಕೊಟ್ಟಿದ್ದಾರೆ ನಟಿ ಮಾನ್ವಿತಾ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES